For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ 'ಪ್ರೇಮ' ಪುರಾಣಕ್ಕೆ 25 ವಸಂತಗಳು!

  By Harshitha
  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಗ್ರ್ಯಾಂಡಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದನ್ನ ನೀವು ನೋಡಿರ್ತೀರಾ. ಇದರ ಬೆನ್ನಲ್ಲೇ ಸಲ್ಮಾನ್ ಮತ್ತಷ್ಟು ಸಂಭ್ರಮ ಪಡುವುದಕ್ಕೆ ಇವತ್ತು ಒಂದು ಸ್ಪೆಷಲ್ ಇದೆ.

  ರಿಯಲ್ ಲೈಫ್ ನಲ್ಲಿ ಹಾಫ್ ಸೆಂಚುರಿ ದಡದಲ್ಲಿರುವ ಸಲ್ಮಾನ್ ಖಾನ್, ರೀಲ್ ಲೈಫ್ ನಲ್ಲಿ ಎಲ್ಲರ ಪ್ರೀತಿಯ 'ಪ್ರೇಮ್' ಆಗಿ ಸಿಲ್ವರ್ ಜ್ಯುಬಿಲಿ ಸಡಗರದಲ್ಲಿದ್ದಾರೆ. ಅರ್ಥಾತ್ ಬಾಲಿವುಡ್ ಬಾನಂಗಳಕ್ಕೆ ಸಲ್ಮಾನ್ 'ಹೀರೋ' ಆಗಿ ಎಂಟ್ರಿಕೊಟ್ಟು 25 ವರ್ಷಗಳು ಕಳೆದಿವೆ..!

  ಹೌದು, ಸಲ್ಮಾನ್ ಖಾನ್ 'ಹೀರೋ' ಆಗಿ ಅಭಿನಯಿಸಿದ ಮೊಟ್ಟ ಮೊದಲ ಸಿನಿಮಾ 'ಮೈನೇ ಪ್ಯಾರ್ ಕಿಯಾ' ಚಿತ್ರ ತೆರೆಕಂಡಿದ್ದು ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ. 1989, ಡಿಸೆಂಬರ್ 29 ರಂದು ತೆರೆಕಂಡ 'ಮೈನೇ ಪ್ಯಾರ್ ಕಿಯಾ' ಬಾಲಿವುಡ್ ನ ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  'ಸಿಲ್ವರ್ ಜ್ಯುಬಿಲಿ' ಸೆಲೆಬ್ರೇಷನ್ ನಲ್ಲಿರುವ 'ಮೈನೇ ಪ್ಯಾರ್ ಕಿಯಾ' ಸಿನಿಮಾ ಬಾಲಿವುಡ್ ಗೆ 'ಸಲ್ಮಾನ್ ಖಾನ್' ಎಂಬ ಭರವಸೆಯ ನಾಯಕನನ್ನ ಕೊಡುಗೆಯಾಗಿ ನೀಡಿತು. ಹರೆಯದ ಹುಡುಗ 'ಪ್ರೇಮ್' ಆಗಿ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಸಲ್ಮಾನ್, 'ಮೈನೇ ಪ್ಯಾರ್ ಕಿಯಾ' ಸಿನಿಮಾದಲ್ಲಿ ನಾಯಕನ ಸ್ಥಾನ ಗಿಟ್ಟಿಸಿಕೊಂಡಿದ್ದೇ ಅಚಾನಕ್ಕಾಗಿ ಅನ್ನುವುದು ನಿಮಗೆ ಗೊತ್ತಾ? ['ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ]

  ಮಾಡೆಲಿಂಗ್ ಮಾಡ್ತಿದ್ದ ಸಲ್ಲು, ಇಷ್ಟವಿಲ್ಲದೇ ಇದ್ದರೂ ಒಪ್ಪಿಕೊಂಡ ಸಿನಿಮಾ 'ಮೈನೇ ಪ್ಯಾರ್ ಕಿಯಾ'. ಹಾಗಾದ್ರೆ, ಚಿತ್ರಕ್ಕಾಗಿ ಸಲ್ಲು ಬಣ್ಣ ಹಚ್ಚಿದ್ದು ಯಾಕೆ..? 25 ರ ಖುಷಿಯಲ್ಲಿರುವ 'ಮೈನೇ ಪ್ಯಾರ್ ಕಿಯಾ' ಚಿತ್ರದ ಬಗ್ಗೆ ಕೆಲ ಕಣ್ಣರಳಿಸುವ ಸಂಗತಿಗಳು ಇಲ್ಲಿವೆ.....ಮುಂದೆ ಓದಿ....

  ನಿರ್ದೇಶಕರ ತಲೆಯಲ್ಲಿ ಸಲ್ಮಾನ್ ಖಾನ್ ಇರಲೇ ಇಲ್ಲ..!

  ನಿರ್ದೇಶಕರ ತಲೆಯಲ್ಲಿ ಸಲ್ಮಾನ್ ಖಾನ್ ಇರಲೇ ಇಲ್ಲ..!

  ಹತ್ತು ತಿಂಗಳುಗಳ ಕಾಲ ಕೂತು ರೆಡಿಮಾಡಿದ್ದ 'ಮೈನೇ ಪ್ಯಾರ್ ಕಿಯಾ' ಕಥೆಯ ಮುಖ್ಯ ಪಾತ್ರಗಳಿಗಾಗಿ ನಿರ್ದೇಶಕ ಸೂರಜ್ ಬಾರ್ಜತ್ಯ ಹುಡುಕಾಟದಲ್ಲಿದ್ದರು. ನಾಯಕ 'ಪ್ರೇಮ್' ಪಾತ್ರಕ್ಕೆ ವಿಂದೂ ಧಾರಾ ಸಿಂಗ್, ದೀಪಕ್ ತಿಜೋರಿ ಮತ್ತು ಫರಾಜ್ ಖಾನ್ ಜೊತೆ ಮಾತುಕತೆ ನಡೆಸಿದ್ದರು.

  ಸೂರಜ್ ಗೆ ಸಲ್ಲುನ ಪರಿಚಯಿಸಿದ್ದೇ ಶಬೀನಾ

  ಸೂರಜ್ ಗೆ ಸಲ್ಲುನ ಪರಿಚಯಿಸಿದ್ದೇ ಶಬೀನಾ

  ನಾಯಕನ ಹೆಸರು ಅಂತಿಮವಾಗುವ ಹೊತ್ತಿಗೆ ಸಲ್ಮಾನ್ ಖಾನ್ ವೃತ್ತಿ ಬದುಕಿಗೆ ದೊಡ್ಡ ಟ್ವಿಸ್ಟ್ ಕೊಟ್ಟಿದ್ದು ನಟಿ ಶಬೀನಾ ದತ್. ನಾಯಕಿ ಪಾತ್ರಕ್ಕಾಗಿ ಸೂರಜ್, ಶಬೀನಾ ದತ್ ರನ್ನ ಸ್ಕ್ರೀನ್ ಟೆಸ್ಟ್ ಮಾಡಿದ್ದರು. ತೆರೆಮೇಲೆ ಶಬೀನಾ ಅಷ್ಟು ಮೋಡಿ ಮಾಡಲ್ಲ ಅನ್ನುವ ಕಾರಣಕ್ಕೆ ಅವರನ್ನ ಸೂರಜ್ ರಿಜೆಕ್ಟ್ ಕೂಡ ಮಾಡಿದ್ದರು. ಆಗ ಹೀರೋ ಪಾತ್ರಕ್ಕೆ ಒಮ್ಮೆ 'ಸಲ್ಮಾನ್'ನ ನೋಡಿ ಅಂತ ಸೂರಜ್ ಗೆ ಸಲ್ಲುನ ಪರಿಚಯಿಸಿದ್ದೇ ಶಬೀನಾ.

  ಸ್ಕ್ರೀನ್ ಟೆಸ್ಟ್ ನಲ್ಲಿ ಸಲ್ಲು ಪಾಸ್

  ಸ್ಕ್ರೀನ್ ಟೆಸ್ಟ್ ನಲ್ಲಿ ಸಲ್ಲು ಪಾಸ್

  ಸ್ಕ್ರೀನ್ ಟೆಸ್ಟ್ ನಲ್ಲಿ ಸಲ್ಮಾನ್ ಖಾನ್ ಗೆ ಫುಲ್ ಮಾರ್ಕ್ಸ್ ಸಿಕ್ತು. ಆದ್ರೆ, 'ಮೈನೇ ಪ್ಯಾರ್ ಕಿಯಾ' ಕಥೆ ಮಾತ್ರ ಸಲ್ಲುಗೆ ಬಿಲ್ಕುಲ್ ಇಷ್ಟವಾಗ್ಲಿಲ್ಲ. 'ನಾಯಕನ ಪಾತ್ರ ತುಂಬಾ ಸಾಫ್ಟ್ ಆಗಿದೆ. ನನಗೆ ಸೂಟ್ ಆಗಲ್ಲ' ಅಂತ ಸಲ್ಲು, ಸಿಕ್ಕ ಅವಕಾಶವನ್ನು ಕೈಬಿಟ್ಟಿದ್ರಂತೆ. ಆಗ ಸೂರಜ್, ಸಲ್ಲು ಮನವೊಲಿಸಿದ್ದರ ಪರಿಣಾಮ, ಸಲ್ಲು 'ಪ್ರೇಮ್' ಆದರು.

  'ಮೈನೇ ಪ್ಯಾರ್ ಕಿಯಾ' ಸಲ್ಲು ಮೊದಲ ಸಿನಿಮಾ ಅಲ್ಲ

  'ಮೈನೇ ಪ್ಯಾರ್ ಕಿಯಾ' ಸಲ್ಲು ಮೊದಲ ಸಿನಿಮಾ ಅಲ್ಲ

  ಸಲ್ಮಾನ್ ಖಾನ್ ಮೊದಲ ಸಿನಿಮಾ ಯಾವ್ದು ಅಂದ್ರೆ, ಈಗಲೂ ಎಲ್ಲರ ತಲೆಗೆ ಥಟ್ ಅಂತ ಹೊಳೆಯುವುದೇ 'ಮೈನೇ ಪ್ಯಾರ್ ಕಿಯಾ'. ಸಲ್ಮಾನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಇದು ನಿಜ. ಆದರೆ, ಮೊಟ್ಟ ಮೊದಲ ಬಾರಿ ಬಣ್ಣ ಹಚ್ಚಿ, ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು 1988 ರಲ್ಲಿ ತೆರೆಕಂಡ 'ಬಿವಿ ಹೋ ತೋ ಐಸಿ' ಸಿನಿಮಾದಲ್ಲಿ.

  ಹೀರೋ ಆಗ್ಬೇಕಿದ್ದವನು ವಿಲನ್ ಆದ!

  ಹೀರೋ ಆಗ್ಬೇಕಿದ್ದವನು ವಿಲನ್ ಆದ!

  ಹೀರೋ ರೇಸ್ ನಲ್ಲಿ ಸಲ್ಮಾನ್ ಖಾನ್ ಜೊತೆ ಮೋಹನಿಶ್ ಬಹ್ಲ್ ಕೂಡ ಇದ್ದರು. ಇಬ್ಬರಿಗೂ ಒಟ್ಟಿಗೆ ಆಡಿಷನ್ ಕೂಡ ನಡೆದಿತ್ತು. ರೇಸ್ ನಲ್ಲಿ ಗೆದ್ದು ಸಲ್ಮಾನ್, 'ಹೀರೋ' ಪಟ್ಟವನ್ನು ಅಲಂಕರಿಸಿದ್ದರೆ, ಸಲ್ಲುಗೆ ಟಾಂಗ್ ಕೊಡೋ 'ಜೀವನ್' ಪಾತ್ರಕ್ಕೆ ಮೋಹನಿಶ್ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

  ಧಾರಾವಾಹಿ ನಟಿ ಹೀರೋಯಿನ್ ಆದ ಕಥೆ

  ಧಾರಾವಾಹಿ ನಟಿ ಹೀರೋಯಿನ್ ಆದ ಕಥೆ

  ಸಲ್ಲುಗೆ ಜೋಡಿಯಾದ 'ಭಾಗ್ಯಶ್ರೀ'ಯನ್ನ ಸೂರಜ್ ಸೆಲೆಕ್ಟ್ ಮಾಡಿದ್ದು 'ಕಚ್ಚಿ ಧೂಪ್' ಧಾರಾವಾಹಿ ನೋಡಿದ್ಮೇಲೆ. ಕಿರುತೆರೆಯಲ್ಲಿ ಕಾಣದಂತೆ ಇದ್ದ ಭಾಗ್ಯಶ್ರೀ, ಬೆಳ್ಳಿತೆರೆಮೇಲೆ ಮಿಂಚೋಕೆ ಆರಂಭಿಸಿದ್ದು ಈ ಚಿತ್ರದಿಂದಲೇ.

  ಓಪನ್ನಿಂಗ್ ಡಲ್ಲು, ಕಲೆಕ್ಷನ್ ಸೂಪರ್ರು..!

  ಓಪನ್ನಿಂಗ್ ಡಲ್ಲು, ಕಲೆಕ್ಷನ್ ಸೂಪರ್ರು..!

  ಕೇವಲ 29 ಪ್ರಿಂಟ್ ಗಳಲ್ಲಿ ತೆರೆಕಂಡ 'ಮೈನೇ ಪ್ಯಾರ್ ಕಿಯಾ' ಸಿನಿಮಾ 1989 ಬ್ಲಾಕ್ ಬಸ್ಟರ್ ಚಿತ್ರವಾಗಿದ್ದೇ ಬಾಲಿವುಡ್ ನ ಅಚ್ಚರಿ. 20 ಮಿಲಿಯನ್ ಬಜೆಟ್ ನಲ್ಲಿ ರೆಡಿಯಾಗಿದ್ದ 'ಮೈನೇ ಪ್ಯಾರ್ ಕಿಯಾ' ಸಿನಿಮಾ, 180 ಮಿಲಿಯನ್ ವಸೂಲಿ ಮಾಡಿ 'ಆಲ್ ಟೈಲ್ ಬ್ಲಾಕ್ ಬಸ್ಟರ್' ಖ್ಯಾತಿಗೆ ಪಾತ್ರವಾಯ್ತು.

  ವಿದೇಶಿ ಭಾಷೆಗಳಿಗೆ ಡಬ್

  ವಿದೇಶಿ ಭಾಷೆಗಳಿಗೆ ಡಬ್

  ಭಾರತದಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಕ್ರಿಯೇಟ್ ಮಾಡಿದ 'ಮೈನೇ ಪ್ಯಾರ್ ಕಿಯಾ' ಇಂಗ್ಲೀಷ್ ನಲ್ಲಿ 'ವೆನ್ ಲವ್ ಕಾಲ್ಸ್' ಅಂತ ಡಬ್ ಆಗಿ ಕರೀಬಿಯನ್, ಟ್ರಿನಿದಾದ್ ಮತ್ತು ಟೋಬಾಗೋ ನೆಲದಲ್ಲಿ ಧೂಳೆಬ್ಬಿಸಿತ್ತು. ಅಲ್ಲದೇ ಸ್ಪ್ಯಾನಿಷ್ ನಲ್ಲಿ 'ತೇ ಅಮೋ' ಆಗಿ ಭರ್ಜರಿ ಪ್ರದರ್ಶನ ಕಾಣ್ತು.

  ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸೂಪರ್ ಹಿಟ್

  ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸೂಪರ್ ಹಿಟ್

  ತೆಲುಗಿನಲ್ಲಿ 'ಪ್ರೇಮ ಪಾವುರಾಲು' ಆಗಿ ತೆರೆಕಂಡ 'ಮೈನೇ ಪ್ಯಾರ್ ಕಿಯಾ' ಇಪತ್ತೈದು ವಾರಗಳ ಯಶಸ್ವಿ ಪ್ರದರ್ಶನ ಕಾಣ್ತು. ಹಾಗೇ ತಮಿಳಿನಲ್ಲಿ 'ಕಾದಲ್ ಒರು ಕವಿತೈ' ಆಗಿ ಕಾಲಿವುಡ್ ಅಂಗಳದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾ 'ಮೈನೇ ಪ್ಯಾರ್ ಕಿಯಾ'.

  ಅತಿ ಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿ ಬಾಚಿದ ಚಿತ್ರ

  ಅತಿ ಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿ ಬಾಚಿದ ಚಿತ್ರ

  ಬಹತೇಕ ಹೊಸಬರೇ ರೆಡಿಮಾಡಿದ್ದ 'ಮೈನೇ ಪ್ಯಾರ್ ಕಿಯಾ' ಚಿತ್ರ ಫಿಲ್ಮ್ ಫೇರ್ ಅಂಗಳದಲ್ಲಿ ಒಟ್ಟು 'ಏಳು' ಪ್ರಶಸ್ತಿಗಳನ್ನ ಬಾಚಿ ಅಂದಿಗೆ ಹೊಸ ದಾಖಲೆ ಸೃಷ್ಟಿಸಿತ್ತು. ತದ ನಂತರ ಆ ದಾಖಲೆಯನ್ನ ಸರಿಗಟ್ಟಿದ್ದು ಶಾರೂಖ್ ಅಭಿನಯದ ಡಿ.ಡಿ.ಎಲ್.ಜೆ ಸಿನಿಮಾ.

  ಸಲ್ಮಾನ್ ಗೆ ಒಂದು ವರ್ಷ ಅವಕಾಶಗಳೇ ಸಿಕ್ಲಿಲ್ಲ

  ಸಲ್ಮಾನ್ ಗೆ ಒಂದು ವರ್ಷ ಅವಕಾಶಗಳೇ ಸಿಕ್ಲಿಲ್ಲ

  ಅಲ್ಲಿವರೆಗಿನ ಎಲ್ಲಾ ರೆಕಾರ್ಡ್ ಗಳನ್ನ ಉಡೀಸ್ ಮಾಡಿದ್ರೂ, 'ಮೈನೇ ಪ್ಯಾರ್ ಕಿಯಾ' ಚಿತ್ರದ ನಂತ್ರ ಒಂದು ವರ್ಷ ಸಲ್ಮಾನ್ ಖಾನ್ ಗೆ ಯಾವುದೇ ಅವಕಾಶ ಸಿಕ್ಲಿಲ್ಲ. ನಂತ್ರ ಲವ್ವರ್ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ಸಲ್ಮಾನ್, ಮುಂದೆ ನಡೆದಿದ್ದೆಲ್ಲಾ ಹೂವಿನ ಹಾದಿ. ಇಂದಿಗೂ ಬಾಲಿವುಡ್ ನಲ್ಲಿ 'ಪ್ಯಾರಿ ಪ್ರೇಮ್' ಅಂತಲೇ ಸಲ್ಮಾನ್ ಹೆಸರುವಾಸಿಯಾಗಿದ್ದಾರೆ ಅಂದ್ರೆ ಅದಕ್ಕೆ 'ಮೈನೇ ಪ್ಯಾರ್ ಕಿಯಾ' ಕಾರಣ.

  English summary
  On December 29th, 1989, Salman Khan played the very first in a series of heroes named Prem. That was 25 years ago. The Block Buster Hit Maine Pyar Kiya, celebrates 25th Anniversary today (December 29, 2014). Here is the recap of Making of Maine Pyar Kiya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X