ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್'

By ಜೇಮ್ಸ್ ಮಾರ್ಟಿನ್

ಸಾಮಾಜಿಕ ಜಾಲ ತಾಣಗಳಲ್ಲಿ ಏನು ಬೇಕಾದರೂ ಟ್ರೆಂಡ್ ಮಾಡಬಹುದು. ಒಳ್ಳೆ ವಿಷಯ ಇರಲಿ, ಕೆಟ್ಟ ವಿಷಯ ಇರಲಿ. ಅದರಲ್ಲೂ ಸಿನಿಮಾ ಜಗತ್ತಿನ ಮಂದಿಗೆ ಈ ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಎಂದರೆ ಸಕತ್ ಮಾರ್ಕೆಟಿಂಗ್ ಅಡ್ಡಾ. ಆದರೆ, ಇಂಥ ಸಾರ್ವಜನಿಕರ ಸಂತೆ ಮುಂದೆ ಸ್ವಲ್ಪ ಎಡವಿದರೂ ಆಡಿಕೊಂಡು ನಗುವವರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ.

ಈಗ ಕುಸ್ತಿಪಟು ಅವತಾರದಲ್ಲಿ ಕಣಕ್ಕಿಳಿದಿರುವ ಸಲ್ಮಾನ್ ಖಾನ್ ಗೂ ಇದೆ ಗತಿಯಾಗಿದೆ. ಯಶ್ ರಾಜ್ ಬ್ಯಾನರ್ ನ ಹೊಚ್ಚ ಹೊಸ ಚಿತ್ರ 'ಸುಲ್ತಾನ್' ಪೋಸ್ಟರ್, ಟೀಸರ್ ಬಿಡುಗಡೆಯಾಗಿದೆ. [ಪುಟ್ಟ ಅಳಿಯನಿಗೆ ಸಲ್ಲೂ ಕೊಟ್ಟ ಗಿಫ್ಟ್ ಏನು?]

Salman Khan's Sultan Poster Trolled On Social Media!

ಪೋಸ್ಟರ್ ನಲ್ಲಿ ಕುಸ್ತಿಪಟು ಗೆಟ್ ಅಪ್ ನಲ್ಲಿರುವ ಸಲ್ಮಾನ್ ಖಾನ್, ಗೆಟಪ್ ಎಂದರೆ ಮತ್ತೇನಿಲ್ಲ, ಕುಸ್ತಿಪಟುಗಳು ತೊಡುವ ಕಾಚವೊಂದಿದೆ ಮೈಮೇಲೆ ಅಷ್ಟೆ. ಅಖಾಡಕ್ಕೆ ಇಳಿದ ಸಲ್ಲೂ ಮಣ್ಣಿಗೆ ನಮಸ್ಕರಿಸಿ ಕೈ ಕೊಡವಿಕೊಳ್ಳುವ ದೃಶ್ಯವನ್ನು ಪೋಸ್ಟರ್ ನಲ್ಲಿ ಬಳಸಲಾಗಿದೆ. ಆದರೆ, ಒಂದು ಕೈ ನೇರ ಒಂದು ಕಣ್ಣಿಗೆ ಅಡ್ಡವಾಗಿ ಬಂದಿದೆ. ಇದನ್ನು ಕಂಡ ಸೈಬರ್ ಸಂತೆಯ ಮಂದಿ ಗೇಲಿ ಮಾಡುತ್ತಿದ್ದಾರೆ.[ಸಲ್ಲು ಜೊತೆ ಸೇರಿಕೊಂಡ ಕ್ಯಾಟ್]

"Wrestling is not a sport. It's about fighting what lies within" - SULTAN ಎಂಬ ಘೋಷವಾಕ್ಯವಿರುವ ಸುಲ್ತಾನ್ ಚಿತ್ರ ಯಶ್ ರಾಜ್ ಬ್ಯಾನರ್ ನ ಮಹತ್ವಾಕಾಂಕ್ಷಿ ಚಿತ್ರವಾಗಿದೆ. ಅನುಷ್ಕಾ ಶರ್ಮ ಕೂಡಾ ಚಿತ್ರದಲ್ಲಿದ್ದು, ಮುಂದಿನ ಈದ್ ಹಬ್ಬಕ್ಕೆ ಚಿತ್ರ ತೆರೆಗೆ ಬರಲಿದೆ. ಹರ್ಯಾಣದ ಹುಲಿ, ಕುಸ್ತಿಪಟು ಸುಲ್ತಾನ್ ಕಥೆಯನ್ನು ಚಿತ್ರ ಹೇಳಹೊರಟಿದೆ. ['ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!]

-

-

-

-

-

-

-

-

-

-

ಸಲ್ಮಾನ್ ಖಾನ್ ಸುಲ್ತಾನ್ ಅವತಾರಕ್ಕೆ ಮಂಗಳಾರತಿ

ಸಲ್ಮಾನ್ ಖಾನ್ ಸುಲ್ತಾನ್ ಅವತಾರಕ್ಕೆ ಮಂಗಳಾರತಿ

ಸಲ್ಮಾನ್ ಖಾನ್ ಅವರು ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಭಾರಿ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಸಲ್ಲೂ ಅಭಿಮಾನಿಗಳಿಗೆ ಸಹಜವಾಗಿ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಥ್ರಿಲ್ ನೀಡಿದೆ. ಸದ್ಯಕ್ಕೆ ಸ್ಲೈಡ್ ಗಳಲ್ಲಿ ಟ್ರಾಲ್ ಗಳನ್ನು ನೋಡಿ ಆನಂದಿಸಿ, ಅದಕ್ಕೂ ಮುನ್ನ ಎರಡು ದಿನಗಳ ಹಿಂದೆ ಬಿಡುಗಡೆಯಾದ ಟೀಸರ್ ವಿಡಿಯೋ ಕೂಡಾ ನೋಡಿ. ಈ ಸಯಮಕ್ಕೆ 3,022,619 ಬಾರಿ ವೀಕ್ಷಣೆಯಾಗಿದೆ.

More from Filmibeat

English summary
Social media, can be cruel sometimes and can take anything for a ride within the blink of an eye. Salman Khan starrer Sultan's poster, has now become trollers favourite picture as a lot of funny memes about the poster, are doing rounds on Facebook and Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X