For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಶರ್ಟ್ ಕಿತ್ತೆಸೆದ ನಟ ಸಲ್ಮಾನ್ ಖಾನ್

  By Rajendra
  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಅಂಗಿ ಬಿಚ್ಚಿದ್ದಾರೆ. ಬಾಲಿವುಡ್ ನಲ್ಲಿ ಶರ್ಟ್ ಕಳಚುವುದನ್ನೇ ಟ್ರೇಡ್ ಮಾರ್ಕ್ ಮಾಡಿಕೊಂಡಿರುವ ನಟ ಎನ್ನಬಹುದು. ಚಿತ್ರದಲ್ಲಿ ಅಗತ್ಯವಿರಲಿ ಬಿಡಲಿ ಯಾವುದೋ ಒಂದು ಸನ್ನಿವೇಶದಲ್ಲಿ ಶರ್ಟ್ ಬಿಚ್ಚೇ ಬಿಚ್ಚುತ್ತಾರೆ.

  ಚಿತ್ರದಲ್ಲಿ ಶರ್ಟ್ ಬಿಚ್ಚಲಿಲ್ಲ ಎಂದರೆ ಎಲ್ಲಿ ಪ್ರೇಕ್ಷಕರು ತಮ್ಮನ್ನು ಮರೆತುಹೋಗುತ್ತಾರೋ ಎಂಬ ಅಳುಕು ಸಲ್ಲುರನ್ನು ಕಾಡುತ್ತಿರುವಂತಿದೆ. ಬಾಲಿವುಡ್ ನಲ್ಲಿ ಶರ್ಟ್ ಕಳುಚುವ ಸೀನ್ ಗೆ ಪೇಟೆಂಟ್ ಏನಾದರೂ ಸಿಕ್ಕಿದರೆ ಅದು ಖಂಡಿತವಾಗಿ ಒನ್ ಅಂಡ್ ಓನ್ಲಿ ನಟ ಸಲ್ಮಾನ್ ಖಾನ್ ಗೆ ಮಾತ್ರ.

  ಚಿತ್ರದಲ್ಲಿ ಒಮ್ಮೆಯಾದರೂ ಶರ್ಟ್ ಕಳಚಲಿಲ್ಲ ಅಂದರೆ ಸಲ್ಲುಗೆ ಸಮಾಧಾನವಾಗಲ್ಲ. ವಾಂಟೆಡ್, ಬಾಡಿಗಾರ್ಡ್ ಹಾಗೂ ದಬಾಂಗ್ ಚಿತ್ರಗಳಲ್ಲಿ ಅಂಗಿ ಕಳಚಿ ತಮ್ಮ ಕಟುಮಸ್ತಾದ ದೇಹವನ್ನು ತೋರಿಸಿ ಈಗಾಗಲೆ ಶಿಳ್ಳೆ ಗಿಟ್ಟಿಸಿದ್ದಾರೆ. ಈಗ ಮತ್ತೊಮ್ಮೆ 'ಏಕ್ತಾ ಟೈಗರ್' ಚಿತ್ರದಲ್ಲಿ ಅದೇ ರೀತಿ ಅಂಗಿ ಬಿಚ್ಚಿದ ಸನ್ನಿವೇಶ ಮಾಡಿದ್ದಾರೆ.

  ಕತೆಗೆ ಪೂರಕವಾಗಿ ಎಲ್ಲೂ ಅಂಗಿ ಕಳಚುವ ಸನ್ನಿವೇಶ ಬರುವುದಿಲ್ಲವಂತೆ. ಆದರೆ ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವನ್ನು ಪುಸಲಾಯಿಸಿ ಆ ರೀತಿಯ ಸೀನ್ ಒಂದನ್ನು ಸೃಷ್ಟಿಸಿದ್ದಾನೆ ಸಲ್ಲು ಮಿಯಾ.

  ತಾನು ಶರ್ಟ್ ಕಳಚುವ ಸನ್ನಿವೇಶ ಇರಲೇಬೇಕು ಎಂದು ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾಗೂ ಒತ್ತಾಯ ಮಾಡಿ ಆ ರೀತಿಯ ಸನ್ನಿವೇಶವನ್ನು ಸೃಷ್ಟಿಸಿಕೊಂಡಿದ್ದಾನೆ. ಆಗಸ್ಟ್ 15ರಂದು 'ಏಕ್ತಾ ಟೈಗರ್' ಚಿತ್ರ ತೆರೆಗೆ ಬರುತ್ತಿದೆ. ನೋಡೋಣ ಸಲ್ಲು ಬಟ್ಟೆ ಕಳಚಿರುವ ಸೀನ್ ಎಷ್ಟರ ಮಟ್ಟಿಗೆ ವರ್ಕ್ ಔಟ್ ಅಗಿದೆ ಎಂದು.

  ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದು ಎರಡು ಗುಪ್ತಚರ ಇಲಾಖೆಗಳ ಸುತ್ತ ಚಿತ್ರದ ಕತೆ ಸುತ್ತುತ್ತದೆ. ಅವು ಭಾರತದ RAW (Research and Analysis Wing) ಹಾಗೂ ಪಾಕಿಸ್ತಾನದ ISI (Inter-Services Intelligence). ಅದರಲ್ಲೂ ಪಾಕಿಸ್ತಾನದ ಐಎಸ್ಐ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಪಾಕ್ ಭಾವಿಸಿದೆ.

  ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಭಾರತದ ಕ್ಷಿಪಣಿ ತಂತ್ರಜ್ಞಾನವನ್ನು ಪಾಕ್ ಗೆ ರಹಸ್ಯವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗುಪ್ತ ಮಾಹಿತಿ ಸಿಗುತ್ತದೆ. ಇದನ್ನು ತನಿಖೆ ಮಾಡಲು ಸರ್ಕಾರ ಸೀಕ್ರೆಟ್ ಏಜೆಂಟ್ ಟೈಗರ್ (ಸಲ್ಮಾನ್ ಖಾನ್) ಕಳುಹಿಸುತ್ತದೆ.

  ಆದರೆ ಟೈಗರ್ ತನಿಖೆ ಮಾಡ ಮಾಡುತ್ತಾ ಬಂಗಾರ ಜಿಂಕೆಯ ಪ್ರೇಮದ ಬಲೆಗೆ ಬೀಳುತ್ತಾನೆ. ಆ ಬಂಗಾರದ ಜಿಂಕೆ ಬೇರಾರು ಅಲ್ಲ ಪ್ರೊಫೆಸರ್ ಮಗಳು (ಕತ್ರಿನಾ ಕೈಫ್). ಟೈಗರ್ ಕತೆ ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಚಿತ್ರ ಸಾಗುತ್ತದೆ. (ಏಜೆನ್ಸೀಸ್)

  English summary
  Bollywood actor Salman Khan again takes off his shirt in Ek Tha Tiger. It become trade mark for him. Eralier he did the same scene in Bodyguard, Dabangg, Wanted.
  Friday, July 27, 2012, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X