For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಿನಿಮಾ ಬಿಡುಗಡೆಗೆ ದಿನ ನಿಗದಿ ಆದರೆ ಷರತ್ತುಗಳು ಅನ್ವಯ!

  |

  ಸಲ್ಮಾನ್ ಖಾನ್ ಸಿನಿಮಾ ಒಂದು ಚಿತ್ರಮಂದಿರಗಳನ್ನು ಬಿಡುಗಡೆ ಆಗಿ ಬರೋಬ್ಬರಿ ಒಂದು ವರ್ಷವಾಗಿದೆ. ಸಲ್ಮಾನ್ ಖಾನ್-ಸುದೀಪ್ ನಟಿಸಿದ್ದ ದಬಂಗ್ 3, ಚಿತ್ರಮಂದಿರದಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ ಕೊನೆಯ ಸಿನಿಮಾ.

  ಪ್ರಸ್ತುತ ಸಲ್ಮಾನ್ ಕೈಯಲ್ಲಿ 7 ಸಿನಿಮಾಗಳಿವೆ, ಅತಿಥಿ ಪಾತ್ರಗಳಲ್ಲಿ ನಟಿಸುತ್ತಿರುವ ಸಿನಿಮಾಗಳನ್ನೂ ಒಟ್ಟು ಮಾಡಿದರೆ 9 ಸಿನಿಮಾಗಳಿವೆ. ಕೋವಿಡ್ ಕಾಟ ಇಲ್ಲದೇ ಇದ್ದಿದ್ದರೆ 2020 ಸಲ್ಮಾನ್ ನಟೆಯ ಎರಡು ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಈಗಲೂ ಸಹ ಸಲ್ಮಾನ್ ಖಾನ್ ಹೊಸ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬ ಸ್ಪಷ್ಟತೆ ಇಲ್ಲ.

  ಸಲ್ಮಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ರಾಧೆ' ಬಿಡುಗಡೆಗೆ ತಯಾರಾಗಿದೆ. ಆದರೆ ದಿನಾಂಕದ ಬಗ್ಗೆ ಇನ್ನೂ ಗೊಂದಲವಿದೆ. ಈ ಬಗ್ಗೆ ಸಲ್ಮಾನ್ ಖಾನ್ ನಿನ್ನೆಯಷ್ಟೆ ಮಾಧ್ಯಮಗಳ ಬಳಿ ಮಾತನಾಡಿ, ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ದೊಡ್ಡ ಸುಳಿವನ್ನೇ ನೀಡಿದ್ದಾರೆ. ಆದರೆ ಕೆಲವು ಷರತ್ತುಗಳನ್ನು ಸಹ ಮುಂದಿಟ್ಟಿದ್ದಾರೆ.

  'ರಾಧೆ ಸಿನಿಮಾವನ್ನು ಕಳೆದ ಈದ್‌ಗೆ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೆವು, ಆದರೆ ಆಗಲಿಲ್ಲ. ಈ ಈದ್‌ಗೆ ಖಂಡಿತ ಸಿನಿಮಾ ಬಿಡುಗಡೆ ಮಾಡುತ್ತೇವೆ ಆದರೆ ಕೆಲವು ಷರತ್ತುಗಳಿವೆ' ಎಂದಿದ್ದಾರೆ ಸಲ್ಮಾನ್ ಖಾನ್.

  ಚಿತ್ರಮಂದಿರಗಳು ಸಂಪೂರ್ಣವಾಗಿ ತೆರೆದು, ಜನರು ಚಿತ್ರಮಂದಿರಗಳಿಗೆ ಬರುವಂತಾದಾಗ. ಜನರು, ತಮ್ಮ ಹಣವನ್ನು ಮನೊರಂಜನೆಗೆ ಖರ್ಚು ಮಾಡಲು ಶಕ್ತರಾಗಿದ್ದರೆ ಹಾಗೂ ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಕೊರೊನಾ ಪರಿಸ್ಥಿತಿ ಇನ್ನಷ್ಟು ತಿಳಿಯಾದಲ್ಲಿ ಮಾತ್ರವೇ ನಮ್ಮ ಸಿನಿಮಾವನ್ನು ಈ ಈದ್‌ಗೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಸಲ್ಮಾನ್ ಖಾನ್.

  ಈದ್ ಹಬ್ಬವು 2021 ರ ಮೇ 12 ರಂದು ಆಚರಿಸಲಾಗುತ್ತಿದೆ. ಮೇ 12 ಅಥವಾ ಮೇ 13 ಕ್ಕೆ ಸಿನಿಮಾ ಬಿಡುಗಡೆ ಆಗುವ ಸಂಭವ ಇದೆ.

  ರಾಧೆ ಸಿನಿಮಾದಲ್ಲಿ ಸಲ್ಮಾನ್ ಎದುರು ನಾಯಕಿಯಾಗಿ ನಟಿಸಿದ್ದಾರೆ ದಿಶಾ ಪಟಾನಿ ಹಾಗೂ ಮೇಘನಾ ಆಕಾಶ್. ಸಿನಿಮಾದಲ್ಲಿ ರಣದೀಪ್ ಹೂಡಾ, ಜಾಕಿ ಶ್ರಾಫ್, ಗೌತಮ್ ಗುಲಾಟಿ ಇನ್ನೂ ಹಲವು ನಟರಿದ್ದಾರೆ. ಸಿನಿಮಾವನ್ನು ಪ್ರಭು ದೇವಾ ನಿರ್ದೇಶಿಸಿದ್ದಾರೆ. ನಿರ್ಮಾಣ ಮಾಡಿರುವುದು ಸಲ್ಮಾನ್ ಖಾನ್, ಸೋಹೇಲ್ ಖಾನ್ ಹಾಗೂ ಅತುಲ್ ಅಗ್ನಿಹೋತ್ರಿ.

  English summary
  Salman Khan said his new movie Radhe may release on May 12 2021 for Eid festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X