For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ರ ಈ ನಡವಳಿಕೆ ಪ್ರಿಯಾಂಕಾಗೆ ಇಷ್ಟ ಆಗಲಿಲ್ಲ.!

  |

  ಎಲ್ಲವೂ ನಿಗದಿಯಾದಂತೆ ನಡೆದಿದ್ದರೆ, ಪ್ರಿಯಾಂಕಾ ಛೋಪ್ರಾ ಇಷ್ಟೊತ್ತಿಗೆ ಸಲ್ಮಾನ್ ಖಾನ್ ಜೊತೆ 'ಭಾರತ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಆದ್ರೆ, ಅನಿವಾರ್ಯ ಕಾರಣಗಳಿಂದ 'ಭಾರತ್' ಚಿತ್ರದಿಂದ ಪ್ರಿಯಾಂಕಾ ಛೋಪ್ರಾ ಹೊರ ನಡೆದರು.

  ನಿಕ್ ಜೊನಾಸ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳಲು 'ಭಾರತ್' ಚಿತ್ರಕ್ಕೆ ಪ್ರಿಯಾಂಕಾ ಛೋಪ್ರಾ ಗುಡ್ ಬೈ ಹೇಳಿದ್ದಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ, ಅಸಲಿ ಕಾರಣ ಬೇರೆಯದ್ದೇ ಇದೆ ಅಂತಿದ್ದಾರೆ ಗಾಸಿಪ್ ಪಂಡಿತರು.

  ಯಾರೀ ಹೇಳಿದ್ದು ಸಲ್ಮಾನ್ ಖಾನ್ ಕೋಪಿಸಿಕೊಂಡಿದ್ದಾರೆ ಅಂತ.?! ಯಾರೀ ಹೇಳಿದ್ದು ಸಲ್ಮಾನ್ ಖಾನ್ ಕೋಪಿಸಿಕೊಂಡಿದ್ದಾರೆ ಅಂತ.?!

  'ಭಾರತ್' ಚಿತ್ರದಲ್ಲಿ ತಬು ಹಾಗೂ ದಿಶಾ ಪಟಾನಿಗೆ ಪ್ರಮುಖ ಪಾತ್ರ ನೀಡಿದ್ದು ನಟಿ ಪ್ರಿಯಾಂಕಾ ಛೋಪ್ರಾಗೆ ಇಷ್ಟ ಆಗಲಿಲ್ಲ. ಅಲ್ಲದೇ, ಶೂಟಿಂಗ್ ಗೆ ಸದಾ ಲೇಟ್ ಆಗಿ ಸಲ್ಮಾನ್ ಖಾನ್ ಹಾಜರ್ ಆಗುತ್ತಿದ್ದರಂತೆ. ಶೂಟಿಂಗ್ ಸ್ಪಾಟ್ ಗೆ ಬೆಳಗ್ಗೆ ಕರೆಕ್ಟ್ ಟೈಮ್ ಗೆ ಬಂದರೂ, ಸಲ್ಮಾನ್ ಜೊತೆ ನಟಿಸುವ ಅವಕಾಶ ಸಿಗುತ್ತಿದದ್ದು ಮಧ್ಯಾಹ್ನದ ಬಳಿಕ.

  ಹೇಳಿ ಕೇಳಿ ಪ್ರಿಯಾಂಕಾ ಛೋಪ್ರಾ ಹಾಲಿವುಡ್ನೆಲ್ಲಾ ರೌಂಡ್ ಹಾಕಿ ಬಂದಿರುವವರು. ಅಲ್ಲಿನ ವೃತ್ತಿಪರತೆಗೆ ಫಿದಾ ಆಗಿರುವ ಪ್ರಿಯಾಂಕಾ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ನಡವಳಿಕೆ ಕಂಡು ಬೇಸರಗೊಂಡರಂತೆ.

  'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?

  ಇಷ್ಟೆಲ್ಲಾ ಆದ್ಮೇಲೆ, 'ಭಾರತ್' ಚಿತ್ರದಿಂದ ಹೊರಗುಳಿಯಲು ಪ್ರಿಯಾಂಕಾ ನಿರ್ಧಾರ ಮಾಡಿದರಂತೆ. ಅದೇ ಸಮಯಕ್ಕೆ ನಿಶ್ಚಿತಾರ್ಥ ಕೂಡ ನಿಗದಿ ಆಗಿದ್ದರಿಂದ, ಅದನ್ನೇ ಕಾರಣವಾಗಿ ಪ್ರಿಯಾಂಕಾ ನೀಡಿದ್ದಾರೆ ಎನ್ನುವುದು ಬಲ್ಲವರ ಮಾತು.

  English summary
  Bollywood Actor Salman Khan's habit of arriving late pissed Priyanka Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X