For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿ ತಪ್ಪು ಮಾಡಿದೆ: ನಟಿ ಜರೀನ್

  |

  ಬಾಲಿವುಡ್‌ನ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆಗೆ ಸಿನಿಮಾ ಮಾಡಲು ನಟಿಯರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ನಟಿ ಜರೀನ್ ಖಾನ್‌ ಮಾತ್ರ ''ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿ ತಪ್ಪು ಮಾಡಿದೆ'' ಎಂದಿದ್ದಾರೆ.

  ನಟಿ ಜರೀನ್ ಖಾನ್, ಸಲ್ಮಾನ್ ಖಾನ್ ಜೊತೆಗೆ 'ವೀರ್' ಸಿನಿಮಾದಲ್ಲಿ ನಟಿಸಿದ್ದರು. ಅದು ಅವರ ಮೊದಲ ಸಿನಿಮಾ. ಆದರೆ ಆ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿತು.

  ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಜರೀನ್ ಖಾನ್, ''ಆ ಸಿನಿಮಾ ನನಗೆ ಉಲ್ಟಾ ಹೊಡೆಯಿತು (ಬ್ಯಾಕ್‌ಫೈರ್). ಆ ಸಿನಿಮಾ ಬಿಡುಗಡೆ ಆದ ಬಳಿಕ ನನ್ನ ನಿರೀಕ್ಷೆಗಳೆಲ್ಲ ಹುಸಿಯಾಯಿತು. ಆ ಸಿನಿಮಾದಿಂದ ದೊಡ್ಡ ಪಾಠವನ್ನು ನಾನು ಕಲಿತೆ'' ಎಂದಿದ್ದಾರೆ ಜರೀನ್.

  ಹಲವರು ನನ್ನನ್ನು ಟೀಕಿಸಿದರು: ಜರೀನ್

  ಹಲವರು ನನ್ನನ್ನು ಟೀಕಿಸಿದರು: ಜರೀನ್

  ''ಆ ಸಿನಿಮಾ ಬಿಡುಗಡೆ ಆದ ಬಳಿಕ ನನ್ನನ್ನು ಹಲವು ವಿಧವಾಗಿ ಟೀಕಿಸಿದರು. ನನ್ನ ಲುಕ್ಸ್, ನನ್ನ ಮುಖ, ನನ್ನ ತೂಕ, ನಟನೆ, ಸಿನಿಮಾದಲ್ಲಿ ನಾನು ನಿರ್ವಹಿಸಿದ್ದ ಪಾತ್ರ ಎಲ್ಲದರ ಬಗ್ಗೆಯೂ ಟೀಕೆಗಳು ಬಂದವು. ಅದು ಬಹಳ ವಿಚಿತ್ರ ಅನುಭವ ನನಗೆ ಬಹಳ ನಿರಾಸೆಯಾಗಿತ್ತು'' ಎಂದಿದ್ದಾರೆ ನಟಿ.

  ನನ್ನ ಕರಿಯರ್ ಮುಗಿಯಿತು ಎಂದುಕೊಂಡಿದ್ದೆ: ಜರೀನ್

  ನನ್ನ ಕರಿಯರ್ ಮುಗಿಯಿತು ಎಂದುಕೊಂಡಿದ್ದೆ: ಜರೀನ್

  ''ಆ ಸಿನಿಮಾ ಬಳಿಕ ಹಲವು ಸಮಯ ನನಗೆ ಬೇರೆ ಯಾವುದೇ ಸಿನಿಮಾಗಳು ಸಿಗಲಿಲ್ಲ. ನನ್ನ ಕರಿಯರ್ ಮುಗಿಯಿತು ಎಂದುಕೊಂಡಿದ್ದೆ. ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ ಎಂಭ ಭಾವ ಬಂದಿತ್ತು. ಆದರೆ ಆ ಸಿನಿಮಾದಿಂದ ಹಲವು ಪಾಠಗಳನ್ನು ಕಲಿತೆ'' ಎಂದಿದ್ದಾರೆ ಜರೀನ್ ಖಾನ್.

  ಕ್ಯಾಮೆರಾ ಎಲ್ಲಿದೆ ಎಂಬುದೂ ಗೊತ್ತಿರಲಿಲ್ಲ: ಜರೀನ್

  ಕ್ಯಾಮೆರಾ ಎಲ್ಲಿದೆ ಎಂಬುದೂ ಗೊತ್ತಿರಲಿಲ್ಲ: ಜರೀನ್

  ''ಆ ಸಿನಿಮಾ ಮಾಡಬೇಕಾದರೆ ನಾನೆಷ್ಟು ಅನನುಭವಿ ಆಗಿದ್ದೆನೆಂದರೆ ಮೊದಲ ದಿನದ ಚಿತ್ರೀಕರಣದ ಸಮಯದಲ್ಲಿ ಕ್ಯಾಮೆರಾ ಎಲ್ಲಿದೆ ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಅನುಭವಿಗಳೇ ಇದ್ದ ತಂಡದಲ್ಲಿ ನಾನೊಬ್ಬಳು ಅನನುಭವಿ ಸೇರಿಕೊಂಡಿದ್ದೆ. ಆದರೆ ಹಲವು ವಿಷಯಗಳನ್ನು ಆ ಚಿತ್ರತಂಡ ನನಗೆ ಕಲಿಸಿತು'' ಎಂದಿದ್ದಾರೆ ಜರೀನ್.

  ಉಮಾಪತಿ ವೈರಿಯನ್ನು ನೇಪಾಳದಲ್ಲಿ ಲಾಕ್ ಮಾಡಿದ ಬೆಂಗಳೂರು ಪೊಲೀಸ್ | Filmibeat Kannada
  ತೆಲುಗಿನಲ್ಲಿಯೂ ಒಂದು ಸಿನಿಮಾದಲ್ಲಿ ನಟನೆ

  ತೆಲುಗಿನಲ್ಲಿಯೂ ಒಂದು ಸಿನಿಮಾದಲ್ಲಿ ನಟನೆ

  ಮಾಡೆಲಿಂಗ್ ಮಾಡುತ್ತಿದ್ದ ಜರೀನ್ ಖಾನ್ ಅನ್ನು 'ವೀರ್' ಸಿನಿಮಾಕ್ಕೆ ಸಲ್ಮಾನ್ ಖಾನ್ ಆಯ್ಕೆ ಮಾಡಿಕೊಂಡಿದ್ದರು. ಆಗ ಜರೀನ್ ಅನ್ನು ಕತ್ರೀನಾ ಕೈಫ್‌ಗೆ ಹೋಲಿಸಲಾಗುತ್ತಿತ್ತು. ಜರೀನ್ ಥೇಟ್ ಕತ್ರೀನಾ ಕೈಫ್ ರೀತಿಯೇ ಕಾಣಿಸುತ್ತಿದ್ದರು. 'ವೀರ್' ಸಿನಿಮಾ ಬಿಡುಗಡೆ ಆದ ಬಹುತೇಕ ಎರಡು ವರ್ಷದ ಬಳಿಕ ಅವರಗೆ 'ಹೌಸ್‌ಫುಲ್' ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಕೆಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ತೆಲುಗಿನಲ್ಲಿಯೂ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Actress Zareen Khan said Salman Khan's 'Veer' movie backfired on her. She debuted by Salman Khan's 'Veer' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X