»   » ಮಗನ ಪರವಾಗಿ ಕ್ಷಮೆ ಯಾಚಿಸಿದ ಸಲ್ಮಾನ್ ತಂದೆ ಸಲೀಂ

ಮಗನ ಪರವಾಗಿ ಕ್ಷಮೆ ಯಾಚಿಸಿದ ಸಲ್ಮಾನ್ ತಂದೆ ಸಲೀಂ

By: Sonu Gowda
Subscribe to Filmibeat Kannada

ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಮಾಧ್ಯಮದ ಮುಂದೆ 'ಸುಲ್ತಾನ್' ಚಿತ್ರದ ಕುಸ್ತಿ ದೃಶ್ಯದ ಶೂಟಿಂಗ್ ಅನುಭವವನ್ನು 'ರೇಪ್ ಆದ ಮಹಿಳೆ'ಗೆ ಹೋಲಿಸಿದ ಬಗ್ಗೆ ಇಡೀ ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಇದೀಗ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ತಮ್ಮ ಮಗ ಸಲ್ಮಾನ್ ಖಾನ್ ಪರವಾಗಿ ಟ್ವಿಟ್ಟರ್ ಮೂಲಕ ಕ್ಷಮೆ ಯಾಚಿಸಿದ್ದಾರೆ.['ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ]

Salman's remark on rape was wrong: Says Salman's father Salim

"ಸಲ್ಮಾನ್ ಹೇಳಿಕೆ ನೀಡಿದ್ದು ತಪ್ಪಾಗಿದೆ. ಸಲ್ಮಾನ್ ಖಾನ್ ಹೇಳಿಕೆ ತಪ್ಪು ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಆದರೆ ಸಲ್ಮಾನ್ ಬರೀ ಮಾತಿಗೆ ಹೇಳಿದ್ದಾರೆ ಅಷ್ಟೇ ಬಿಟ್ಟರೆ ಉದ್ದೇಶಪೂರ್ವಕವಾಗಿ ಹೇಳಿರಲಿಲ್ಲ' ಎಂದು ಸಲ್ಲು ತಂದೆ ಸಲೀಂ ಖಾನ್ ಅವರು ಟ್ವಿಟ್ಟರ್ ನಲ್ಲಿ ಕ್ಷಮೆ ಕೋರಿದ್ದಾರೆ.

ಅಂದಹಾಗೆ ನಟ ಸಲ್ಮಾನ್ ಖಾನ್ ಅವರು ಕೂಡ ತಮ್ಮ ತಪ್ಪಿನ ಅರಿವಾಗಿ ಸುದ್ದಿಗೋಷ್ಠಿ ಮುಗಿದ ತಕ್ಷಣ ಎಲ್ಲರ ಮುಂದೆ ನಿಂತು ಕ್ಷಮೆ ಯಾಚನೆ ಮಾಡಿದ್ದಾರೆ.

ಹರ್ಯಾಣದ 'ಸುಲ್ತಾನ್' ಸಲ್ಮಾನ್ ಖಾನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಇದೀಗ ಮಹಿಳಾ ಆಯೋಗದವರು ಸಲ್ಮಾನ್ ಖಾನ್ ವಿರುದ್ಧ ಕಿಡಿ ಕಾರುತ್ತಿದ್ದು, ಸಲ್ಮಾನ್ ಅವರು ಇನ್ನು ಕೇವಲ 7 ದಿನಗಳೊಳಗಾಗಿ ಬಹಿರಂಗ ಕ್ಷಮೆ ಕೋರಬೇಕು, ಇಲ್ಲವಾದಲ್ಲಿ ಅವರನ್ನು ಆಯೋಗಕ್ಕೆ ಕರೆಸಲಾಗುವುದು ಎಂದಿದ್ದಾರೆ.

Salman's remark on rape was wrong: Says Salman's father Salim

"ಕುಸ್ತಿ ದೃಶ್ಯದ ಶೂಟಿಂಗ್ ನಲ್ಲಿ ನನ್ನ ದೇಹ ಎಷ್ಟು ದುರ್ಬಲವಾಗಿತ್ತು ಎಂದರೆ ಅತ್ಯಾಚಾರಕ್ಕೆ ಒಳಗಾದ ಒಬ್ಬ ಮಹಿಳೆಯ ಸ್ಥಿತಿಯಷ್ಟು ಶೋಚನೀಯವಾಗಿತ್ತು. ಅಸಾಧ್ಯ ನೋವಿತ್ತು. ಆವಾಗ ನಾನು ರೇಪ್ ಗೆ ಒಳಗಾದ ಮಹಿಳೆಯಂತೆ ನನ್ನ ನೋವನ್ನು ನಾನು ಅನುಭವಿಸಿದೆ" ಎಂದು ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಹೇಳಿಕೆ ನೀಡಿದ್ದರು.

Salman's remark on rape was wrong: Says Salman's father Salim

ಒಟ್ನಲ್ಲಿ ವಿಭಿನ್ನವಾಗಿ ಮಾಧ್ಯಮದ ಮುಂದೆ ಉತ್ತರಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾದ ಸಲ್ಮಾನ್ ಖಾನ್ ಅವರು ತದನಂತರ ಮುಕ್ತವಾಗಿ ಕ್ಷಮೆ ಯಾಚಿಸಿದ್ದಾರೆ. ಅನುಷ್ಕಾ ಶರ್ಮಾ ಮತ್ತು ಸಲ್ಮಾನ್ ಅಭಿನಯದ 'ಸುಲ್ತಾನ್' ಚಿತ್ರ 'ಈದ್'ಗೆ ತೆರೆ ಕಾಣುತ್ತಿದೆ.

English summary
Bollywood actor Salman Khan stating that his training for his role as a wrestler in "Sultan" left him feeling "like a raped woman", his father, Salim Khan, a noted film-writer, apologized with posts on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada