»   » ಸಂಜಯ್ ದತ್ ಅವರ ರೊಮ್ಯಾಂಟಿಕ್ ಫೋಟೋ ವೈರಲ್.!

ಸಂಜಯ್ ದತ್ ಅವರ ರೊಮ್ಯಾಂಟಿಕ್ ಫೋಟೋ ವೈರಲ್.!

Posted By:
Subscribe to Filmibeat Kannada

ಸೆಲೆಬ್ರಿಟಿಗಳ ದಾಂಪತ್ಯ ಜೀವನ ಎರಡು ರೀತಿಯಲ್ಲಿರುತ್ತೆ. ಕೆಲವರು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿ, ಸಮಾಜಕ್ಕೆ, ಚಿತ್ರರಂಗಕ್ಕೆ ಮಾದರಿಯಾಗ್ತಾರೆ. ಮತ್ತೆ ಕೆಲವರು ಮದುವೆಯಾದ ತಿಂಗಳುಗಳಲ್ಲೇ ವಿವಾದ ಮಾಡಿಕೊಂಡು, ಕೋರ್ಟ್, ಡಿವೋರ್ಸ್ ಅಂತ ದೂರವಾಗ್ತಾರೆ.

ಇಲ್ಲೊಂದು ಜೋಡಿಯಿದೆ ನೋಡಿ. ತಮ್ಮ ಒಂದೇ ಒಂದು ಫೋಟೋ ಮೂಲಕ ಇಡೀ ಬಾಲಿವುಡ್ ಮಂದಿಯನ್ನ ಆಕರ್ಷಣೆ ಮಾಡ್ತಿದ್ದಾರೆ. ಹೌದು, ನಟ ಸಂಜಯ್ ದತ್ ಮತ್ತು ಮಾನ್ಯತಾ ದತ್ ಅವರ ರೊಮ್ಯಾಂಟಿಕ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Sanjay Dutt and Maanayata's romantic pic is going viral

ಸಂಜಯ್ ದತ್ ಅವರಿಗೆ ಈ ಹಿಂದೆ ಎರಡು ಸಲ ವಿವಾಹವಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಆದ್ರೀಗ, ಮಾನ್ಯತಾ ಅವರೊಂದಿಗೆ ಸಂಜಯ್ ದತ್ ಸುಖಕರವಾದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಒಂದು ಫೋಟೋ ಸಾಕು.

ಈ ಫೋಟೋ ಸ್ವತಃ ಮಾನ್ಯತಾ ದತ್ ಅವರೇ ತಮ್ಮ instagram ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ಕೂಡ ಖುಷಿ ವ್ಯಕ್ತಪಡಿಸಿದ್ದರು.

ಅಕ್ರಮ ಶಸ್ತ್ರಾಸ್ತ್ರ ಆರೋಪದಲ್ಲಿ ಜೈಲು ಸೇರಿದ್ದ ಸಂಜಯ್‌ ದತ್‌, ಜೈಲಿನಿಂದ ಹೊರಬಂದ ನಂತರ ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸದ್ಯ, ಓಮಂಗ್ ಕುಮಾರ್ ನಿರ್ದೇಶನ ಮಾಡುತ್ತಿರುವ 'ಭೂಮಿ' ಚಿತ್ರದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ.

English summary
Sanjay Dutt and Maanayata's romantic pic is going viral. Sanjay Dutt’s wife Maanayata Dutt is super active on her Instagram and her latest post has made her followers very happy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada