»   » ಸೊಳ್ಳೆಬತ್ತಿ ಉಂಟು ಆದರೆ ಸಂಜುಗೆ ಹೊಗೆಬತ್ತಿ ಇಲ್ಲ

ಸೊಳ್ಳೆಬತ್ತಿ ಉಂಟು ಆದರೆ ಸಂಜುಗೆ ಹೊಗೆಬತ್ತಿ ಇಲ್ಲ

Posted By:
Subscribe to Filmibeat Kannada

ಬಾಲಿವುಡ್ ನಟ ಸಂಜಯ್ ದತ್ ಪ್ರಸ್ತುತ ಮುಂಬೈನ ಆರ್ಥರ್ ಜೈಲಿನಲ್ಲಿದ್ದಾರೆ. ಅವರನ್ನು ಶೀಘ್ರದಲ್ಲೇ ಪುಣೆಯ ಯಾರವಾಡಾ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನು ಅವರು 3 ವರ್ಷ 6 ತಿಂಗಳು ಜೈಲಿನಲ್ಲಿ ಕಳೆಯಬೇಕಾಗಿದೆ.

ಗುರುವಾರ (ಮೇ.16) ಅವರು ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ನಿಯಂತ್ರಣ ಕಾಯಿದೆ ) ಕೋರ್ಟಿನಲ್ಲಿ ಶರಣಾದ ಬಳಿಕ ನ್ಯಾಯಮೂರ್ತಿ ಜಿ.ಎಸ್.ಸನಪ್ ಅವರು ದತ್ ಅವರನ್ನು ಉದ್ದೇಶಿಸಿ ನಿಮ್ಮ ಹೆಸರೇನು ಎಂದರು.

ಇದಕ್ಕೆ ವಿನಮ್ರವಾಗಿಯೇ ಉತ್ತರಿಸಿದ ಅವರು, ಸಂಜಯ್ ಸುನೀಲ್ ದತ್ ಎಂದು ಹೇಳಿದರು. ಇದುವರೆಗೂ ಜೈಲಿನಲ್ಲಿ ಎಷ್ಟು ದಿನ ಕಳೆದಿದ್ದೀರಿ ಎಂದು ಕೇಳಿದರು. ಇದಕ್ಕೆ ಸಂಜು 551 ದಿನ ಎಂದರು. ಬಳಿಕ ಅವರ ಪರ ವಕೀಲರಾದ ರಿಜ್ವಾನ್ ಮರ್ಚೆಂಟ್ ತಮ್ಮ ಕಕ್ಷಿದಾರನಿಗೆ ಜೈಲಿನಲ್ಲಿ ಕಳೆಯಲು ಕೊಡಬೇಕಾದ ವಸ್ತುಗಳ ಬೇಡಿಕೆ ಇಟ್ಟರು.

ಹನುಮಾನ ಚಾಲೀಸ, ಭಗವದ್ಗೀತೆಯೇ ಗತಿ

ಹಾಸಿಗೆ, ದಿಂಬು, ಹನುಮಾನ್ ಚಾಲೀಸ, ರಾಮಾಯಣ, ಭಗವದ್ಗೀತೆ ಹಾಗೂ ಶೌಚಾಲಯದ ವಸ್ತುಗಳಾದ ಶಾಂಪು, ಚಪ್ಪಲಿ, ಟೂತ್ ಪೇಸ್ಟ್, ಕುರ್ತಾ ಪೈಜಾಮ, ಸೊಳ್ಳೆಬತ್ತಿ ಹಾಗೂ ಫ್ಯಾನ್ ನೀಡುವಂತೆ ವಿನಂತಿಸಿಕೊಳ್ಳಲಾಯಿತು. ಇದರ ಜೊತೆಗೆ ಇಲೆಕ್ಟ್ರಾನಿಕ್ ಸಿಗರೇಟು ಕೊಡಲು ಕೇಳಲಾಗಿತ್ತು.

ಸಿಗರೇಟ್, ವೋಡ್ಕಾಗೆ ಅವಕಾಶವಿಲ್ಲ

ಎಲ್ಲದಕ್ಕೂ ಓಕೆ ಎಂದ ನ್ಯಾಯಾಲಯ ಸಿಗರೇಟ್ ಗೆ ಅನುಮತಿ ನೀಡಿಲ್ಲ. ಅದರ ಬದಲು ಧೂಮಪಾನ ಬಿಡಲು ಸಲಹೆ ನೀಡಿದೆ. ಆದರೆ ಮನೆಯೂಟಕ್ಕೆ ಅನುಮತಿ ನೀಡಿದೆ. ಸಂಜಯ್ ದತ್ ಸಿಗರೇಟ್ ಇಲ್ಲದೆ ಮೂರು ವರ್ಷ ಅದೇಗೆ ಕಳೆಯುತ್ತಾನೋ ಏನೋ.

ವೋಡ್ಕಾ ಇಲ್ಲದಿದ್ದರೆ ನಿದ್ದೆಯೇ ಹತ್ತಲ್ವಂತೆ

ಶರಣಾಗುವುದಕ್ಕೂ ಮುನ್ನ ಸಂಜಯ್ ತೀವ್ರ ಒತ್ತಡಕ್ಕೆ ಒಳಗಾಗಿದ್ದ. ಪ್ರತಿದಿನ ವೋಡ್ಕಾ, ಸಿಗರೇಟ್ ಸೇದಿ ಒಂದಷ್ಟು ರಿಲ್ಯಾಕ್ಸ್ ಆಗುತ್ತಿದ್ದ. ವೋಡ್ಕಾ ಇಲ್ಲದೆ ಅವರಿಗೆ ನಿದ್ದೆ ಬರುತ್ತಿರಲಿಲ್ಲವಂತೆ. ಇನ್ನು ಧಂ ಎಳೆಯದಿದ್ದರೆ ತಲೆ ಚಿಟ್ಟುಹಿಡಿದುಹೋಗುತ್ತದಂತೆ. ಅದೇಗೆ ಸಂಭಾಳಿಸುತ್ತಾನೋ ಏನೋ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಕದ್ದುಮುಚ್ಚಿ ಸಿಗರೇಟ್ ಸೇದಬಹುದೆ?

ಒಟ್ಟಾರೆಯಾಗಿ ಸಂಜುಗೆ ಕೊಟ್ಟಿರುವ ಜೈಲು ಶಿಕ್ಷೆಗಿಂತಲೂ ಸಿಗರೇಟ್ ಕಟ್ ಮಾಡಿರುವುದೇ ದೊಡ್ಡ ಶಿಕ್ಷೆಯಾಗಿದೆ. ಅಯ್ಯೋ ಬಿಡ್ರಿ ಜೈಲಲ್ಲಿ ಮೊಬೈಲ್ ಫೋನ್ ಗಳೇ ಸಿಗುತ್ತವೆ. ಇನ್ನು ಸಿಗರೇಟ್ ಸಿಗಲ್ಲವೆ? ಕದ್ದುಮುಚ್ಚಿ ಸಿಗರೇಟ್ ಹೊಡೀಬಹುದು ಬಿಡ್ರಿ ಎಂಬ ಮಾತುಗಳು ಕೇಳಿಬರುತ್ತಿವೆ.

ಕಸಬ್ ಕೋಣೆಯಲ್ಲಿ ಸಂಜಯ್ ದತ್

ಇದೀಗ ಬಂದ ಮಾಹಿತಿ ಪ್ರಕಾರ ಸಂಜಯ್ ದತ್ ಅವರಿಗೆ ಮುಂಬೈನ ಆರ್ಥರ್ ಜೈಲಿನಲ್ಲಿ ಉಗ್ರ ಕಸಬ್ ಇದ್ದ ಕೊಠಡಿಯನ್ನು ಕೊಡಲಾಗಿದೆಯಂತೆ. ಉಗ್ರರಿಗೆ ಸಹಾಯ ಮಾಡಿದ್ದಕ್ಕೆ ಉಗ್ರಶಿಕ್ಷೆಯೇ ಆಗಿದೆ ಬಿಡಿ.

English summary
Actor Sanjay Dutt is allowed to take inside the jail his mattress, pillow, copy of Hanuman Chalisa, Ramayan, Bhagvad Gita and his own toiletries including toothpaste, shampoo, slippers, kurta pyjama and mosquito repellent and a fan.
Please Wait while comments are loading...