For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ನಟಿ ಸಪ್ನಾ ಗೆ ಎನ್‌ಸಿಬಿ ಸಮನ್ಸ್, ವಿಚಾರಣೆಗೆ ಹಾಜರಾಗಲು ಸೂಚನೆ

  |

  ಸುಶಾಂತ್ ಸಿಂಗ್ ಪ್ರಕರಣ ತನಿಖೆಯಿಂದ ಹೊರಬಿದ್ದಿರುವ ಡ್ರಗ್ಸ್‌ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಯು ಹಲವು ಖ್ಯಾತ ನಟಿಯರನ್ನು ವಿಚಾರಣೆಗೆ ಒಳಪಡಿಸಿದೆ.

  ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಅವರುಗಳನ್ನು ಈಗಾಗಳೇ ಎನ್‌ಸಿಬಿ ವಿಚಾರಣೆ ನಡೆಸಿದೆ. ಇವರುಗಳ ಜೊತೆಗೆ ಮತ್ತೊಬ್ಬ ಬಾಲಿವುಡ್ ನಟಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಿದೆ ಎನ್‌ಸಿಬಿ.

  ಸುಶಾಂತ್ ಸಿಂಗ್ ಸಾವಿನ ಪ್ರಕರಣ: 'ರಿಪಬ್ಲಿಕ್ ಟಿವಿ' ವರದಿಯನ್ನು ಪ್ರಶ್ನಿಸಿದ ಹೈಕೋರ್ಟ್

  ಸುಶಾಂತ್ ಸಿಂಗ್ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದ ಸಪ್ನಾ ಪಬ್ಬಿಗೆ ಎನ್‌ಸಿಬಿಯು ಸಮನ್ಸ್‌ ನೀಡಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

  ಅರ್ಜುನ್ ರಾಮ್‌ಪಾಲ್ ಪ್ರೇಯಸಿ ತಮ್ಮನಿಂದ ಮಾಹಿತಿ

  ಅರ್ಜುನ್ ರಾಮ್‌ಪಾಲ್ ಪ್ರೇಯಸಿ ತಮ್ಮನಿಂದ ಮಾಹಿತಿ

  ಕೆಲ ದಿನಗಳ ಹಿಂದಷ್ಟೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ರಾಮ್‌ಪಾಲ್ ಪ್ರೇಯಸಿ ಗೇಬ್ರಿಯಲ್ ಳ ಸಹೋದರನನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿತ್ತು, ಆ ವೇಳೆ ಆತ ಸಪ್ನಾ ಹೆಸರನ್ನು ಹೇಳಿದ್ದಾನೆ ಎನ್ನಲಾಗುತ್ತಿದೆ.

  ರಿಯಾ ಚಕ್ರವರ್ತಿ ಸಹೋದರನ ಜಾಮೀನು ಅರ್ಜಿ ತಿರಸ್ಕೃತ

  ಪರಾರಿಯಾಗಿದ್ದಾರೆಯೇ ಸಪ್ನಾ ಪಬ್ಬಿ?

  ಪರಾರಿಯಾಗಿದ್ದಾರೆಯೇ ಸಪ್ನಾ ಪಬ್ಬಿ?

  ಎನ್‌ಸಿಬಿ ಯಿಂದ ಸಮನ್ಸ್ ವಿತರಣೆ ಆಗುತ್ತಿದ್ದಂತೆ ನ ಟಿ ಸಪ್ನಾ ಪರಾರಿ ಆಗಿದ್ದಾರೆ. ವಿದೇಶಕ್ಕೆ ಹಾರಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಗಾಳಿ ಸುದ್ದಿಗಳಿಗೆ ನಟಿ ಸಪ್ನಾ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮೂಲಕ ಉತ್ತರ ನೀಡಿದ್ದಾರೆ.

  ಕುಟುಂಬದೊಂದಿಗೆ ಲಂಡನ್‌ ನಲ್ಲಿ ಇದ್ದೇನೆ: ಸಪ್ನಾ

  ಕುಟುಂಬದೊಂದಿಗೆ ಲಂಡನ್‌ ನಲ್ಲಿ ಇದ್ದೇನೆ: ಸಪ್ನಾ

  'ನಾನು ಕುಟುಂಬವನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ಲಂಡನ್‌ಗೆ ಬಂದಿದ್ದೇನೆ. ನನ್ನ ವಕೀಲರು ಈ ಬಗ್ಗೆ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾನು ಎಲ್ಲಿದ್ದೇನೆ ಎಂಬ ಮಾಹಿತಿ ಎನ್‌ಸಿಬಿ ಗೆ ಇದೆ, ನಾನು ಎಲ್ಲೂ ತಪ್ಪಿಸಿಕೊಂಡು ಹೋಗಿಲ್ಲ' ಎಂದಿದ್ದಾರೆ ಸಪ್ನಾ.

  ಎನ್‌ಸಿಬಿ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಸುಶಾಂತ್ ಮನೆ ಸಹಾಯಕ

  ಸುಶಾಂತ್ ಜೊತೆಗೆ ಡ್ರೈವ್ ಸಿನಿಮಾದಲ್ಲಿ ನಟನೆ

  ಸುಶಾಂತ್ ಜೊತೆಗೆ ಡ್ರೈವ್ ಸಿನಿಮಾದಲ್ಲಿ ನಟನೆ

  ನಟಿ ಸಪ್ನಾ ಸುಶಾಂತ್ ಸಿಂಗ್ ಜೊತೆಗೆ 'ಡ್ರೈವ್' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದರ ಜೊತೆಗೆ ತೆಲುಗಿನ ತೊಲಿ ಪ್ರೇಮ, ಅರ್ದಾಸ್ ಕರಾನ್ ಹಾಗೂ ಮತ್ತೊಂದು ಪಂಜಾಬಿ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಪ್ರಸ್ತುತ ಸತ್ರಾಕೊ ಶಾದಿ ಹೈ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

  ಸುಶಾಂತ್ ಸಾವಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ

  English summary
  Actress Sapna Pabbi summoned by NCB releated to drug case. She said i am in London now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X