Just In
Don't Miss!
- News
ಪಶ್ಚಿಮ ಬಂಗಾಳ ಚುನಾವಣೆ; ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Education
IIMB Recruitment 2021: ಅಕಾಡೆಮಿಕ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Sports
ಐಪಿಎಲ್ 2021: ಹೊಸ ಆವೃತ್ತಿಗೆ ಸಿದ್ಧತೆ, ಚೆನ್ನೈಗೆ ಬಂದಿಳಿದ ಧೋನಿ, ರಾಯುಡು
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಟಾರ್ ನಟನ ಪುತ್ರಿಗೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ
ಇನ್ನು ಮೊದಲ ಸಿನಿಮಾನೇ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಈಕೆಗೆ ಬಾಲಿವುಡ್ ಸಿನಿಮಾ ಮಂದಿ ಮರುಳಾಗಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಆಫರ್ ನೀಡುತ್ತಿದ್ದಾರೆ. ನಾವ್ ಹೇಳ್ತಿರೋದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಗ್ಗೆ.
ಸಾರಾ ಅಲಿ ಖಾನ್ ಚೊಚ್ಚಲ ಸಿನಿಮಾ 'ಕೇದರ್ನಾಥ್' ಶೂಟಿಂಗ್ ಹಂತದಲ್ಲಿದೆ. ಮೊದಲ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಸಾರಾ, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ, ಬಿ-ಟೌನ್ ಬಿಗ್ ಸ್ಟಾರ್ ಗಳ ಚಿತ್ರಕ್ಕೆ ಸಾರಾ ಅಲಿ ಖಾನ್ ಅವರನ್ನ ನಾಯಕಿಯನ್ನಾಗಿಸುವ ಯೋಚನೆ ನಡೆಯುತ್ತಿರುವುದು ತೀರಾ ಕುತೂಹಲ ಮೂಡಿಸಿದೆ.
ಮಗಳ ಬಾಲಿವುಡ್ ಎಂಟ್ರಿಗೆ ಅಪ್ಪ ಸೈಫ್ ಅಲಿ ಖಾನ್ ಬೇಸರ!
ಹೌದು, ಹೃತಿಕ್ ರೋಷನ್ ಅಭಿನಯಿಸಲಿರುವ 'ಸೂಪರ್-30' ಚಿತ್ರದಲ್ಲಿ ಸಾರಾ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಲು ಚರ್ಚೆ ನಡೆಯುತ್ತಿದೆ. ಈಗಾಗಲೇ ಮಾತುಕತೆ ಆರಂಭಿಸಿದ್ದು, ಬಹುತೇಕ ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರ ಜೊತೆ 'ಮೊಹೆಂಜೆದರೋ' ಖ್ಯಾತಿಯ ಅಶುತೋಷ್ ಗೋವಾರಿಕರ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೂ ಸಾರಾ ಅವರನ್ನ ಕರೆತರುವ ಪ್ಲಾನ್ ಮಾಡಲಾಗಿದೆಯಂತೆ.
ಡಿಸೆಂಬರ್ ತಿಂಗಳಿನಲ್ಲಿ ಸಾರಾ ಅಭಿನಯದ 'ಕೇದರ್ನಾಥ್' ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕು ಮುಂಚೆಯೇ ಈ ಮಟ್ಟದ ಅವಕಾಶಗಳು ಬರುತ್ತಿರುವುದು ಎಲ್ಲರ ಕಣ್ಣು ಹುಬ್ಬೇರಿಸುವಂತಿದೆ.