Just In
Don't Miss!
- Sports
ಪಂತ್ ತನ್ನನ್ನು ವಾಸಿಂ ಭಾಯ್ ಎನ್ನುವುದರ ಗುಟ್ಟು ಬಿಚ್ಚಿಟ್ಟ ಅಕ್ಸರ್ ಪಟೇಲ್
- Automobiles
ಕುಶಾಕ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಇಂಟಿರಿಯರ್ ಡಿಸೈನ್ ಬಹಿರಂಗ
- Finance
EPFO ಮಹತ್ವದ ಘೋಷಣೆ: 2020-21ರ ಪಿಎಫ್ ಬಡ್ಡಿ ದರ 8.5%
- News
ಕೊರೊನಾ ಲಸಿಕೆ ಪಡೆಯುವ ಮುನ್ನ, ನಂತರ ಏನು ಮಾಡಬೇಕು?
- Lifestyle
ನಿಮ್ಮ ಕೂದಲಿನ ಸಮಸ್ಯೆಗೆ ತುಪ್ಪ ಮಾಡಲಿದೆ ಮ್ಯಾಜಿಕ್!
- Education
NITK Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ಮಾಣವಾಗುತ್ತಿದೆ 22 ವರ್ಷ ಹಿಂದಿನ ಸಿನಿಮಾದ ಮುಂದಿನ ಭಾಗ!
ಬಾಹುಬಲಿ ಬಿಡುಗಡೆ ಆದ ಎರಡು ವರ್ಷದೊಳಗೆ ಬಾಹುಬಲಿ 2 ಬಿಡುಗಡೆ ಆಯಿತು. ಕೆಜಿಎಫ್ ಬಿಡುಗಡೆ ಆದ ಮೂರು ವರ್ಷದಲ್ಲಿ ಕೆಜಿಎಫ್ 2 ಬಿಡುಗಡೆ ಆಗುತ್ತಿದೆ. ಹೀಗೆ ಒಂದು ಸಿನಿಮಾದ ಮುಂದುವರೆದ ಭಾಗ ಹೆಚ್ಚೆಂದರೆ ಮೂರು ವರ್ಷದ ಒಳಗೆ ಬಿಡುಗಡೆ ಆಗುವುದು ಸಾಮಾನ್ಯ.
ಆದರೆ ಬಾಲಿವುಡ್‌ನ ನಿರ್ದೇಶಕರೊಬ್ಬರು, 22 ವರ್ಷ ಹಳೆಯ ಸಿನಿಮಾದ ಮುಂದುವರೆದ ಭಾಗವನ್ನು ಈಗ ನಿರ್ದೇಶಿಸಲು ತಯಾರಿ ನಡೆಸಿದ್ದಾರೆ.
22 ವರ್ಷದ ಹಿಂದೆ 1999 ರಲ್ಲಿ ಬಿಡುಗಡೆ ಆಗಿ ಭಾರಿ ಹೆಸರು ಗಳಿಸಿದ 'ಸರ್ಫರೋಶ್' ಸಿನಿಮಾದ ಮುಂದುವರೆದ ಭಾಗ ನಿರ್ದೇಶಿಸಲಿದ್ದಾರೆ ನಿರ್ದೇಶಕ ಜಾನ್ ಮ್ಯಾಥ್ಯೂ ಮತ್ತನ್. 22 ವರ್ಷದ ಹಿಂದೆ ಇವರೇ ಸರ್ಫರೋಶ್ ಸಿನಿಮಾ ನಿರ್ದೇಶಿಸಿದ್ದರು.
ಅಮೀರ್ ಖಾನ್, ಸೊನಾಲಿ ಬೇಂದ್ರೆ, ನಾಸಿರುದ್ಧೀನ್ ಶಾ ನಟಿಸಿದ್ದ ಈ ಸಿನಿಮಾ ಭಾರಿ ಹಿಟ್ ಆಗಿತ್ತು. ಅಷ್ಟು ಮಾತ್ರವೇ ಅಲ್ಲದೆ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಇಂದಿಗೂ ಈ ಸಿನಿಮಾವನ್ನು ನೆನಪಿಸಿಕೊಳ್ಳುವವರಿದ್ದಾರೆ.

'ಸರ್ಫರೋಶ್ 2' ನಿರ್ದೇಶಿಸಲಿದ್ದಾರೆ ಮ್ಯಾಥ್ಯು
ಉಗ್ರಗಾಮಿ, ಪೊಲೀಸ್, ಪ್ರೀತಿ, ಸಂಗೀತ ಇತರೆ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದ್ದ ಈ ಸಿನಿಮಾದ ಮುಂದುವರೆದ ಭಾಗವನ್ನು 'ಸರ್ಫರೋಶ್ 2' ಹೆಸರಿನಲ್ಲಿ ನಿರ್ದೇಶಿಸುತ್ತಾರಂತೆ ಮ್ಯಾಥ್ಯು.

'ಸರ್ಫರೋಶ್ 2' ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದರು
'ಸರ್ಫರೋಶ್ 2' ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದಾರೆ. ಸಿನಿಮಾವನ್ನು ನಿರ್ಮಾಣ ಸಹ ಅವರೇ ಮಾಡುತ್ತಾರೆ ಎನ್ನುವ ಸುದ್ದಿಗಳು 2018 ರಲ್ಲಿ ಹರಿದಾಡಿತ್ತು. ಆದರೆ ಆ ನಂತರ ನಿರ್ದೇಶಕ ಮ್ಯಾಥ್ಯು ಆ ಪ್ರಾಜೆಕ್ಟ್‌ನಿಂದ ಹೊರಬಂದರು.

ಸಿಆರ್‌ಪಿಎಫ್ ಯೋಧರಿಗೆ ಸಿನಿಮಾ ಅರ್ಪಣೆ
ಆದರೆ ಗೋವಾ ಸಿನಿಮಾ ಉತ್ಸವದಲ್ಲಿ ಈ ಬಗ್ಗೆ ಮಾತನಾಡಿರುವ ಮ್ಯಾಥ್ಯು, 'ಸರ್ಫರೋಶ್ 2 ಸಿನಿಮಾದ ಚಿತ್ರಕತೆಯನ್ನು ಆರು ಬಾರಿ ತಿದ್ದಿದ್ದೇನೆ. ಆ ಸಿನಿಮಾವನ್ನು ನಾನು ಸಿಆರ್‌ಪಿಎಫ್ ಯೋಧರಿಗೆ ಅರ್ಪಿಸಲಿದ್ದೇನೆ' ಎಂದಿದ್ದಾರೆ ಮ್ಯಾಥ್ಯು.

ಆಂತರಿಕ ಭದ್ರತೆ ಬಗ್ಗೆ ಸರ್ಫರೋಶ್ 2 ಸಿನಿಮಾ
1999 ರಲ್ಲಿ ಬಿಡುಗಡೆ ಆಗಿದ್ದ 'ಸರ್ಫರೋಶ್' ಸಿನಿಮಾವು ಉಗ್ರಗಾಮಿಗಳ ಕುರಿತಾಗಿ ಇತ್ತು. ಮೆಡಿಕಲ್ ವಿದ್ಯಾರ್ಥಿಯೊಬ್ಬ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ ಪೊಲೀಸ್ ನೌಕರಿಗೆ ಸೇರಿ ಹೇಗೆ ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಾನೆ ಎಂಬುದು ಕತೆಯಾಗಿತ್ತು. ಹೊಸ ಸರ್ಫರೋಶ್ 2 ಸಿನಿಮಾ ಆಂತರಿಕ ಭದ್ರತೆ ಕುರಿತಾಗಿ ಇರುತ್ತದೆ ಎಂದಿದ್ದಾರೆ ನಿರ್ದೇಶಕ.