»   » 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ತಾಯಿ ಮಗಳ ಭಾವನಾತ್ಮಕ ಹಾಡು ರಿಲೀಸ್

'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ತಾಯಿ ಮಗಳ ಭಾವನಾತ್ಮಕ ಹಾಡು ರಿಲೀಸ್

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಸದ್ಯ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ 'ಸೀಕ್ರೆಟ್ ಸೂಪರ್ ಸ್ಟಾರ್' ಕೂಡ ಒಂದು. ನಟ ಅಮೀರ್ ಖಾನ್ ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರ ಈಗಾಗಲೇ ಟ್ರೇಲರ್ ನ ಮೂಲಕ ದೊಡ್ಡ ಸದ್ದು ಮಾಡಿತ್ತು. ಈಗ ಸಿನಿಮಾದ ಒಂದು ಹಾಡು ಬಿಡುಗಡೆಯಾಗಿದೆ.

ಧೂಳೆಬ್ಬಿಸುತ್ತಿದೆ ಅಮೀರ್ ಖಾನ್ 'ಸೀಕ್ರೆಟ್ ಸೂಪರ್ ಸ್ಟಾರ್' ಟ್ರೇಲರ್

ಈ ಹಾಡಿನಲ್ಲಿ ತಾಯಿ ಮತ್ತು ಮಗಳ ಭಾವನಾತ್ಮಕ ಸಂಬಂಧವನ್ನು ತೋರಿಸಲಾಗಿದೆ. ಕೆಲ ದೃಶ್ಯಗಳು ನಿಜಕ್ಕೂ ಅದ್ಬುತವಾಗಿದೆ. 'ದಂಗಲ್' ಸಿನಿಮಾದಲ್ಲಿ ಅಮೀರ್ ಖಾನ್ ಅವರ ಪುಟ್ಟ ಮಗಳ ಪಾತ್ರವನ್ನು ನಿರ್ವಹಿಸಿದ್ದ ಝಯಿರಾ ವಾಸಿಮ್ ಇಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಝೈರಾ ವಾಸಿಮ್, 14 ವರ್ಷದ ಇನ್ಸಿಯಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸು ಇಟ್ಟುಕೊಂಡಿರುವ ಸಣ್ಣ ಹುಡುಗಿಯ ಕಥೆ ಇದಾಗಿದೆ.

'Secret Superstar' movie video song released

ತಮ್ಮ ನಿರ್ಮಾಣದಲ್ಲಿ ವಿಭಿನ್ನ ಕಥೆಯ ಸಿನಿಮಾಗಳನ್ನು ಮಾಡುವ ಅಮೀರ್ ಮತ್ತೊಂದು ಅದ್ಭುತ ಕಥೆಯ ಚಿತ್ರ ಮಾಡಿದ್ದಾರೆ. 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರಕ್ಕೆ ಅದ್ವೈತ್ ಚಂದನ್ ನಿರ್ದೇಶನವಿದೆ. ಅಮಿತ್ ತಿವಾರಿ ಸಂಗೀತ ನೀಡಿದ್ದಾರೆ. ಸದ್ಯ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು, ಅಕ್ಟೋಬರ್ 19ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

English summary
Actor Aamir Khan Production 'Secret Superstar' movie video song released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada