Just In
Don't Miss!
- News
ಕೃಷಿ ಕಾಯ್ದೆಗಳ ಕಥೆ: ರೈತರಿಗೆ ಸಮಾಧಾನ ನೀಡದ "ಸಂಧಾನ" ಸಭೆಗಳ ಸಾಲು!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Sports
ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
17 ವರ್ಷದ ಸಂಭ್ರಮದಲ್ಲಿ 'ಕಲ್ ಹೋ ನಾ ಹೋ'; ಪ್ರೀತಿ ಜಿಂಟಾ ಹೇಳಿದ್ದೇನು?
ಬಾಲಿವುಡ್ ಖ್ಯಾತ ನಟಿ ಪ್ರೀತಿ ಜಿಂಟಾ ಅವರ ಯಶಸ್ವಿ ಸಿನಿಮಾಗಳಲ್ಲಿ ಕಲ್ ಹೋ ನಾ ಹೋ ಸಿನಿಮಾ ಕೂಡ ಒಂದು. ಈ ಸೂಪರ್ ಹಿಟ್ ಸಿನಿಮಾ ರಿಲೀಸ್ ಆಗಿ 17 ವರ್ಷಗಳು ಕಳೆದಿವೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ಪ್ರೀತಿ ಜಿಂಟಾ ನಾಯಕಿಯಾಗಿ ಮಿಂಚಿದ್ದರು.
17 ವರ್ಷಗಳ ಹಿಂದೆ ಅಂದರೆ 2003 ನವೆಂಬರ್ 27ರಂದು ಈ ಸಿನಿಮಾ ರಿಲೀಸ್ ಆಗಿತ್ತು. ನಿಖಿಲ್ ಅಡ್ವಾಣಿ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾಗೆ ಕರಣ್ ಜೋಹರ್ ನಿರ್ಮಾಣ ಮಾಡಿದ್ದರು. ವಿಶೇಷ ಎಂದರೆ ಕರಣ್ ಬಂಡವಾಳ ಹೂಡಿದ್ದಷ್ಟೆಯಲ್ಲದೆ ಚಿತ್ರಕ್ಕೆ ಕಥೆ ಸಹ ಅವರೆ ಬರೆದಿದ್ದಾರೆ.
'ನಿನಗೇನು ಹುಚ್ಚು ಹಿಡಿದಿದೆಯೇ?': ಮೊದಲ ಚಿತ್ರದ ನೆನಪು ಹಂಚಿಕೊಂಡ ಪ್ರೀತಿ ಜಿಂಟಾ

ನಗಿಸಿ, ಅಳುವಂತೆ ಮಾಡಿದ ಸಿನಿಮಾ
17 ವರ್ಷ ಪೂರೈಸಿರುವ ಈ ಸಿನಿಮಾದ ಬಗ್ಗೆ ನಟಿ ಪ್ರೀತಿ ಜಿಂಟಾ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. 'ಹಲ್ ಹೋ ನಾ ಹೋ ಸಿನಿಮಾವನ್ನು ನೆನಪಿಸಿಕೊಳ್ಳುವ ದಿನ. ನನ್ನನ್ನು ನಗಿಸಿ, ಅಳುವಂತೆ ಮಾಡಿದ ಸಿನಿಮಾ. ಪದಗಳಿಗೂ ಮೀರಿದ ಅನುಭವ. ಇದು ಬಹುಶಃ ನನ್ನ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ ಇಷ್ಟು ಸ್ಮರಣೀಯವಾಗಿಸಿದ್ದಕ್ಕಾಗಿ ಕರಣ್ ಜೋಹರ್, ನಿಖಿಲ್ ಅಡ್ವಾಣಿ, ಶಾರುಖ್ ಖಾನ್ ಮತ್ತು ಸೈಫ್ ಅಲಿ ಖಾನ್ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಅಮೀರ್ ಖಾನ್ ಜತೆ ಸೀಕ್ರೇಟ್ ಮದುವೆಯಾಗಿದ್ದರೇ ಗುಳಿಕೆನ್ನೆ ಹುಡುಗಿ?: ಪ್ರೀತಿ ಜಿಂಟಾ ಹೇಳಿದ ಸತ್ಯ

ಎರಡು ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು
ಚಿತ್ರದ ಹಾಡನ್ನು ಶೇರ್ ಮಾಡಿ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಈ ಸಿನಿಮಾ ಎರಡು ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಒಂದು ಗಾಯಕ ಸೋನು ನಿಗಂ ಹಾಗೂ ಮತ್ತೊಂದು ಪ್ರಶಸ್ತಿ ಸಂಗೀತ ನಿರ್ದೇಶಕ ಶಂಕರ್ ಎಹ್ಸಾನ್ ಅವರಿಗೆ ಬಂದಿದೆ.

ಸಿನಿಮಾ ರಿಜೆಕ್ಟ್ ಮಾಡಿದ್ದ ಕರೀನಾ ಕಪೂರ್
ವಿಶೇಷ ಎಂದರೆ ಈ ಸಿನಿಮಾದಲ್ಲಿ ಕರೀನಾ ಕಪೂರ್ ಅಭಿನಯಿಸಬೇಕಿತ್ತಂತೆ. ಆದರೆ ಕರೀನಾ ತಿರಸ್ಕರಿಸಿದ ಕಾರಣ ಪ್ರೀತಿ ಜಿಂಟಾ ಪಾಲಾಯಿತು. ಈ ಬಗ್ಗೆ ಕರೀನಾ ಕಪೂರ್ ಬೇಸರ ವ್ಯಕ್ತಪಡಿಸಿದ್ದರು. ಈ ಸಿನಿಮಾ ರಿಲೀಸ್ ಆದ ಕೆಲವೇ ತಿಂಗಳಲ್ಲಿ ಕರಣ್ ಜೋಹರ್ ತಂದೆ ಯಶ್ ಜೋಹರ್ ನಿಧನ ಹೊಂದಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದರು ಶಾರುಖ್
ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಳಿಕ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ದರು. ಅದೇ ಸಮಯದಲ್ಲಿ ಶಾರುಖ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಸಿಕೊಂಡ ಬಳಿಕ ಶಾರುಖ್ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು.