For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಮಗನ ವಿಚಾರಣೆ: ಅಕ್ಷಯ್ ಮಗನೊಂದಿಗೆ ಹೋಲಿಕೆ

  By ಫಿಲ್ಮಿಬೀಟ್ ಡೆಸ್ಕ್
  |

  ಶಾರುಖ್ ಖಾನ್ ಪುತ್ರ ಆರ್ಯನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ಖಾತ್ರಿಯಾಗಿದೆ. ಆರ್ಯನ್ ಎನ್‌ಸಿಬಿ ಕಚೇರಿಯಲ್ಲಿ ಕುಳಿತಿರುವ ಚಿತ್ರಗಳು, ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಭಾರತದ ಅತಿ ದೊಡ್ಡ ಸ್ಟಾರ್ ನಟ ಶಾರುಖ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ವಿಷಯದ ಬಗ್ಗೆ ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಚರ್ಚೆಯಾಗುತ್ತಿದೆ.

  ಸಾಮಾಜಿಕ ಜಾಲತಾಣಗಳಲ್ಲಿ ಶಾರುಖ್ ಪುತ್ರನನ್ನು ಅಕ್ಷಯ್ ಕುಮಾರ್ ಪುತ್ರನೊಂದಿಗೆ ಹೋಲಿಸಿ ಹಲವು ಪೋಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಪುತ್ರನ ಸ್ಥಿತಿಗೆ ಶಾರುಖ್ ಅನ್ನು ದೋಷಿಯನ್ನಾಗಿಸಿ ಮೂದಲಿಕೆಯ ಸುರಿಮಳೆಯೇ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿದೆ.

  ಶಾರುಖ್ ಖಾನ್ ಸ್ವತಃ ಚೈನ್ ಸ್ಮೋಕರ್, ಮಗ ಅಪ್ಪನನ್ನು ಮೀರಿಸಿದ್ದಾನೆ ಎಂದು ಹಲವರು ಹೇಳಿದ್ದಾರೆ. ಅಕ್ಷಯ್ ಕುಮಾರ್ ತನ್ನ ಮಗನಿಗೆ ಅಡುಗೆ ಮಾಡುವುದು, ದೇವರ ಪೂಜೆ ಮಾಡುವುದು ಹೇಳಿಕೊಟ್ಟರೆ ಶಾರುಖ್ ಸಿಗರೇಟು ಸೇದುವುದು, ಡ್ರಗ್ಸ್ ಸೇವಿಸುವುದು ಹೇಳಿಕೊಟ್ಟಿದ್ದಾನೆ ಎಂದೂ ಸಹ ಹಲವರು ಹೇಳಿದ್ದಾರೆ. ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

  ಶಾರುಖ್ ಕುಟುಂಬಕ್ಕೆ ಸಂಸ್ಕಾರವಿಲ್ಲ ಎಂದ ನೆಟ್ಟಿಗರು

  ಶಾರುಖ್ ಕುಟುಂಬಕ್ಕೆ ಸಂಸ್ಕಾರವಿಲ್ಲ ಎಂದ ನೆಟ್ಟಿಗರು

  ಶಾರುಖ್ ಕುಟುಂಬವನ್ನೂ ಗುರಿ ಮಾಡಿ ಹಲವು ಟ್ವೀಟ್‌ಗಳು ಮಾಡಲಾಗಿದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಉಡುಪಿನ ಬಗ್ಗೆ, ಶಾರುಖ್ ಖಾನ್ ಮಗಳು ಬಿಕಿನಿ ಧರಿಸುವ ಚಿತ್ರಗಳನ್ನು ಹಂಚಿಕೊಂಡಿರುವ ಕೆಲವರು ಶಾರುಖ್ ಕುಟುಂಬದ ಸಂಸ್ಕಾರವನ್ನು ಪ್ರಶ್ನಿಸಿದ್ದಾರೆ. ಆರ್ಯನ್‌ ಸಿಗರೇಟು ಸೇದುತ್ತಿರುವ ಕೆಲವು ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

  ''ಅಪ್ಪ ಕ್ಯಾನ್ಸರ್ ಹಂಚುತ್ತಾನೆ, ಮಗ ಡ್ರಗ್ಸ್ ಮಾಡುತ್ತಾನೆ''

  ''ಅಪ್ಪ ಕ್ಯಾನ್ಸರ್ ಹಂಚುತ್ತಾನೆ, ಮಗ ಡ್ರಗ್ಸ್ ಮಾಡುತ್ತಾನೆ''

  ಶಾರುಖ್ ಖಾನ್‌ ಬಗ್ಗೆಯೂ ಹಲವಾರು ಮಂದಿ ಟ್ವೀಟ್‌ ಮಾಡಿದ್ದು, ಶಾರುಖ್ ಖಾನ್‌ರ ಸಿಗರೇಟು ಅಭ್ಯಾಸವನ್ನು ಜೊತೆಗೆ ಇತ್ತೀಚೆಗೆ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಟೀಕಿಸಿದ್ದಾರೆ. ಶಾರುಖ್ ಇಡೀ ದೇಶಕ್ಕೆ ಗುಟ್ಕಾ ಜಾಹೀರಾತಿನ ಮೂಲಕ ಕ್ಯಾನ್ಸರ್ ಹಂಚುತ್ತಿದ್ದಾರೆ. ಈಗ ಮಗ ತಾನೂ ಕಡಿಮೆ ಇಲ್ಲವೆಂದು ಅಪ್ಪನನ್ನೂ ಮೀರಿಸಿ ನೇರ ಡ್ರಗ್ಸ್‌ಗೆ ಕೈ ಹಾಕಿದ್ದಾನೆ ಎಂದಿದ್ದಾರೆ.

  ಸಮುದ್ರ ಮಧ್ಯೆ ಪಾರ್ಟಿ

  ಸಮುದ್ರ ಮಧ್ಯೆ ಪಾರ್ಟಿ

  ಮುಂಬೈನಲ್ಲಿ ಸಮುದ್ರ ಮಧ್ಯೆ ಐಶಾರಾಮಿ ಕ್ರೂಸ್‌ ಶಿಪ್‌ನಲ್ಲಿ ಆಯೋಜಿತವಾಗಿದ್ದ ಪಾರ್ಟಿಯ ಮೇಲೆ ನಿನ್ನೆ ರಾತ್ರಿ ಮುಂಬೈ ಪೊಲೀಸ್ ಹಾಗೂ ಎನ್‌ಸಿಬಿ ದಾಳಿ ನಡೆಸಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಲಾಗುತ್ತಿತ್ತು ಎನ್ನಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ 10 ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ಅನ್ನು ವಿಚಾರಣೆಗೆ ಕರೆತರಲಾಗಿದ್ದು, ಆರ್ಯನ್ ಅನ್ನು ಎನ್‌ಸಿಬಿ ಕಚೇರಿ ಒಳಕ್ಕೆ ಕರೆದುಕೊಂಡು ಬಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಎನ್‌ಸಿಬಿ ಸಿಬ್ಬಂದಿ ಒಬ್ಬರು ಎನ್‌ಸಿಬಿ ಕಚೇರಿ ಒಳಗೆ ಶಾರುಖ್ ಖಾನ್ ಪುತ್ರನೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಆರ್ಯನ್ ಬಂಧನದ ಸಾಧ್ಯತೆ

  ಆರ್ಯನ್ ಬಂಧನದ ಸಾಧ್ಯತೆ

  ಆರ್ಯನ್‌ ಮೇಲೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ. ಆರ್ಯನ್‌ನ ಮೊಬೈಲ್‌ ಪರಿಶೀಲನೆ ನಡೆಸಲಾಗುತ್ತಿದ್ದು, ಡ್ರಗ್ಸ್ ಸೇವನೆ, ಖರೀದಿ ಇನ್ನಿತರೆ ಮಾಹಿತಿಗಳೇನಾದರೂ ದೊರಕಬಹುದೇ ಎಂದು ಎನ್‌ಸಿಬಿ ತನಿಖೆ ನಡೆಸುತ್ತಿದೆ. ಒಂದೊಮ್ಮೆ ಸಾಕ್ಷ್ಯಗಳು ದೊರೆತರೆ ಆರ್ಯನ್‌ ಅನ್ನು ಬಂಧಿಸಲಾಗುತ್ತದೆ. ಶಕ್ತಿ ಕಪೂರ್ ಪುತ್ರ ಸಿದ್ಧಾರ್ಥ್ ಕಪೂರ್ ಅನ್ನೂ ಎನ್‌ಸಿಬಿ ವಶಕ್ಕೆ ಪಡೆದಿದೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಸದ್ಯಕ್ಕೆ ನಿರ್ದೇಶಕ ಅಟ್ಲಿಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಮುಂಬೈನಲ್ಲಿಯೇ ಇದ್ದಾರೆ.

  ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಪ್ರಕರಣ

  ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಪ್ರಕರಣ

  ಬಾಲಿವುಡ್‌ ಡ್ರಗ್ಸ್ ಪ್ರಕರಣ ಕಳೆದ ಒಂದು ವರ್ಷದಿಂದಲೂ ಅತೀವವಾಗಿ ಸದ್ದು ಮಾಡುತ್ತಲೇ ಇದೆ. ನಟಿ ರಿಯಾ ಚಕ್ರವರ್ತಿ ಸೇರಿದಂತೆ ಬಾಲಿವುಡ್ ಉದ್ಯಮಕ್ಕೆ ಸಂಬಂಧಿಸಿದ ಹಲವರು ಈಗಾಗಲೇ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದಾರೆ. ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಅರ್ಜುನ್ ರಾಮ್‌ಪಾಲ್ ಸೇರಿ ಇನ್ನೂ ಹಲವು ಸ್ಟಾರ್ ನಟ-ನಟಿಯರ ವಿಚಾರಣೆಯನ್ನೂ ಎನ್‌ಸಿಬಿ ಈಗಾಗಲೇ ಮಾಡಿದೆ.

  English summary
  Shah Rukh Khan's son Aryan detained by NCB in drugs case. Netizen criticized Shah Rukh Khan and his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X