Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' ರನ್‌ಟೈಮ್ ಮಾಹಿತಿ ಬಹಿರಂಗ: ಜೋರಾಗಿದೆ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 15 ದಿನಗಳ ಹಿಂದೆಯೇ ಸಿನಿಮಾ ಸೆನ್ಸಾರ್ ಕೆಲಸಗಳನ್ನು ಮುಗಿಸಿತ್ತು. ಇದೀಗ ಸಿನಿಮಾ ರನ್ ಟೈಮ್ ಎಷ್ಟು ಎನ್ನುವುದರ ಮಾಹಿತಿ ಸಿಕ್ಕಿದೆ. ಸಿದ್ಧಾರ್ಥ್ ಆನಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
'ಪಠಾಣ್' ಆಗಿ 4 ವರ್ಷಗಳ ಗ್ಯಾಪ್ ನಂತರ ಶಾರುಖ್ ಖಾನ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಭಾರತದ ವಿರುದ್ಧ ನಡೆಯುವ ಭಯೋತ್ಪಾದಕರ ದಾಳಿಯನ್ನು ತಡೆಯುವ ಸೈನಿಕನ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಆಗಸದಲ್ಲಿ ನಡೆಯುವ ಆಕ್ಷನ್ ಸೀಕ್ವೆನ್ಸ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾ ಟ್ರೈಲರ್ ಮತ್ತು ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 'ಬೇಷರಂ ರಂಗ್' ಸಾಂಗ್ ವಿವಾದದಿಂದ 'ಪಠಾಣ್' ಸಿನಿಮಾ ಭಾರೀ ಸುದ್ದಿ ಮಾಡಿದ್ದು ಸುಳ್ಳಲ್ಲ.
ಶಾರುಖ್
ಖಾನ್
ಕ್ರೇಜ್
ಶುರು,
ವಿದೇಶದಲ್ಲಿ
ದಾಖಲೆಯ
ಅಡ್ವಾನ್ಸ್
ಬುಕಿಂಗ್!
ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಹೊಸ ವರ್ಷದಲ್ಲಿ 'ಪಠಾಣ್' ಸಿನಿಮಾ ಮೂಲಕ ಗೆಲುವಿನ ಲಯಕ್ಕೆ ಮರಳುವ ಸುಳಿವು ಸಿಗುತ್ತಿದೆ. ಶಾರುಖ್ ಖಾನ್ ಅಭಿಮಾನಿಗಳು ಕೂಡ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಈಗಾಗಲೇ ಹಲವೆಡೆ ಆನ್‌ಲೈನ್ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

'ಪಠಾಣ್' ರನ್‌ಟೈಮ್ ಎಷ್ಟು?
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಪಠಾಣ್' ಸಿನಿಮಾ ನಿರ್ಮಾಣ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುವ ಸುಳಿವು ಸಿಕ್ತಿದೆ. ಇನ್ನು ಚಿತ್ರದ ರನ್ ಟೈಮ್ ಎಷ್ಟಯ ಎನ್ನುವುದರ ಮಾಹಿತಿ ಈಗ ಬಹಿರಂಗವಾಗಿದೆ. 'ಪಠಾಣ್' ಚಿತ್ರದ ಕಾಲಾವಧಿ 2 ಗಂಟೆ 26 ನಿಮಿಷ 16 ಸೆಕೆಂಡ್‌ಗಳು ಎನ್ನುವ ಮಾಹಿತಿ ಸಿಕ್ಕಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.

ರನ್‌ಟೈಮ್ ಚಿತ್ರದ ಕಲೆಕ್ಷನ್‌ಗೆ ಪ್ಲಸ್?
ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ರನ್‌ಟೈಮ್ ಬಹಳ ಮುಖ್ಯ ಆಗುತ್ತಿದೆ. ಒಂದ್ಕಾಲದಲ್ಲಿ 4 ಗಂಟೆಯ ಸಿನಿಮಾಗಳು ಬರುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಜನ 2 ಗಂಟೆಗಿಂತ ಹೆಚ್ಚು ಥಿಯೇಟರ್‌ನಲ್ಲಿ ಕೂರಲು ಸಿದ್ಧರಿಲ್ಲ. ಎರಡೂವರೆ ಗಂಟೆ ದಾಟಿದರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಿನ ಕೆಲಸ. ಬಹಳ ಕ್ರಿಸ್ಪಿಯಾಗಿ ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಇನ್ನು ಥಿಯೇಟರ್‌ಗಳಲ್ಲಿ ಶೋಗಳ ಸಂಖ್ಯೆ ಹೆಚ್ಚಿಸಲು ಸಹಕಾರಿ ಆಗುತ್ತಿದೆ. ಕಡಿಮೆ ಅವಧಿಯಲ್ಲಿ ಸಿನಿಮಾ ಭರಪೂರ ಮನರಂಜನೆ ನೀಡುವ ಸಾಧ್ಯತೆ ಇದೆ.

10 ದೃಶ್ಯಗಳಿಗೆ ಕತ್ತರಿ ಪ್ರಯೋಗ
ಭಾರೀ ವಿವಾದ ಸೃಷ್ಟಿಸಿರುವ 'ಪಠಾಣ್' ಚಿತ್ರದ 10 ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡಿದೆ ಎನ್ನಲಾಗ್ತಿದೆ. ಇನ್ನು ಸಾಕಷ್ಟು ಪದಗಳನ್ನು ತೆಗೆದು ಹಾಕುವಂತೆ ಸೂಚಿಸಿದ್ದು ಬದಲಿ ಪದಗಳನ್ನು ಸೇರಿಸಲು ಸಲಹೆ ನೀಡಲಾಗಿದೆ. 'ಬೇಷರಂ ರಂಗ್' ಹಾಡಿನ ಕೆಲ ದೃಶ್ಯಗಳಿಗೂ ಕತ್ತರಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಎಲ್ಲಾ ವಿವಾದಗಳನ್ನು ಮೀರಿ 'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಾಣುತ್ತಾ ಕಾದು ನೋಡಬೇಕು.

ಭಜರಂಗ ದಳ ಎಚ್ಚರಿಕೆ
ಇನ್ನು ಗುಜರಾತ್‌ನಲ್ಲಿ ಸಿನಿಮಾ ಪ್ರದರ್ಶನ ತಡೆಯುವುದಾಗಿ ಭಜರಂಗ ದಳ ಎಚ್ಚರಿಕೆ ನೀಡಿದೆ. ಏನೇ ಸೆನ್ಸಾರ್ ಆಗಿದ್ದರು, ಎಷ್ಟೇ ದೃಶ್ಯಗಳನ್ನು ಕತ್ತರಿಸಿದರೂ 'ಪಠಾಣ್' ಸಿನಿಮಾ ಬಿಡುಗಡೆಗೆ ನಾವು ಒಪ್ಪುವುದಿಲ್ಲ ಎನ್ನುತ್ತಿದ್ದಾರೆ. ಭಜರಂಗ ದಳದ ಎಚ್ಚರಿಕೆ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಿಗೆ ಭೀತಿ ತಂದಿದೆ. ಸಿನಿಮಾ ಬಿಡುಗಡೆ ಆಗುವ ಸಿನಿಮಾ ಥಿಯೇಟರ್‌ಗಳಿಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರದ ಬಳಿ ಗುಜರಾತ್ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮನವಿ ಮಾಡಿಕೊಂಡಿಕೊಂಡಿದೆ.