ಸ್ನೇಹಿತನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಲ್ಲು, ಅಮೀರ್, ಶಾರೂಖ್

By Bharath Kumar

ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ 'ಬ್ಲ್ಯಾಕ್ ಮೇಲ್' ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಈ ಚಿತ್ರಕ್ಕಾಗಿ ಇಡೀ ಬಾಲಿವುಡ್ ಒಂದಾಗುತ್ತಿದೆ. ವಿಶೇಷ ಅಂದ್ರೆ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಖ್ ಖಾನ್ ಮೂವರು ಒಂದಾಗುತ್ತಿದ್ದಾರೆ.

ಹೌದು, ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ಇರ್ಫಾನ್ ಇಲ್ಲದೇ ಸಿನಿಮಾ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ಹೀಗಾಗಿ, ಸ್ನೇಹಿತನ ಚಿತ್ರಕ್ಕೆ ಪ್ರಚಾರ ಮಾಡಲು ಖಾನ್ ತ್ರಯರು ಮುಂದಾಗಿದ್ದಾರೆ.

Shah Rukh, Salman, Aamir to promote Irrfan’s Blackmail

ಇರ್ಫಾನ್ ಖಾನ್ ಖಾನ್ ತ್ರಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಮೂವರ ಸಿನಿಮಾದಲ್ಲೂ ನಟಿಸಿದ್ದಾರೆ. ಕಷ್ಟದಲ್ಲಿರುವ ಇರ್ಫಾನ್ ಗೆ ಈ ಮೂಲಕ ನೆರವಾಗುತ್ತಿರುವ ಖಾನ್ ಗಳ ನಡೆಗೆ ಬಾಲಿವುಡ್ ಕೂಡ ಸಾಥ್ ನೀಡುತ್ತಿದೆ.

ಈಗಾಗಲೇ 'ಬ್ಲ್ಯಾಕ್ ಮೇಲ್' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಲಾಗಿತ್ತು. ಬಿಗ್ ಬಿ ಅಮಿತಾಬ್ ಬಚ್ಚನ್, ಅನಿಲ್ ಕಪೂರ್ ಅಂತಹ ನಟರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಅಮೀರ್, ಸಲ್ಲು ಮತ್ತು ಶಾರೂಖ್ ಸಿನಿಮಾ ನೋಡಿ, ಜಗತ್ತಿನಾದ್ಯಂತ ಸಿನಿಮಾ ಕೊಂಡೊಯ್ಯಲು ಜೊತೆಯಾಗಲಿದ್ದಾರೆ.

Shah Rukh, Salman, Aamir to promote Irrfan’s Blackmail

ಅಭಿನಯ್ ಡಿಯೋ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕೃತಿ ಕಲಾರಿ, ದಿವ್ಯಾ ದತ್, ಅರೋಣದಯ್ ಸಿಂಗ್, ಓಮಿ ವೈದ್ಯ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
According to a report, Shah Rukh, Salman and Aamir Khan will watch the movie in a special screening and promote it by spreading the word. Directed by Abhinay Deo, 'Blackmail' also stars Kirti Kulhari, Divya Dutta, Arunoday Singh and Omi Vaidya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X