»   » ನಟ ಶಾಹಿದ್ ಕಪೂರ್ ಕಡೆಯಿಂದ ಬಂದ ಸಿಹಿ ಸುದ್ದಿ ಇದು

ನಟ ಶಾಹಿದ್ ಕಪೂರ್ ಕಡೆಯಿಂದ ಬಂದ ಸಿಹಿ ಸುದ್ದಿ ಇದು

Posted By:
Subscribe to Filmibeat Kannada

ಬಾಲಿವುಡ್ ನಟ ಶಾಹಿದ್ ಕಪೂರ್ ತಮ್ಮ ಅಭಿಮಾನಿಗಳಿಗೆಲ್ಲಾ ಸಿಹಿ ಸುದ್ದಿ ನೀಡಿದ್ದಾರೆ.

ಶಾಹಿದ್ ಕಪೂರ್ ಮತ್ತು ಮೀರಾ ರಜ್ ಪೂತ್ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಆಗಸ್ಟ್ 26 ರಂದು ಮುಂಬೈನ ಹಿಂದುಜಾ ಹೆಲ್ತ್ ಕೇರ್ ಸರ್ಜಿಕಲ್ ಆಸ್ಪತ್ರೆಯಲ್ಲಿ ಸಂಜೆ 7.56ಕ್ಕೆ ಮುದ್ದಾದ ಹೆಣ್ಣು ಮಗುವಿಗೆ ಮೀರಾ ರಜ್ ಪೂತ್ ಜನ್ಮ ನೀಡಿದ್ದಾರೆ. [ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ಶಾಹೀದ್ ಕಪೂರ್?]

shahid-kapoor-mira-rajput-blessed-with-a-baby-girl

ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಸಂತಸದ ವಿಚಾರವನ್ನ ಶಾಹಿದ್ ಕಪೂರ್ ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವುದು ಹೀಗೆ....

ಶಾಹಿದ್ ಮತ್ತು ಮೀರಾ ಮದುವೆ ಆಗಿದ್ದು 2015 ರ ಜುಲೈ ತಿಂಗಳಲ್ಲಿ. ಬಾಲಿವುಡ್ ತಾರೆಯರಿಂದ ಶಾಹಿದ್ ಹಾಗೂ ಮೀರಾ ರಜ್ ಪೂತ್ ದಂಪತಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

English summary
Bollywood Lovely Couple Shahid Kapoor-Mira Rajput are blessed with a Baby Girl on August 26th at Hinduja Healthcare Surgical hospital, Khar, Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada