»   » ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ.!

ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ.!

Posted By:
Subscribe to Filmibeat Kannada

ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಫ್ರೇಮ್ ನಲ್ಲಿ ಸೆರೆ ಸಿಕ್ಕರೆ, ಅದಕ್ಕಿಂತ ಅದ್ಭುತ ಇನ್ಯಾವುದಿದೆ.?

'ಕಿಂಗ್ ಖಾನ್' ಶಾರುಖ್ ಹಾಗೂ 'ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಒಂದೇ ಫೋಟೋದಲ್ಲಿ ಸೆರೆಯಾದರೆ, ಸಿನಿ ಪ್ರೇಮಿಗಳಿಗೆ ಅದಕ್ಕಿಂತ ಖುಷಿ ಮತ್ತೇನಿದೆ.?

ಹೌದು, ಸಿನಿ ಪ್ರಿಯರು ಸಂತಸ ಪಡುವ ಸಂಗತಿಯೊಂದು ಫೆಬ್ರವರಿ 10 ರಂದು ನಡೆದಿದೆ. ಸ್ನೇಹಿತರೊಬ್ಬರ ಬರ್ತಡೇ ಸೆಲೆಬ್ರೇಷನ್ ನಲ್ಲಿ ಪಾಲ್ಗೊಂಡಿದ್ದ ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ.[ಮೂರು ವರ್ಷದ ಪುತ್ರನಿಗೆ ಶಾರೂಖ್ ಕಟ್ಟಿಕೊಟ್ಟ ಪುಟಾಣಿ ಮನೆ!]

shahrukh-khan-aamir-khan-s-first-selfie-in-25-years

ಇದೇ ಖುಷಿಯಲ್ಲಿ ಶಾರುಖ್ ಖಾನ್ ಟ್ವೀಟ್ ಮಾಡಿರುವುದು ಹೀಗೆ....

''ಇಪ್ಪತ್ತೈದು ವರ್ಷಗಳಿಂದ ನಮ್ಮಿಬ್ಬರಿಗೂ ಪರಿಚಯ. ಆದ್ರೆ, ನಾವಿಬ್ಬರು ಒಟ್ಟಿಗೆ... ನಮಗೆ ನಾವೇ ಕ್ಲಿಕ್ ಮಾಡಿಕೊಂಡಿರುವ ಮೊಟ್ಟ ಮೊದಲ ಫೋಟೋ ಇದು'' ಎಂದು ನಟ ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್]

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶಾರುಲ್ ಮಾಡಿರುವ ಟ್ವೀಟ್ ನ ಹದಿನಾರು ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ರೆ, 63 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

'ಸ್ಟಾರ್ ವಾರ್' ಹೆಚ್ಚಾಗುತ್ತಿರುವ ಈಗಿನ ಕಾಲದಲ್ಲಿ, ಸ್ನೇಹಕ್ಕೆ ಬೆಲೆ ಕೊಡುತ್ತಿರುವ ಈ ನಟರು ನಿಜಕ್ಕೂ ಮಾದರಿಯೇ.! ಏನಂತೀರಿ.?

English summary
Bollywood Actor Shahrukh Khan and Aamir Khan's first selfie in 25 years. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada