For Quick Alerts
  ALLOW NOTIFICATIONS  
  For Daily Alerts

  ಛೀ..ಇದೆಂಥ ಮಾಡಿಬಿಟ್ರು ಶಾರುಖ್-ಸಲ್ಮಾನ್!

  By Harshitha
  |

  ನಿನ್ನೆ ಮೊನ್ನೆ ತಾನೆ ಅರ್ಪಿತಾ ಮದುವೆ ಸಮಾರಂಭದಲ್ಲಿ ಶಾರುಖ್ ಮತ್ತು ಸಲ್ಮಾನ್ ಒಂದಾಗಿ ಕಾಣಿಸಿಕೊಂಡಿದ್ದನ್ನ ನೀವೇ ನಿಮ್ಮ ಕಣ್ಣಾರೆ ನೋಡಿದ್ದೀರಾ. ಹಳೇ ದ್ವೇಷವನ್ನ ಮರೆತು ಸಲ್ಮಾನ್ ತಂಗಿಯನ್ನ ಹರಸೋಕೆ ಬಂದ ಶಾರುಖ್, ಸಲ್ಲು ಜೊತೆಗೆ ಅರ್ಪಿತಾ ಹಣೆಗೆ ಮುತ್ತಿಟ್ಟ ಫೋಟೋ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿತ್ತು.

  ಅದನ್ನ ಕಂಡು, ''ಭಾಯಿ ಭಾಯಿ ಅಂತ ಸಲ್ಲು-ಶಾರುಖ್ ಮತ್ತೆ ಒಂದಾದ್ರಲ್ಲ'' ಅನ್ನೋವಾಗಲೇ ನಿಮಗೆ ಧಂಗುಬಡಿಸುವ ಮತ್ತೊಂದು ಫೋಟೋ ಲೀಕ್ ಆಗಿದೆ ನೋಡಿ.

  ಛೀ...ಇದೇನಿದು..!? ಶಾರುಖ್ ಮತ್ತು ಸಲ್ಲು ನಡುವೆ ಹೀಗೂ ಉಂಟಾ? ಪ್ರೀತಿಯ ತಂಗಿ ಅರ್ಪಿತಾಗೆ ಮುತ್ತಿಟ್ಟಿದ್ದು ಓಕೆ. ಆದ್ರೆ ಶಾರುಖ್ ಗೆ ಸಲ್ಲು ಲಿಪ್ ಟು ಲಿಪ್ ಉಮ್ಮಾ ಕೊಟ್ಟಿದ್ಯಾಕೆ? ಇವ್ರಿಬ್ರಿಗೆ ಇದೆಲ್ಲಾ ಬೇಕಿತ್ತಾ? ಅಂತ ದೂರಾಲೋಚನೆ ಮಾಡುವ ಮುನ್ನ ಫೋಟೋನ ಸೂಕ್ಷ್ಮವಾಗಿ ಗಮನಿಸಿ. [ಸಲ್ಲೂ ತಂಗಿ ಅರ್ಪಿತಾ ಹರಸಲು ಬಂದ ಶಾರುಖ್]

  ಶಾರುಖ್ ಕೈ ಕಟ್ ಆಗಿರುವ ರೀತಿ ನೋಡಿದ್ರೆ, ನಿಮಗೆ ಕ್ಲಿಯರ್ ಆಗಿ ಅರ್ಥವಾಗಬಹುದು ಇದು ನಕಲಿ ಅಂತ. ಅರ್ಪಿತಾಗೆ ಮುತ್ತಿಡುವ ಅಸಲಿ ಫೋಟೋದಲ್ಲಿ ಅರ್ಪಿತಾರನ್ನ ಕಟ್ ಮಾಡಿ, ಯಾರೋ ಮಹಾನ್ ಕಲೆಗಾರರು ಸೃಷ್ಟಿಸಿರುವ ನಕಲಿ ಫೋಟೋ ಇದು.

  ಸಾಮಾಜಿಕ ಜಾಲತಾಣಗಳಲ್ಲಿ ಬಿಸಿದೋಸೆಯಂತೆ ಸೇಲ್ ಆಗುತ್ತಿರುವ ಈ ಫೋಟೋನ ತಕ್ಷಣ ನೋಡಿದವರು ಶಾರುಖ್-ಸಲ್ಲು ನಡುವೆ ಏನೇನನ್ನ ಊಹಿಸಿಕೊಂಡು ಗಾಬರಿಯಾಗಿದ್ರೋ, ಆ ದೇವರೇ ಬಲ್ಲ.! ಆದರೆ ಈ ಫೋಟೋ ಫೇಕ್ ಅಂತ ಗೊತ್ತಾದಮೇಲಂತು ಎಲ್ಲರು ಬಿದ್ದು ಬಿದ್ದು ನಕ್ಕಿರುವುದಂತೂ ಅಷ್ಟೇ ಸತ್ಯ. [ಸಲ್ಲೂ ತಂಗಿ ಮದುವೆಗೆ ಮೋದಿ, ಶಾರುಖ್ ಬರ್ತಾರಾ?]

  ನಿಜ ಹೇಳ್ಬೇಕಂದ್ರೆ, ಈ ಸುದ್ದಿ ಸಲ್ಲು-ಶಾರುಖ್ ಕಿವಿಗೂ ಬಿದ್ದಿದೆ. ಅದನ್ನ ಕೇಳಿ ಇಬ್ಬರೂ ನಕ್ಕು ''ಚಲ್ತಾ ಹೈ'' ಅಂತ ನಕ್ಕು ಬಿಟ್ಟಿದ್ದಾರೆ. ಹೀಗಾಗಿ, ನೀವು ಒಂದು ಸ್ಮೈಲ್ ಬಿಸಾಕಿ ಸುಮ್ಮನಾಗಿ.

  English summary
  Arpita khan's wedding witnessed the age old rivals Shahrukh Khan and Salman Khan came together. The picture of Shahrukh Khan ans Salman Khan kissing the bride went viral, and now its the time for Shahrukh and Salman's morphed smooch photo. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X