For Quick Alerts
  ALLOW NOTIFICATIONS  
  For Daily Alerts

  ಮೊದಲ ನೋಟದಲ್ಲೇ ಪಡ್ಡೆ ಹುಡುಗರ ಹೃದಯಕ್ಕೆ ಕಲ್ಲು ಹೊಡೆದ ಶಕೀಲಾ

  |

  ಭಾರತೀಯ ಚಿತ್ರರಂಗದಲ್ಲಿ ಸೆನ್ಸೆಷ್ನಲ್ ಕ್ರಿಯೇಟ್ ಮಾಡಿದ್ದ ಶಕೀಲಾ ಜೀವನಾಧರಿತ ಸಿನಿಮಾದ ಫಸ್ಟ್ ಲುಕ್ ಬಹಿರಂಗವಾಗಿದೆ. ಶಕೀಲಾ 'ನಾಟ್ ಎ ಪೋರ್ನ್ ಸ್ಟಾರ್' ಎಂಬ ಅಡಿಬರಹದೊಂದಿಗೆ ಚಿತ್ರದ ಟೈಟಲ್ ಕೂಡ ಅನಾವರಣಗೊಂಡಿದೆ.

  ಮೊದಲೇ ಗೊತ್ತಿರುವಂತೆ 'ಶಕೀಲಾ' ಸಿನಿಮಾ ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಬಯೋಪಿಕ್. ಶಕೀಲಾ ಅವರ ಟ್ರಾಜಿಡಿ ಜೀವನವನ್ನ ತೆರೆಮೇಲೆ ತರಲಾಗುತ್ತಿದ್ದು, ಬಾಲ್ಯ, ವೃತ್ತಿ ಜೀವನ, ಪೋರ್ನ್ ಸಿನಿಮಾ ಯಾಕೆ ಮಾಡಿದ್ರು, ಆ ಲೋಕದಲ್ಲಿ ಅವರು ಹೇಗೆ ಸಿಲುಕಿಕೊಂಡ್ರು ಎಂಬ ಅನೇಕ ಅಂಶಗಳ ಜೊತೆ ಈ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

  ಶಿವಮೊಗ್ಗದಲ್ಲಿ 'ಶಕೀಲಾ' ಬಯೋಪಿಕ್ ಚಿತ್ರದ ಶೂಟಿಂಗ್

  ಬಾಲಿವುಡ್ ನಟಿ ರಿಚಾ ಚಡ್ಡಾ ಶಕೀಲಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವತಃ ಶಕೀಲಾ ಅವರ ಬಳಿಯೇ ಸಲಹೆ ಮತ್ತು ಸ್ಫೂರ್ತಿ ಪಡೆದುಕೊಂಡಿರುವ ರಿಚಾ, ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದಾರಂತೆ.

  ಶಕೀಲಾ ಪಾತ್ರಕ್ಕೆ ರಿಚಾ ಚಡ್ಡಾ ಆಯ್ಕೆಯಾಗಿದ್ದು ಯಾಕೆ.?

  ಸದ್ಯ, ಬಿಡುಗಡೆಯಾಗಿರುವ ಫಸ್ಟ್ ಲುಕ್ ಭಾರಿ ಚರ್ಚೆಗೆ ಕಾರಣವಾಗಿದೆ. ಕೇರಳ ಸಂಸ್ಕೃತಿಯಂತೆ ಆಭರಣಗಳನ್ನ ತೊಟ್ಟಿರುವ ರಿಚಾ, ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಬರಿ ಆಭರಣಗಳಿಂದಲೇ ತಮ್ಮ ಮೈಮುಚ್ಚಿಕೊಂಡಿದ್ದಾರೆ. ಅಲ್ಲಿಗೆ ಈ ಸಿನಿಮಾ ಎಷ್ಟು ಬೋಲ್ಡ್ ಆಗಿರಲಿದೆ ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.

  ಶಕೀಲಾ ಅಭಿನಯದ 250ನೇ ಚಿತ್ರಕ್ಕೆ ಸೆನ್ಸಾರ್ ಮಾಡ್ತಿಲ್ಲ.! ಕಾರಣ.?

  ಶಕೀಲಾ 'ನಾಟ್ ಎ ಪೋರ್ನ್ ಸ್ಟಾರ್' ಎಂಬ ಅಡಿಬರಹ ನೋಡಿದ್ರೆ, ಶಕೀಲಾ ಹಿಂದೆ ರೋಚಕ ಕಥೆಯಿದೆ, ಬಲವಂತವಾಗಿ ಪೋರ್ನ್ ಸಿನಿಮಾ ಮಾಡಬೇಕಾಯಿತು ಎಂಬುದರ ಪ್ರತೀಕವಿರಬಹುದು. ಇನ್ನುಳಿದಂತೆ ಕನ್ನಡದ ಸ್ಟಾರ್ ಡೈರೆಕ್ಷರ್ ಇಂದ್ರಜಿತ್ ಈ ಬಯೋಪಿಕ್ ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಮುಂದಿನ ವರ್ಷ ಬೇಸಿಗೆ ಸಮಯಕ್ಕೆ ಶಕೀಲಾ ಬಯೋಪಿಕ್ ಚಿತ್ರಮಂದಿರಕ್ಕೆ ಬರಲಿದೆ.

  ರಿಚಾ ಚಡ್ಡಾ ಕುರಿತು

  2008 ರಲ್ಲಿ 'ಓಯ್ ಲಕ್ಕಿ, ಲಕ್ಕಿ ಓಯ್' ಚಿತ್ರದ ಮೂಲಕ ಬಾಲಿವುಡ್ ಇಂಡಸ್ಟ್ರಿ ಪ್ರವೇಶ ಮಾಡಿದ ರಿಚಾ ಚಡ್ಡಾ, 'ತಮಾಂಚೆ', 'ಶಾರ್ಟ್ಸ್', 'ಮಾಸನ್', 'ಮೇನ್ ಔರ್ ಚಾರ್ಲ್ಸ್', 'ಸರ್ಬಿಜಿತ್', ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  The first look poster of the much anicipated biopic Shakeela has been released. Actor Richa Chadha plays the titular lead in the biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X