ಶೆರ್ಲಿನ್ ಚೋಪ್ರಾ ಹಾಟ್ ಕಾಮಸೂತ್ರ ಪೋಸ್ಟರ್
ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿರುವ, ಮಾಡುತ್ತಿರುವ ಚಿತ್ರ 'ಕಾಮಸೂತ್ರ 3D'. ಈ ಚಿತ್ರದ ತಾರೆ ಶೆರ್ಲಿನ್ ಚೋಪ್ರಾ ಸಹ ಅಷ್ಟೇ ಪ್ರಳಯಾಂತಕವಾಗಿದ್ದು ಚಿತ್ರ ಸಾಕಷ್ಟು ಆಸಕ್ತಿ ಕೆರಳಿಸಿದೆ. ಈ ಚಿತ್ರದ ಪೋಸ್ಟರ್ ಈಗ ಬಿಡುಗಡೆಯಾಗಿದ್ದು ಪಡ್ಡೆಗಳ ಹೃದಯ ಕಲಕಿದೆ.
ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. 2012ರ ಕೇನೆ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರಕಟಿಸಲಾಯಿತು.
ಪೌಲ್ ಅವರು ಈಗಾಗಲೆ 'ಸೇಂಟ್ ಡ್ರಾಕುಲಾ 3D' ಎಂಬ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಈ ಬಾರಿ ಅವರು ಕಾಮಸೂತ್ರ 3D ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲೇ ಶೆರ್ಲಿನ್ ಚಿಚ್ಚಮ್ಮ ಇನ್ನು 'ಕಾಮಸೂತ್ರ' ಎಂದರೆ ಕೇಳಬೇಕೆ.
ಬಹುಶಃ ಚಿತ್ರ ಮುಂಬರುವ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಬಹುದು. ಶೆರ್ಲಿನ್ ಚೋಪ್ರಾ ಜೊತೆ ಬಾಲಿವುಡ್ ನ ಇನ್ನಿಬ್ಬರು ತಾರೆಗಳು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ. ಆದರೆ ಆ ತಾರೆಗಳು ಯಾರೆಂಬುದು ಇನ್ನೂ ಬಹಿರಂಗವಾಗಿಲ್ಲ.
ಈಗಾಗಲೆ ಕಾಮಸೂತ್ರ ಹೆಸರಿನಲ್ಲಿ ಒಂದು ಚಿತ್ರ ಬಂದು ಹೋಗಿದೆ. ಮೀರಾ ನಾಯರ್ ನಿರ್ದೇಶನದ ಆ ಚಿತ್ರದ ಹೆಸರು 'ಕಾಮಸೂತ್ರ: ಎ ಟೇಲ್ ಆಫ್ ಲವ್' ಚಿತ್ರ 2006ರಲ್ಲಿ ತೆರೆಕಂಡಿತ್ತು. ಆ ಚಿತ್ರದಲ್ಲಿ ರೇಖಾ ಪ್ರಮುಖ ಪಾತ್ರವನ್ನು ಪೋಷಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications












