For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ವಿಡಿಯೋ ಪ್ರಕರಣ: ನನ್ನದೇನೂ ತಪ್ಪಿಲ್ಲ ಎಂದ ಶೆರ್ಲಿನ್ ಚೋಪ್ರಾ!

  |

  ಗ್ಲಾಮರಸ್ ಪಾತ್ರಗಳು, ಗ್ಲಾಮರಸ್ ವಿಡಿಯೋಗಳಿಂದಲೇ ಖ್ಯಾತವಾಗಿರುವ ಶೆರ್ಲಿನ್ ಚೋಪ್ರಾ ಇದೀಗ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

  ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ, ರಾಜ್ ಕುಂದ್ರಾ ಹಾಗೂ ಇನ್ನಿತರರು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಹಣಗಳಿಕೆಗಾಗಿ ಅವುಗಳನ್ನು ಒಟಿಟಿ ಫ್ಲ್ಯಾಟ್‌ಫಾರಂಗಳು ಹಾಗೂ ಇನ್ನಿತರೆ ಅಪ್ಲಿಕೇಶನ್‌ಗಳಿಗೆ ಹಂಚಿಕೊಂಡಿದ್ದರು ಎಂದು ಮಹಾರಾಷ್ಟ್ರ ಸೈಬರ್ ಪೊಲೀಸ್ ವಿಭಾಗವು 450 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

  ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ತಮ್ಮದೇ ಹೆಸರಿನಲ್ಲಿ ಅಪ್ಲಿಕೇಶನ್ ತೆರೆದು ಅವುಗಳ ಮೂಲಕ ಹಣಕ್ಕಾಗಿ ತಮ್ಮ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು ಎಂದು ಸಹ ದೋಷಾರೋಪ ಪಟ್ಟಿಯಲ್ಲಿ ಆರೋಪ ಮಾಡಲಾಗಿದೆ. ಆದರೆ ಈ ಬಗ್ಗೆ 'ಫಿಲ್ಮಿಬೀಟ್‌'ಗೆ ಪ್ರತಿಕ್ರಿಯೆ ನೀಡಿರುವ ಶೆರ್ಲಿನ್ ಚೋಪ್ರಾ, 'ಪ್ರಕರಣದಲ್ಲಿ ನಾನು ನಿರಪರಾಧಿ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ' ಎಂದಿದ್ದಾರೆ. ಜೊತೆಗೆ ಪ್ರಕರಣದ ಮುಖ್ಯ ಆರೋಪಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  ನಾನು ನಿರಪರಾಧಿ: ಶೆರ್ಲಿನ್ ಚೋಪ್ರಾ

  ನಾನು ನಿರಪರಾಧಿ: ಶೆರ್ಲಿನ್ ಚೋಪ್ರಾ

  ''ಈ ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿದೆ ಹೆಚ್ಚಿಗೆ ಏನೂ ಹೇಳಲಾರೆ ಆದರೆ ಈ ಪ್ರಕರಣದಲ್ಲಿ ನಾನು ನಿರಪರಾಧಿ, ನನ್ನನ್ನು ಸುಖಾ ಸುಮ್ಮನೆ ಈ ಪ್ರಕರಣದಲ್ಲಿ ಎಳೆದುತರಲಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್‌ನ 2021ರ ತನಿಖಾ ವರದಿಯ ಪ್ರಕಾರ ಈ ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಂದ್ರಾ. ತೋಲ್ಬಳ, ಹಣ ಬಲವುಳ್ಳ ಈ ವ್ಯಕ್ತಿಗಳು ಕಾನೂನನ್ನು ತಮ್ಮೆಡೆಗೆ ತಿರುಗಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಆದರೆ ದೇಶದ ಸಂವಿಧಾನವು ಕೆಲವು ವ್ಯಕ್ತಿಗಳಿಗಾಗಿ ಇರುವುದಲ್ಲ, ಅದು ಎಲ್ಲರಿಗಾಗಿಯೂ ಇರುವಂಥಹದ್ದು. ಹಣ, ರಾಜಕೀಯ ಶಕ್ತಿ, ಧರ್ಮದ ಶಕ್ತಿಯನ್ನು ಮೀರಿ ನ್ಯಾಯ ನೀಡುವಂಥಹದ್ದು ಸಂವಿಧಾನ'' ಎಂದಿದ್ದಾರೆ ಶೆರ್ಲಿನ್ ಚೋಪ್ರಾ.

  ಕಾನೂನಾತ್ಮಕವಾಗಿ ಮುಂದಿನ ಹೆಜ್ಜೆ: ಶೆರ್ಲಿನ್ ಚೋಪ್ರಾ

  ಕಾನೂನಾತ್ಮಕವಾಗಿ ಮುಂದಿನ ಹೆಜ್ಜೆ: ಶೆರ್ಲಿನ್ ಚೋಪ್ರಾ

  ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಶೆರ್ಲಿನ್ ಚೋಪ್ರಾ, ''ನನಗಿನ್ನೂ ದೋಷಾರೋಪ ಪಟ್ಟಿಯ ಪ್ರತಿ ದೊರಕಿಲ್ಲ. ನನ್ನ ಕಾನೂನು ಸಲಹೆ ತಂಡವು ದೋಷಾರೋಪ ಪಟ್ಟಿಯ ಪ್ರತಿಗಾಗಿ ಎದುರು ನೋಡುತ್ತಿದೆ. ದೋಷಾರೋಪ ಪಟ್ಟಿ ಸಿಕ್ಕಿದ ಬಳಿಕ ಅದಕ್ಕೆ ಸೂಕ್ತ ಉತ್ತರ ನೀಡಲಿದ್ದೇವೆ ಹಾಗೂ ನನ್ನ ಹೆಸರನ್ನು ದೋಷಾರೋಪ ಪಟ್ಟಿಯಿಂದ ತೆಗೆಯುವಂತೆ ಮನವಿ ಮಾಡಲಿದ್ದೇವೆ'' ಎಂದಿದ್ದಾರೆ ಶೆರ್ಲಿನ್ ಚೋಪ್ರಾ.

  450 ಪುಟಗಳ ದೋಷಾರೋಪ ಪಟ್ಟಿ

  450 ಪುಟಗಳ ದೋಷಾರೋಪ ಪಟ್ಟಿ

  ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ, ರಾಜ್ ಕುಂದ್ರಾ, ನಿರ್ಮಾಪಕಿ ಮೀತಾ ಜುಂಜ್‌ನ್‌ವಾಲಾ, ಕ್ಯಾಮೆರಾಮನ್ ರಾಜು ದುಬೆ ಹಾಗೂ ಇನ್ನೂ ಕೆಲವರುಗಳು ನೀಲಿ ಚಿತ್ರ ನಿರ್ಮಿಸಿ ಅದನ್ನು ಒಟಿಟಿ ಹಾಗೂ ವಿವಿಧ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಫೈವ್‌ ಸ್ಟಾರ್ ಹೋಟೆಲ್‌ಗಳಲ್ಲಿ ಈ ನೀಲಿ ಚಿತ್ರಗಳ ಚಿತ್ರೀಕರಣ ನಡೆಯುತ್ತಿತ್ತಂತೆ. ನೀಲಿ ಚಿತ್ರ ನಿರ್ಮಾಣದ ಜಾಲದ ಕುರಿತಾಗಿ 450 ಪುಟಗಳ ದೋಷಾರೋಪ ಪಟ್ಟಿಯನ್ನು ಸೈಬರ್ ಪೊಲೀಸರು ಸಲ್ಲಿಸಿದ್ದಾರೆ.

  ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

  ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

  2021 ರಲ್ಲಿ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಾಗಿನಿಂದಲೂ ಶೆರ್ಲಿನ್ ಚೋಪ್ರಾ ಹೆಸರು ಕೇಳಿ ಬರುತ್ತಿದೆ. ಮೊದಲಿಗೆ ನಟಿ ಗೆಹನಾ ವಹಿಷ್ಠಾ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಆ ಬಳಿಕ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ರಾಜ್ ಕುಂದ್ರಾ ಬಂಧನದ ಬಳಿಕ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು, ರಾಜ್ ಕುಂದ್ರಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡಿದ್ದರು. ಈಗ ಅವರುಗಳ ಹೆಸರೂ ಸಹ ದೋಷಾರೋಪ ಪಟ್ಟಿಯಲ್ಲಿದೆ.

  English summary
  Raj Kundra, Sherlyn Chopra, Poonam Pandey and some others have been named in the indecent video case by Maharashtra Cyber police.
  Monday, November 21, 2022, 21:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X