»   » ತಾರೆ ಶಿಲ್ಪಾ ಶೆಟ್ಟಿ ಗಂಡು ಮಗು ಹೆಸರು ಬೇಬಿ ಕೆ

ತಾರೆ ಶಿಲ್ಪಾ ಶೆಟ್ಟಿ ಗಂಡು ಮಗು ಹೆಸರು ಬೇಬಿ ಕೆ

Posted By:
Subscribe to Filmibeat Kannada
ಎರಡು ದಿನಗಳ ನವಜಾತ ಗಂಡು ಶಿಶುವಿಗೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ನಾಮಕರಣ ಮಾಡಿದ್ದಾರೆ. ಬಾಲಿವುಡ್ ಮತ್ತೊಬ್ಬ ಬೆಡಗಿ ಐಶ್ವರ್ಯ ರೈ ತಮ್ಮ ಮಗಳಿಗೆ ಬೇಗ ಹೆಸರಿಡದೆ ಅಭಿಮಾನಿಗಳನ್ನು ಸಾಕಷ್ಟು ಸತಾಯಿಸಿದ್ದರು. ಆದರೆ ಶಿಲ್ಪಾ ಮಾತ್ರ ತಡಮಾಡದೆ ತನ್ನ ಕಂದನಿಗೆ ಹೆಸರಿಟ್ಟಿದ್ದಾರೆ.

ಶಿಲ್ಪಾ ತನ್ನ ಮಗನಿಗೆ ಶಾರ್ಟ್ ಅಂಡ್ ಸ್ವೀಟಾಗಿ ಬೇಬಿ ಕೆ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಹೆಚ್ಚು ಸಮಯ ಕಾಯದಂತೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ಶಿಲ್ಪಾ, "ನಾನು ತಾಯಿಯಾಗಿದ್ದೇನೆ ಎಂಬ ಸಂಗತಿ ಇನ್ನೂ ನಂಬಲಿಕ್ಕೇ ಆಗುತ್ತಿಲ್ಲ. ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ 36ರ ಹರೆಯದ ಶಿಲ್ಪಾ.

ಶಿಲ್ಪಾರ ಪತಿ ರಾಜ್ ಕುಂದ್ರಾ ಕೂಡ ಟ್ವೀಟಿಸಿದ್ದು, "ನಿಮ್ಮೆಲ್ಲರ ಪ್ರೀತಿಗೆ ಚಿರಋಣಿಯಾಗಿದ್ದೇವೆ. ಸದ್ಯಕ್ಕೆ ತಾಯಿ ಮತ್ತು ಬೇಬಿ ಕೆ ವಿಶ್ರಾಂತಿ ಪಡೆಯುತ್ತಿದ್ದಾರೆ. ನನ್ನ ತಂದೆ ತಾಯಿ ಈಗ ಅಜ್ಜ ಅಜ್ಜಿಯಾಗಿ ಬದಲಾಗಿದ್ದಾರೆ" ಎಂದಿದ್ದಾರೆ. (ಏಜೆನ್ಸೀಸ್)

English summary
After the nation started addressing Aishwarya Rai's daughter as Beti B, here's Shilpa Shetty, who didn't make us wait long to reveal her newborn's name. The 36-year-old actress tweeted, "Can't believe am a mother now! Ecstatic is an understatement. Thank you so much for all the good wishes and love all of you have bestowed us and Baby K."
Please Wait while comments are loading...