For Quick Alerts
  ALLOW NOTIFICATIONS  
  For Daily Alerts

  ನಾನೇನು ರಾಜ್ ಕುಂದ್ರ ತರ ಕಾಣುತ್ತಿದ್ದೀನಾ: ಶಿಲ್ಪಾ ಶೆಟ್ಟಿ ಗರಂ ಆಗಿದ್ದೇಕೆ?

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಎಲ್ಲೇ ಹೋದರು ಪತಿ ರಾಜ್ ಕುಂದ್ರ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇದೆ. ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಜೈಲು ಸೇರಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಸದ್ಯ ಜೈಲಿನಿಂದ ಹೊರಬಂದಿದ್ದಾರೆ. ಜಾಮೀನಿನ ಮೇಲೆ ರಾಜ್ ಕುಂದ್ರ ಹೊರಬಂದಿದ್ದಾರೆ. ಪತಿ ಜೈಲು ಸೇರುತ್ತಿದ್ದಂತೆ ಶಿಲ್ಪಾ ಶೆಟ್ಟಿ ಸುಮಾರು ಒಂದು ತಿಂಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಪತಿಯ ಬಂಧನದಿಂದ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಗಿತ್ತು.

  ಕೆಲವು ದಿನಗಳ ಬಳಿಕ ಮತ್ತೆ ಕಿರುತೆರೆ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ಶಿಲ್ಪಾ ಕ್ಯಾಮರಾ ಮುಂದೆ ಬಂದರು. ಶಿಲ್ಪಾ ಶೆಟ್ಟಿ ಎಲ್ಲೇ ಹೋದರು ಇದೀಗ ಪತಿ ರಾಜ್ ಕುಂದ್ರ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಪತಿ ಜೈಲು ಸೇರಿದ ಬಳಿಕ ಶಿಲ್ಪಾ ಶೆಟ್ಟಿ ಪತಿಯಿಂದ ದೂರ ಆಗುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚಿಗಷ್ಟೆ ಪತ್ರಿಕಾಗೋಷ್ಟಿಯಲ್ಲಿ ಕಾಣಿಸಿಕೊಂಡಿದ್ದ ಶಿಲ್ಪಾ ಶೆಟ್ಟಿಗೆ ಮತ್ತೆ ಪತಿಯ ಬಗ್ಗೆ ಪ್ರಶ್ನೆ ತೂರಿ ಬರುತ್ತಿದೆ.

  ಈ ಹಿಂದೆ ರಾಜ್ ಕುಂದ್ರ ಬಗ್ಗೆ, ಪತಿ ಏನು ಮಾಡುತ್ತಾರೆ, ಅವರ ವ್ಯವಹಾರದ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದ ಶಿಲ್ಪಾ ಶೆಟ್ಟಿ ಇದೀಗ ಪತಿಯ ಬಗ್ಗೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ನಾನೇನು ರಾಜ್ ಕುಂದ್ರ ನಾ? ನಾನು ರಾಜ್ ಕುಂದ್ರ ಹಾಗೆ ಕಾಣುತ್ತಿದ್ದೀನಾ? ಪ್ರಶ್ನೆ ಮಾಡಿದ್ದಾರೆ. ಬಳಿಕ ಸ್ಮೈಲ್ ಮಾಡಿದ್ದಾರೆ. ರಾಜ್ ಕುಂದ್ರ ಬಗ್ಗೆ ಹೇಳಲು ಶಿಲ್ಪಾ ಶೆಟ್ಟಿ ನಿರಾಕರಿಸಿದ್ದಾರೆ.

  ಬಳಿಕ ಮಾತು ಮುಂದುವರೆಸಿದ ಶಿಲ್ಪಾ ಶೆಟ್ಟಿ, "ಒಬ್ಬ ಸೆಲೆಬ್ರಿಟಿಯಾಗಿ ಎಂದಿಗೂ ದೂರು ನೀಡಬಾರದು ಮತ್ತು ನೀವು ಎಂದಿಗೂ ವಿವರಣೆ ನೀಡಬಾರದು. ಇದು ನನ್ನ ಜೀವನದ ಫಿಲಾಸಫಿ" ಎಂದು ಹೇಳಿದರು.

  ರಾಜ್ ಕುಂದ್ರ ಅವರನ್ನು ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್‌ ಅಧಿಕಾರಿಗಳು ಬಂಧಿಸಿದರು. ಜುಲೈ 20 ರಂದು ಅವರನ್ನು ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಅದೇ ದಿನ ರಂದು ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

  ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ತಮ್ಮ ಪತಿಯ ವ್ಯವಹಾರಗಳಲ್ಲಿ ನಿಮ್ಮ ಪಾತ್ರ ಇದ್ಯಾ, ಅವರ ಜೊತೆಗಿನ ಪೋರ್ನ್ ವ್ಯವಹಾರದಲ್ಲಿ ನೀವು ಭಾಗಿಯಾಗಿದ್ದೀರಾ ಎಂದು ಪೊಲೀಸರು ಪ್ರಶ್ನಿಸಿದರು. ಪೊಲೀಸರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ ನಟಿ ಶಿಲ್ಪಾ ಶೆಟ್ಟಿ ಈ ಕೇಸ್‌ನಲ್ಲಿ ನನ್ನದು ಯಾವ ಪಾತ್ರವೂ ಇಲ್ಲ ಎಂದು ಸ್ಪಷ್ಟನೆ ಕೊಟ್ಟರು.

  ಜುಲೈ 23ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ನಂತರ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯ ಜುಲೈ 27 ರವರೆಗೆ ವಿಸ್ತರಿಸಿತು. ಇದರ ನಂತರ, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ರಾಜ್ ಕುಂದ್ರಾ ಮತ್ತು ಸಹಚರ ರಯಾನ್ ಥೋರ್ಪೆ ವಿರುದ್ಧ ಸುಮಾರು 1,500 ಪುಟಗಳ ಚಾರ್ಜ್ ಶೀಟ್‌ ನ್ನು ಮುಂಬೈ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ "ಮುಖ್ಯ ಆರೋಪಿ" ಎಂದು ಉಲ್ಲೇಖಿಸಿದ್ದರು.

  ಸೆಪ್ಟಂಬರ್ 20ರಂದು ರಾಜ್ ಕುಂದ್ರ ಅವರಿಗೆ ಜಾಮೀನು ನೀಡಲಾಯಿತು. ಹೈ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಸೆಪ್ಟೆಂಬರ್ 21, ಮಂಗಳವಾರ ಬೆಳಿಗ್ಗೆ 10:30 ಕ್ಕೆ ಬೈಕುಲ್ಲಾ ಜೈಲಿನಿಂದ ಹೊರಬಂದರು. ಜೈಲಿನಿಂದ ಹೊರಬಂದ ಬಳಿಕ ರಾಜ್ ಕುಂದ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಶಿಲ್ಪಾ ಶೆಟ್ಟಿ ಕೂಡ ಇದುವರೆಗೂ ಪತಿಯ ಜೊತೆ ಕಾಣಿಸಿಕೊಂಡಿಲ್ಲ.

  English summary
  Bollywood Actress Shilpa Shetty says do I look like Raj Kundra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X