For Quick Alerts
  ALLOW NOTIFICATIONS  
  For Daily Alerts

  ಅಯ್ಯೋ ದೇವ್ರೇ, ಎಂಥ ಸಿನಿಮಾವಿದು; 'ಕಾಂತಾರ' ನೋಡಿದ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ಇದು

  |

  ಕಾಂತಾರ, ಸದ್ಯ ಭಾರತದಾದ್ಯಂತ ಹೆಚ್ಚಾಗಿ ಕೇಳಿ ಬರುತ್ತಿರುವ ಚಿತ್ರದ ಹೆಸರು. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಅಬ್ಬರಿಸಿದ ಕಾಂತಾರ ಸಿನಿಮಾ ಈಗ ತೆಲುಗು ಹಾಗೂ ಹಿಂದಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಾಮಾನ್ಯ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಪರಭಾಷೆಯ ಸೆಲೆಬ್ರಿಟಿಗಳು ಸಹ ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಫಿದಾ ಆಗಿಬಿಟ್ಟಿದ್ದಾರೆ.

  ತೆಲುಗು ನಟ ಪ್ರಭಾಸ್ ಕಾಂತಾರ ಚಿತ್ರವನ್ನು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿಯೂ ನೋಡಿ ಚಿತ್ರವನ್ನು ಕೊಂಡಾಡಿದ್ದರು, ತಮಿಳಿನ ಧನುಷ್, ಕಾರ್ತಿ, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಫುಲ್ ಮಾರ್ಕ್ಸ್ ನೀಡಿದ್ದರು. ಹೀಗೆ ಕಾಂತಾರ ತಾರೆಗಳಿಂದಲೂ ಸಹ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದು, ಈ ಸಾಲಿಗೆ ಇದೀಗ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ.

  ನಿನ್ನೆ ( ಅಕ್ಟೋಬರ್ 16ರ ಭಾನುವಾರ ) ಕಾಂತಾರ ಚಿತ್ರವನ್ನು ವೀಕ್ಷಿಸಿರುವ ಶಿಲ್ಪಾ ಶೆಟ್ಟಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಫೋಟೋವೊಂದನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಕಾಂತಾರ ಚಿತ್ರದ ಬಗ್ಗೆ ತಮ್ಮ ಪಾಲಿನ ವಿಮರ್ಶೆಯನ್ನು ಬರೆದುಕೊಂಡಿದ್ದಾರೆ.

   'ಕಾಂತಾರ'ವನ್ನು ಚಿತ್ರಮಂದಿರದಲ್ಲಿ ನೋಡಿದೆ

  'ಕಾಂತಾರ'ವನ್ನು ಚಿತ್ರಮಂದಿರದಲ್ಲಿ ನೋಡಿದೆ

  ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರಕ್ಕಿದು ಪ್ರಶಂಸೆಯ ಪೋಸ್ಟ್ ಎಂದು ಬರೆದುಕೊಂಡಿದ್ದಾರೆ. 'ಕಾಂತಾರ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ, ಓ ಮೈ ಗಾಡ್ ಎಂಥ ಚಿತ್ರವಿದು, ಎಂತಹ ನಿರೂಪಣೆ, ಭಾವನೆ ಮತ್ತು ಪ್ರಪಂಚ.. ಚಿತ್ರದ ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸಿತು. ಇದು ಸಿನಿಮಾವೊಂದರ ಶಕ್ತಿ. ವೀಕ್ಷಕನನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುವಂತಹ ಚಿತ್ರ. ನಾನು ಹುಟ್ಟಿ ಬೆಳೆದಂತಹ ಪ್ರಪಂಚಕ್ಕೆ (ಕರಾವಳಿ) ಕೊಂಡೊಯ್ದ ಚಿತ್ರ' ಎಂದು ಶಿಲ್ಪಾ ಶೆಟ್ಟಿ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

   ರಿಷಬ್ ಶೆಟ್ಟಿಯನ್ನು ಕೊಂಡಾಡಿದ ಶಿಲ್ಪಾ

  ರಿಷಬ್ ಶೆಟ್ಟಿಯನ್ನು ಕೊಂಡಾಡಿದ ಶಿಲ್ಪಾ

  ಇದೇ ಪೋಸ್ಟ್ ಮೂಲಕ ನಟಿ ಶಿಲ್ಪಾ ಶೆಟ್ಟಿ ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ. ಚಿತ್ರದಲ್ಲಿನ ರಿಷಬ್ ಶೆಟ್ಟಿ ನಟನೆಯನ್ನು ಮೆಚ್ಚಿಕೊಂಡಿರುವ ಶಿಲ್ಪಾ ಶೆಟ್ಟಿ ವಿಜಯವನ್ನು ಆನಂದಿಸಿ ಎಂದು ಶುಭ ಕೋರಿದ್ದಾರೆ.

   ಅನುಷ್ಕಾ ಶೆಟ್ಟಿ ಕೂಡ ಕಾಂತಾರಕ್ಕೆ ಫಿದಾ

  ಅನುಷ್ಕಾ ಶೆಟ್ಟಿ ಕೂಡ ಕಾಂತಾರಕ್ಕೆ ಫಿದಾ

  'ಕಾಂತಾರ' ಸಿನಿಮಾ ವೀಕ್ಷಿಸಿದೆ. ಸಂಪೂರ್ಣವಾಗಿ ಸಿನಿಮಾ ಇಷ್ಟವಾಯಿತು, ಪ್ರತಿಯೊಬ್ಬ ನಟ, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. 'ಕಾಂತಾರ' ತಂಡ ನಿಜಕ್ಕೂ ನೀವು ಅದ್ಭುತ. ತೆರೆಮೇಲೆ ಇಂತಹ ಅನುಭವ ನೀಡಿದ್ದಕ್ಕೆ ಧನ್ಯವಾದ. ರಿಷಬ್ ಶೆಟ್ಟಿ ನಿಜಕ್ಕೂ ನೀವು ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲೇ ಎಲ್ಲರೂ ಸಿನಿಮಾ ನೋಡಿ. ಮಿಸ್ ಮಾಡಲೇಬೇಡಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಶೆಟ್ಟಿ ಬರೆದುಕೊಂಡಿದ್ದರು.

  English summary
  Shilpa Shetty watched Kantara movie and praised Rishab Shetty. Take a look
  Monday, October 17, 2022, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X