Don't Miss!
- News
Breaking; ಕೋಲಾರ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರಗ್ಸ್ ಪ್ರಕರಣ: ಬಾಲಿವುಡ್ ಸ್ಟಾರ್ ನಟಿಯ ಸಹೋದರನ ಬಂಧಿಸಿದ ಬೆಂಗಳೂರು ಪೋಲಿಸ್
ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅನ್ನು ಬೆಂಗಳೂರು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನ ಎಂಜಿ ರಸ್ತೆಯ ಹೋಟೆಲ್ ಒಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ದಾಳಿ ಮಾಡಿದ ಪೊಲೀಸರು ಹಲವರನ್ನು ಬಂಧಿಸಿದ್ದು, ಶ್ರದ್ಧಾ ಕಪೂರ್ ಸಹೋದರನನ್ನೂ ಸಹ ಬಂಧನಕ್ಕೆ ಒಳಪಡಿಸಿದ್ದಾರೆ.
ಡ್ರಗ್ಸ್ ಸೇವಿಸಿರುವ ಶಂಕೆಯ ಮೇಲೆ ಒಟ್ಟು 35 ಮಂದಿಯ ರಕ್ತದ ಸ್ಯಾಂಪಲ್‌ಗಳನ್ನು ಪೊಲೀಸರು ಪರೀಕ್ಷೆಗೆ ರವಾನಿಸಿದ್ದರು, ಅದರಲ್ಲಿ ಸಿದ್ಧಾಂತ್ ಕಪೂರ್ ಸೇರಿದಂತೆ ಆರು ಮಂದಿಯ ವರದಿಗಳು ಪಾಸಿಟಿವ್ ಆಗಿದ್ದು, ಇವರುಗಳು ಡ್ರಗ್ಸ್ ಸೇವಿಸಿರುವುದು ಖಾತ್ರಿಯಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈ ಆರು ಮಂದಿ ಡ್ರಗ್ಸ್ ಸೇವಿಸಿಯೇ ಎಂಜಿ ರಸ್ತೆಯ ಹೋಟೆಲ್‌ಗೆ ಬಮದಿದ್ದರೊ ಅಥವಾ ಹೋಟೆಲ್‌ಗೆ ಬಂದು ಡ್ರಗ್ಸ್ ಸೇವಿಸಿದ್ದರೊ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದಿದ್ದಾರೆ.

ಪ್ರತಿಕ್ರಿಯೆ ನೀಡಿರುವ ಶಕ್ತಿ ಕಪೂರ್
ಮಗನ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಶಕ್ತಿ ಕಪೂರ್, ''ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಬೆಳಿಗ್ಗೆ ಎದ್ದಾಗ ನ್ಯೂಸ್ ಚಾನೆಲ್‌ನಿಂದಲೇ ವಿಷಯ ಗೊತ್ತಾಗಿದ್ದು, ಇಡೀ ಕುಟುಂಬ ಸಿದ್ಧಾಂತ್ ಜೊತೆ ಮಾತನಾಡಲು ಯತ್ನಿಸುತ್ತಿದೆ. ಆದರೆ ಆತ ಅಥವಾ ಆತನ ಗೆಳೆಯರ್ಯಾರೂ ಫೋನ್ ರಿಸೀವ್ ಮಾಡುತ್ತಿಲ್ಲ. ಅಲ್ಲಿ ಏನಾಗಿದೆ ಎಂಬ ಮಾಹಿತಿ ನನಗೆ ಇಲ್ಲ. ನಮ್ಮ ಕುಟುಂಬ ಆತಂಕಗೊಂಡಿದೆ'' ಎಂದಿದ್ದಾರೆ.

ಶ್ರದ್ಧಾ ಕಪೂರ್‌ಳ ವಿಚಾರಣೆ ನಡೆದಿತ್ತು
2020 ರಲ್ಲಿ ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿದ್ಧಾಂತ್ ಕಪೂರ್‌ಳ ಸಹೋದರಿ ಶ್ರದ್ಧಾ ಕಪೂರ್ ವಿಚಾರಣೆಯನ್ನು ಎನ್‌ಸಿಬಿ ಮಾಡಿತ್ತು. ಶ್ರದ್ಧಾ ಕಪೂರ್ ಸಹ ಡ್ರಗ್ಸ್ ಸೇವಿಸಿದ್ದಳು ಎಂಬ ಅನುಮಾನವನ್ನು ಎನ್‌ಸಿಬಿ ಆಗ ವ್ಯಕ್ತಪಡಿಸಿತ್ತು. ಈಗ ಶ್ರದ್ಧಾಳ ಸಹೋದರ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದಾನೆ.

ಸಿನಿಮಾಗಳಲ್ಲಿ ನಟಿಸಿರುವ ಸಿದ್ಧಾಂತ್ ಕಪೂರ್
ಬಾಲಿವುಡ್‌ನ ಜನಪ್ರಿಯ ನಟ ಶಕ್ತಿ ಕಪೂರ್‌ನ ಪುತ್ರ, ಶ್ರದ್ಧಾ ಕಪೂರ್‌ಳ ಸಹೋದರ ಆಗಿರುವ ಸಿದ್ಧಾಂತ್ ಕಪೂರ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಶೂಟೌಟ್ ಅಟ್ ವಡಾಲಾ, 'ಅಗ್ಲಿ', 'ಹಸೀನ್ ಪರ್ಕರ್', 'ಚೆಹ್ರೆ', ವೆಬ್ ಸರಣಿ 'ಭೂಕಾಲ್' ಗಳಲ್ಲಿ ನಟಿಸಿದ್ದಾರೆ. ಅಲ್ಲದೆ 'ಭೂಲ್ ಭುಲಯ್ಯ', 'ಬಾಗಂಬಾಗ್' ಇನ್ನೂ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.

2020 ರಲ್ಲಿ ಹೊರಬಿದ್ದ ಡ್ರಗ್ಸ್ ಕರ್ಮಕಾಂಡ
2020 ರಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಎರಡರಲ್ಲೂ ಡ್ರಗ್ಸ್ ಪ್ರಕರಣ ಹೊರಬಿದ್ದಿತ್ತು. ಬಾಲಿವುಡ್‌ನಲ್ಲಿ ಹಲವು ಎ ಕ್ಲಾಸ್ ನಟ-ನಟಿಯರಿಗೆ, ನಿರ್ದೇಶಕ ನಿರ್ಮಾಪಕರಿಗೆ ಎನ್‌ಸಿಬಿ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು. ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವು ಪ್ರಮುಖರ ಬಂಧನ ಸಹ ಆಗಿತ್ತು. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಸಹ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರ ಬಂಧನ ಆಗಿತ್ತು. ಲೂಸ್ ಮಾದ ಯೋಗಿ, ದಿಗಂತ್, ಐಂದ್ರಿತಾ ರೇ ಸೇರಿದಂತೆ ಹಲವು ನಟ-ನಟಿಯರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.