»   » 'ನಾನವನಲ್ಲಾ..ನಾನವನಲ್ಲಾ' ಎಂದ ಜೂನಿಯರ್ ಮಲ್ಯ

'ನಾನವನಲ್ಲಾ..ನಾನವನಲ್ಲಾ' ಎಂದ ಜೂನಿಯರ್ ಮಲ್ಯ

Posted By:
Subscribe to Filmibeat Kannada

''ನಾನವನಲ್ಲಾ...ನಾನವನಲ್ಲಾ'', ''ನಾನು ಹಾಗಲ್ಲವೇ ಅಲ್ಲ''...ಅಂತ ಎಲ್ಲೇ ಹೋದರೂ ಸಿದ್ಧಾರ್ಥ್ ಮಲ್ಯ ಬಾಯಿಬಡ್ಕೊಂಡು ಹೇಳೋ ಪರಿಸ್ಥಿತಿ ಬಂದುಬಿಟ್ಟಿದೆ. ಅಂತಹ ಕೆಲಸ ಸಿದ್ಧಾರ್ಥ್ ಮಾಡಿದ್ದಾದರೂ ಏನು? ಮಲ್ಯ ಪುತ್ರ ಯಾವುದಾದರೂ ಕೇಸ್ ನಲ್ಲಿ ಸಿಲುಕಿಹಾಕಿಕೊಂಡಿದ್ದಾರಾ ಅಂತ ಅಂದುಕೊಳ್ಳಬೇಡಿ! ಸಿದ್ದು ಮ್ಯಾಟರ್ರೇ ಬೇರೆ.!

ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಮಧ್ಯೆ ಕೂತು ಮದ್ಯದ ದೊರೆ ವಿಜಯ್ ಮಲ್ಯ ಪೋಸ್ ಕೊಟ್ರೆ, ಮಲ್ಯ ಪುತ್ರ ಸಿದ್ಧಾರ್ಥ್ ಅಪ್ಪನಿಗೆ ತದ್ವಿರುದ್ಧ. ಯಾಕಂದ್ರೆ ಸಿದ್ದು ಸುತ್ತೋದೇ ಹುಡುಗರ ದಂಡಿನ ಜೊತೆ. ಹುಡುಗೀಯರು ಅಂದ್ರೆ ಮಾರುದ್ದ ಡಿಸ್ಟೆನ್ಸ್ ಮೇನ್ಟೇನ್ ಮಾಡುವ ಸಿದ್ದು ಈಗೆಲ್ಲೇ ಹೋದ್ರು ತಾನು 'ಹಾಗಲ್ಲ' ಅಂತ ಸಾರಿ ಸಾರಿ ಹೇಳುವಂತಾಗಿದೆ. [ಸಿದ್ದಾರ್ಥ್ ಮಲ್ಯಗೆ ಬೆಂಡೆತ್ತಿ ಬ್ರೇಕು ಹಾಕಿದ ಆಯೇಷಾ]

Siddharth Mallya confesses that he not a Gay

ಅಸಲಿ ವಿಷ್ಯ ಏನಪ್ಪಾ ಅಂದ್ರೆ ಸಿದ್ದು 'ಗೇ' ಅರ್ಥಾತ್ ಸಲಿಂಗಕಾಮಿ ಅಂತ ಅಂತೆಕಂತೆಗಳ ಗುಲ್ಲು ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೂ ಹಬ್ಬಿದೆ. ಅದನ್ನ ಹಬ್ಬಿಸಿದ ಪುಣ್ಯಾತ್ಮ ಯಾರೋ? ಇಲ್ಲಾ ಸಿದ್ದು ಇರೋದೇ ಹಾಗೋ? ನಮ್ಗಂತೂ ಗೊತ್ತಿಲ್ಲ! ಆದ್ರೆ, ಎಲ್ಲೇ ಹೋದ್ರು ಸಿದ್ದು ಕಿವಿಗೆ ಬೇಡಬೇಡ ಅಂದ್ರೂ ಬೀಳುತ್ತಿರುವ ಪ್ರಶ್ನೆ ''ಆರ್ ಯು ಗೇ?'' ಅರ್ಥಾತ್ ''ನೀವು ಸಲಿಂಗಕಾಮಿಯೇ?'' ಅಂತ! [ಜೂನಿಯರ್ ಮಲ್ಯ ಜತೆ ದೀಪಿಕಾ ಪಡುಕೋಣೆ ಜೂಟ್]

ಇದನ್ನ ಕೇಳಿಕೇಳಿ ಸುಸ್ತಾಗಿರುವ ಸಿದ್ಧಾರ್ಥ್, ತಾನು ಸಲಿಂಗಕಾಮಿ ಅಲ್ಲ ಅಂತ ಸಾಬೀತು ಪಡಿಸೋಕೆ ಹರಸಾಹಸ ಪಡ್ತಿದ್ದಾರೆ. ಹೇಳಿಕೊಳ್ಳೋಕೆ ಸಿದ್ದು ಜೊತೆ ಯಾವ ಗರ್ಲ್ ಫ್ರೆಂಡ್ ಕೂಡ ಇಲ್ಲ! ಒಂದ್ಕಾಲದಲ್ಲಿ ಸಿದ್ದಾರ್ಥ್ ಜೊತೆ ಕೈಕೈಹಿಡ್ಕೊಂಡು ಓಡಾಡ್ತಿದ್ದ ದೀಪಿಕಾ ಕೂಡ ಈಗ ಸಿದ್ಧಾರ್ಥ್ ಎದುರಿಗೆ ಬಂದ್ರೂ 'ಕ್ಯಾರೆ' ಅನ್ನಲ್ಲ.

ಐಪಿಎಲ್ ಪಂದ್ಯದ ವೇಳೆ ಸಿದ್ದು ಕೆನ್ನೆ ಮೇಲೆ ದೀಪಿಕಾ ಲಿಪ್ ಸ್ಟಿಕ್ ಪ್ರಿಂಟ್ ಒತ್ತಿದ್ರೂ, ಸಿದ್ದು ಕಡೆಯಿಂದ ಯಾವ ಪ್ರತಿಕ್ರಿಯೆ ಬರ್ಲಿಲ್ಲ. ಸಿದ್ದು 'ಹಾಗೆ' ಅಂತ ದಿಪ್ಪಿ ಕಿವಿಗೆ ಬಿದ್ದಿದ್ದರ ಪರಿಣಾಮವೋ ಏನೋ, ಏಕಾಏಕಿ ಸಿದ್ದು ಕೈಲಿ ಚೊಂಬು ಕೊಟ್ಟು ದೀಪಿಕಾ, ರಣ್ಬೀರ್ ಹಿಂದೆ ಬಿದ್ಬಿಟ್ಲು.

Siddharth Mallya confesses that he not a Gay1

ಅತ್ತ ಬಾಲಿವುಡ್ ನನಗಲ್ಲವೇ ಅಲ್ಲ! ಏನಿದ್ರೂ ಹಾಲಿವುಡ್ ಮಾತ್ರ ಅಂತ ಸೀದಾ ಫ್ಲೈಟ್ ಹತ್ತಿದ್ದ ಸಿದ್ದಾರ್ಥ್ ವಾಪಸ್ಸು ಬರುವಷ್ಟರಲ್ಲಿ 'ಸಲಿಂಗಕಾಮಿ' ಹಣೆಪಟ್ಟಿ ಹೊತ್ತುಕೊಂಡು ಬಂದಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದರ ಅಡ್ಡಪರಿಣಾಮವಾಗಿ, ಸಿದ್ದಾರ್ಥ್ ಟ್ವಿಟ್ಟರ್ ಅಕೌಂಟ್ ತೆರೆದ್ರೆ, ಎಲ್ಲಾ ಟ್ವೀಟ್ ಗಳಲ್ಲಿರುವುದು ಅದೇ ಪ್ರಶ್ನೆ.! ಹಾಗೆ ಪ್ರಶ್ನೆ ಮಾಡುತ್ತಿರುವವರೂ ಹುಡುಗರೇ.!!! [ದೀಪಿಕಾ ಜೂನಿಯರ್ ಮಲ್ಯ ಸಂಬಂಧದಲ್ಲಿ ಬಿರುಕು]

ಇದನ್ನ ನೋಡಿ ನೋಡಿ ಸಾಕಾಗಿ ಎಲ್ಲದಕ್ಕೂ ಟ್ವೀಟ್ ಮಾಡೋಕೆ ಅಸಾಧ್ಯ ಅಂತ ''ಸಿದ್ಧ್ ಸೆಷನ್'' ಅನ್ನುವ ವೀಡಿಯೋ ಮಾಡಿ ತಮ್ಮ 'ಕಾಮಪುರಾಣ'ದ ಬಗ್ಗೆ ಸಿದ್ದಾರ್ಥ್ ಮಲ್ಯ ಬಾಯ್ಬಿಟ್ಟಿದ್ದಾರೆ. ''ನಾನು ಸಲಿಂಗಕಾಮಿ ಅಲ್ಲ. ಅದನ್ನ ಸ್ಪಷ್ಟಪಡಿಸಿರುವುದು ಖುಷಿಯಾಗಿದೆ'' ಅಂತ ವೀಡಿಯೋ ಸಮೇತ ಸಿದ್ಧಾರ್ಥ್ ಮಲ್ಯ ಟ್ವೀಟ್ ಮಾಡಿದ್ದಾರೆ. ''ನಾನು 'ಆ'ತರ ಅಲ್ಲ'' ಅಂತ ಎಲ್ಲಾ ಬಿಟ್ಟು ಸಿದ್ದು ಹೇಳ್ಬೇಕಾಯ್ತಲ್ಲಾ..! ಛೇ, ಎಂಥಾ ಕಾಲ ಬಂತಪ್ಪಾ.. (ಏಜೆನ್ಸೀಸ್)

English summary
Siddharth Mallya has taken his twitter account to confess that he is not a Gay. Siddarth Mallya is desperately uploading Sid Sessions to clear the 'Gay question'. Check out the Video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada