»   » ಬ್ಯೂಟಿ, ಟ್ಯಾಲೆಂಟೇ ಈ ಬೆಡಗಿಯರ ಗಾಡ್ ಫಾದರ್

ಬ್ಯೂಟಿ, ಟ್ಯಾಲೆಂಟೇ ಈ ಬೆಡಗಿಯರ ಗಾಡ್ ಫಾದರ್

By: ಜೀವನರಸಿಕ
Subscribe to Filmibeat Kannada

ಒಬ್ಬರು ಹಾಲಿನಷ್ಟು ಬಿಳಿಯಿದ್ದರೆ ಮತ್ತೊಬ್ಬರು ಹಾಲನ್ನೂ ಮೀರಿಸೋ ಮಂಜು. ಕೈತೊಳೆದು ಮುಟ್ಟಬೇಕು, ಅಂತಹಾ ಸೌಂದರ್ಯದ ಖನಿಗಳು. ಈ ಇಬ್ಬರೂ ಚೆಲುವೆಯರು ಬಾಲಿವುಡ್ ನಿಂದಲೇ ಸಿನಿ ಜೀವನ ಶುರು ಮಾಡಿದ ಚೆಲುವೆಯರು.

ಹಂಸಿಕಾ ಮೋಟ್ವಾನಿ ಬಾಲ ನಟಿಯಾಗಿ ಬಾಲಿವುಡ್ ನಲ್ಲಿ ಕಾಣಿಸಿಕೊಂಡ್ರೆ, 1998ರಲ್ಲಿ 'ದಿಲ್ ಸೇ' ಸಿನಿಮಾ ಮೂಲಕ ಪ್ರೀತಿ ಜಿಂಟಾ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದು. ಪ್ರೀತಿ ಜಿಂಟಾ ಸದ್ಯ ನೆಸ್ ವಾಡಿಯಾರನ್ನ ಮದುವೆಯಾಗಿ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಒಡತಿಯಾಗಿ ಸೆಟ್ಲ್ ಆಗಿದ್ದಾರೆ.

ಆದರೆ ಹಂಸಿಕಾ ಮೋಟ್ವಾನಿ 21ನೇ ವಯಸ್ಸಿಗೇ ಎಷ್ಟು ಫೇಮಸ್ ಅಂದ್ರೆ, ತಮಿಳುನಾಡಿನಲ್ಲಿ ಅಭಿಮಾನಿಗಳು ಹಂಸಿಕಾಗೆ ದೇವಸ್ಥಾನ ಕಟ್ಟೋಕೆ ಹೊರಟಿದ್ದರು. ಕನ್ನಡದಲ್ಲೂ ಅಭಿನಯಿಸಿರೋ ಹಂಸಿಕಾ 2010ರಲ್ಲಿ ಪವರ್ ಸ್ಟಾರ್ ಪುನೀತ್ ಗೆ 'ಬಿಂದಾಸ್' ಜೋಡಿಯಾಗಿದ್ರು. [ಗರ್ಭಿಣಿ ಐಶ್ವರ್ಯ ರೈ ದಾರಿಯಲ್ಲಿ ಪ್ರೀತಿ ಜಿಂಟಾ!]

ಈ ಚೆಲುವೆಯರ ಚೆಂದವನ್ನ ಎಷ್ಟು ಹೊಗಳಿದ್ರೂ ಸಾಲದು. ಒಬ್ಬರಿಗಿಂತ ಮತ್ತೊಬ್ಬರು ಸುಂದರಿಯರು ಈ ಬ್ಯೂಟಿಗಳ ಸಿನಿಮಾಗಳ ಹಲವು ಸಿನಿಮಾಗಳು ಈ ವರ್ಷ ತೆರೆಗೆ ಬರಲಿದೆ. ಈ ಚೆಲುವೆಯರ ಇಂಟರೆಸ್ಟಿಂಗ್ ಹೋಲಿಕೆಗಳು ವೆರೈಟಿ ವೆರೈಟಿಯಾಗಿವೆ.

ಬ್ಯೂಟಿ ಮತ್ತು ಟ್ಯಾಲೆಂಟೇ ಗಾಡ್ ಫಾದರ್

ಈ ಇಬ್ಬರೂ ಚೆಲುವೆಯರು ನೋಡೋಕೆ ಮಾತ್ರ ಒಂದೇ ತರಹ ಅಲ್ಲ. ಗುಣಗಳಲ್ಲೂ ಹೋಲಿಕೆ ಇದೆ. ಇಬ್ಬರಿಗೂ ಗಾಡ್ ಫಾದರ್ ಗಳಿಲ್ಲ. ಈ ಬ್ಯೂಟಿಗಳಿಗೆ ಟ್ಯಾಲೆಂಟು, ಬ್ಯೂಟೀನೇ ಗಾಡ್ ಫಾದರ್.

ಒಂದೇ ರೀತಿ ಕಾಣೋ ಚೆಲುವೆಯರು ಒಂದೇ ಕಡೆಯವರಲ್ಲ

ಕಣ್ಣು ಕುಕ್ಕೋ ಈ ಸುಂದರಿಯರು ಒಂದೇ ರೀತಿ ಕಂಡರೂ ಒಬ್ಬರು ಒಂದೇ ರಾಜ್ಯದವರಲ್ಲ. ಹಂಸಿಕಾ ಬಾಂಬೆಯ ಬೆಡಗಿಯಾದರೆ, ಪ್ರೀತಿ ಜಿಂಟಾ ಹಿಮಾಚಲ ಪ್ರದೇಶದ ಶಿಮ್ಲಾದ ಹಿಮದಂತಹಾ ಚೆಲುವೆ.

ಪ್ರೀತಿಗೆ ಮೊದಲ ಸಿನಿಮಾ ಆಗ ಹಂಸಿಕಾಗೆ ಏಳು ವರ್ಷ

ಗುಳಿ ಕೆನ್ನೆಯೊಂದನ್ನ ಬಿಟ್ಟು ಬೇರೆಲ್ಲದರಲ್ಲೂ ಒಬ್ಬರನ್ನೊಬ್ಬರು ಹೋಲುವ ಈ ಸ್ವಪ್ನ ಸುಂದರಿಯರಲ್ಲಿ ಪ್ರೀತಿ ಮೊದಲ ಸಿನಿಮಾ ಮಾಡ್ತಿದ್ದಾಗ ಹಂಸಿಕಾ ಏಳು ವರ್ಷದ ಮಗು.

ಹೈಟು ವೆಯ್ಟು ಹೆಚ್ಚೂ ಕಡಿಮೆ ಸೇಮ್ ಟು ಸೇಮ್

ಅಕ್ಕ ಪಕ್ಕ ನಿಲ್ಲಿಸಿದ್ರೆ ಅಕ್ಕ ತಂಗಿಯರಂತೆ ಕಾಣೋ ಈ ಸ್ವೀಟ್ ಬ್ಯೂಟಿಗಳ ಹೈಟಲ್ಲೂ ಅಂತಹಾ ವ್ಯತ್ಯಾಸ ಏನಿಲ್ಲ ಹಂಸಿಕಾ ಮೋಟ್ವಾನಿ (5' 5''), ಪ್ರೀತಿಗಿಂತ (5' 3.78'') ಸ್ವಲ್ಪ ಜಾಸ್ತಿ ಹೈಟು ಅಷ್ಟೇ.

ಇಬ್ಬರೂ ಚತುರ್ಭಾಷಾ ತಾರೆಯರು

ಪ್ರೀತಿ ಜಿಂಟಾ ಹಿಂದಿ, ಇಂಗ್ಲಿಷ್, ತೆಲುಗು, ಪಂಜಾಬಿ ಬಾಷೆಗಳು ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. ಹಂಸಿಕಾ 22 ವರ್ಷಕ್ಕೇ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಅಭಿನಯಿಸಿ ಚತುರ್ಭಾಷಾ ತಾರೆಯಾಗಿದ್ದಾರೆ.

English summary
Here is the similarities between actress Hansika Motwani and Preity Zinta. Both are started their career with Bollywood. Beauty and Talent are their godfathers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada