Don't Miss!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- News
ಭಾರತ್ ಜೋಡೋ ಯಾತ್ರೆ: ಸಂಭ್ರಮಾಚರಣೆಯ ಉತ್ಸಾಹ ಕುಗ್ಗುವ ಸಾಧ್ಯತೆ
- Technology
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲ್ಲು ಫ್ಯಾಮಿಲಿಯಲ್ಲಿ ಮತ್ತೊಂದು ವಿಚ್ಛೇದನ, ಸೋಹೈಲ್-ಸೀಮಾ ದೂರ
ಸಲ್ಮಾನ್ ಖಾನ್ ಕುಟುಂಬದಿಂದ ಮತ್ತೊಂದು ಬೇಸರದ ಸಂಗತಿ ಹೊರಬಿದ್ದಿದೆ. ಬಾಲಿವುಡ್ ಹೆಸರಾಂತ ಕಪಲ್‌ಗಳಾಗಿದ್ದ ಸೋಹೈಲ್ ಖಾನ್ ಹಾಗೂ ಸೀಮಾ ಖಾನ್ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನು ನೀಡಿದ್ದಾರೆ. ತಮ್ಮ 24 ವರ್ಷದ ವಿವಾಹ ಬಂಧನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಇಂದು (ಮೇ 13) ಮುಂಬೈನ ಕೌಟುಂಬಿಕ ನ್ಯಾಯಲಯದಲ್ಲಿ ಇಬ್ಬರು ಒಪ್ಪಿಗೆ ಸೂಚಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಇದು ಎರಡನೇ ವಿಚ್ಛೇದನವಾಗಿದೆ. ಈ ಮೊದಲು ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ತಮ್ಮ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟು ಡಿವೋರ್ಸ್ ಪಡೆದುಕೊಂಡಿದ್ದರು. ಈಗ ಸಲ್ಮಾನ್ ಖಾನ್ ರ ಮತ್ತೊಬ್ಬ ತಮ್ಮ ಸೊಹೈಲ್ ಖಾನ್ ಕೂಡ ಇದೇ ಹಾದಿ ತುಳಿದಿದ್ದಾರೆ. ಇಂದು (ಮೇ13) ಇಬ್ಬರು ಕೂಡ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದು, ಇಬ್ಬರು ಡಿವೋರ್ಸ್ ಗೆ ಅರ್ಜಿ ಸಲ್ಲಿಸಲು ಬಂದಿದ್ದರು ಎಂಬುದು ಖಾತರಿಯಾಗಿದೆ.
Salman
Khan:
'ದಿ
ಕಾಶ್ಮೀರ್
ಫೈಲ್ಸ್'
ಸಿನಿಮಾ
ನೋಡಿದ
ಸಲ್ಮಾನ್
ಪ್ರತಿಕ್ರಿಯೆ
ಹೀಗಿತ್ತು
ನಟ ಸಲ್ಮಾನ್ ಖಾನ್ ಇಂದಿಗೂ ಕೂಡ ಬ್ಯಾಚುಲರ್ ಆಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ, ಇಬ್ಬರು ತಮ್ಮಂದಿರು ಮಾತ್ರ ಮದುವೆಯಾಗಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಆದರೆ, ಇದ್ದಕ್ಕಿಂದತೆ 2017 ರಲ್ಲಿ ಅಬಾರ್ಜ್ ಹಾಗೂ ಮಲೈಕಾ ವಿಚ್ಚೇದನಾ ಪಡೆದುಕೊಂಡು ದೂರ ದೂರ ಆಗಿದ್ದು, ಈಗ ಇಬ್ಬರು ಸಹ ಬೇರೆಯವರ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಇದಾದ ಕೆಲವೇ ವರ್ಷಗಳಲ್ಲಿ ಸೋಹೈಲ್ ಖಾನ್ ಹಾಗೂ ಪತ್ನಿ ಸೀಮಾ ಖಾನ್ ಕೂಡ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿರುವುದು ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸೊಹೈಲ್ ಖಾನ್
1998 ರಲ್ಲಿ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕಿ ಸೀಮಾ ಸಚ್‌ದೇವ್ ಅವರ ಜೊತೆ ಸೊಹೈಲ್ ಖಾನ್ ಮದುವೆಯಾಗಿದ್ದರು. ಈ ಇಬ್ಬರಿಗೆ ನಿರ್ವಾಣ್ ಖಾನ್ ಹಾಗೂ ಯೋಹಾನ್ ಖಾನ್ ಮಕ್ಕಳಿದ್ದಾರೆ. ಸೊಹೈಲ್‌ಗೆ ಈಗ 51 ವರ್ಷವಾಗಿದ್ದು, ಸೀಮಾಗೆ 46 ವರ್ಷವಾಗಿದೆ. ಸದ್ಯ ಈ ಇಬ್ಬರು ದಂಪತಿಗಳು 24 ವರ್ಷ ಸಂಸಾರ ಮಾಡಿ ಈಗ ಇದ್ದಕ್ಕಿಂದ್ದಂತೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಆದರೆ, ಇಬ್ಬರ ಈ ಧಿಡೀರ್ ನಿರ್ಧಾರಕ್ಕೆ ಕಾರಣ ಇನ್ನು ತಿಳಿದು ಬಂದಿಲ್ಲ. ವಿಚ್ಛೇದನಕ್ಕೂ ಮುನ್ನ ಇವರಿಬ್ಬರು ಹಲವು ದಿನಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಸದ್ಯ ಇಂದು (ಮೇ 13) ಇಬ್ಬರು ಒಪ್ಪಿಗೆ ಸೂಚಿಸಿ ಮುಂಬೈ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಲ್ಮಾನ್
ಖಾನ್
ವಿರುದ್ಧ
ಪತ್ರಕರ್ತ
ದೂರು:
ಕೋರ್ಟ್ನಿಂದ
ಸಮನ್ಸ್

2017 ರಲ್ಲಿ ಅರ್ಬಾಜ್, ಆರೋರಾ ವಿಚ್ಛೇದನ
ಸೊಹೈಲ್ ಖಾನ್ ಅಣ್ಣ ಅರ್ಬಾಜ್ ಖಾನ್ ಹಾಗೂ ಮಲೈಕಾ ಆರೋರ ಡಿವೋರ್ಸ್ ಪಡೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಇದು ಮೊದಲನೇ ವಿಚ್ಛೇದನ ಪ್ರಕರಣವಾಗಿತ್ತು. 1998 ರಲ್ಲಿ ನಟಿ ಮಲೈಕಾ ಆರೋರಾ ಜೊತೆಗೆ ಅರ್ಬಾಜ್ ಖಾನ್ ವಿವಾಹವಾಗಿದ್ದರು. ವಿವಾಹವಾದ ಕೆಲ ವರ್ಷದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ದೂರಾಗಲು ನಿರ್ಧರಿಸಿದರು. 2017 ರ ಮೇ ನಲ್ಲಿ ಇಬ್ಬರಿಗೂ ವಿಚ್ಛೇದನೆ ದೊರೆತು ದೂರ ದೂರ ಆದರೂ. ಇವರಿಗೆ 18 ವರ್ಷದ ಅರ್ಹಾನ್ ಹೆಸರಿನ ಮಗನಿದ್ದಾನೆ. ಸದ್ಯ ಮಲೈಕಾ ಆರೋರಾ, ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದಾರೆ. ವಿಚ್ಚೇದನಾ ಪಡೆದು ದೂರ ಆಗಿದ್ದರೂ ಸಹ ಮಗನ ಕಾಳಜಿ ಮಾಡುವುದರಲ್ಲಿ ಇಬ್ಬರು ಯಾವುದೇ ಕೊರತೆ ಮಾಡಿಲ್ಲ.

ಸೋಹೈಲ್, ಸೀಮಾ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ
ಅರ್ಬಾಜ್ ಖಾನ್ ಡಿವೋರ್ಸ್ ನಂತರ ಸಲ್ಲು ಕುಟುಂಬದಲ್ಲಿ ಸೊಹೈಲ್ ವಿಚ್ಛೇದನದ ಕುರಿತು ಚರ್ಚೆ ಆರಂಭವಾಗಿದೆ. ಕೇವಲ 5 ವರ್ಷದಲ್ಲೇ ಸೊಹೈಲ್ ಕೂಡ ವಿಚ್ಛೇದನಕ್ಕೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಸಲ್ಲು ಫ್ಯಾಮಿಲಿಯಲ್ಲಿ ಇಷ್ಟೆಲ್ಲ ಬೆಳವಣಿಗೆಯಾಗುತ್ತಿದ್ದು, ಈವರೆಗೂ ಡಿವೋರ್ಸ್ ಕುರಿತಾಗಿ ಸೊಹೈಲ್ ಅಗಲಿ ಸೀಮಾ ಆಗಲಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಈ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇಬ್ಬರ ವಿರಸದ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಹೊರ ಬೀಳ ಬೇಕಿದೆ.
ಮಲೈಕಾ
ಅರೋರಾ,
ಅರ್ಜುನ್
ಕಪೂರ್
ಪ್ರೇಮಿಗಳ
ದಿನ
ಸ್ಪೆಷಲ್
ಸೆಲೆಬ್ರೆಷನ್!

ಇಬ್ಬರು ತಮ್ಮಂದಿರ ಸಂಸಾರ ನೋಡಿ ಸಲ್ಲು ಮದುವೆಯಾಗಿಲ್ವಾ?
ಬಾಲಿವುಡ್‌ನ ಸುಲ್ತಾನ ಆಗಿರುವ ನಟ ಸಲ್ಮಾನ್ ಖಾನ್ ಈಗಲೂ ಎಷ್ಟೋ ಹುಡುಗಿಯರಿಗೆ ಅಚ್ಚಮೆಚ್ಚು. ಆ ಮಟ್ಟಿಗಿನ ಫಿಮೇಲ್ ಫ್ಯಾನ್ಸ್‌ನ್ನು ನಟ ಸಲ್ಮಾನ್ ಖಾನ್ ಹೊಂದಿದ್ದಾರೆ. 56 ವರ್ಷವಾದರೂ ಸಹ ಇನ್ನು ಮದುವೆಯಾಗದೇ ಸ್ಟಿಲ್ ಬ್ಯಾಚುಲರ್ ಆಗಿ ಇದ್ದಾರೆ. ಆದರೆ, ಇವರ ತಮ್ಮಂದಿರಾದ ಅರ್ಬಜ್ ಹಾಗೂ ಸೊಹೈಲ್ ಮದುವೆಯಾಗಿ ಸಂಸಾರ ಚೆನ್ನಾಗಿ ನಡೆಸುತ್ತಿದ್ದರು. ಈಗ ಧಿಡೀರ್ ಅಂತ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಒಂದು ಕಡೆ ಸಲ್ಮಾನ್ ಖಾನ್ ಮದುವೆಯಾಗದೇ ಇರಲು ತಮ್ಮಂದಿರ ಸಂಸಾರವೇ ಕಾರಣಾನ ಎಂಬ ಅನುಮಾನಗಳು ಕೂಡ ಅಭಿಮಾನಿ ಬಳಗದಲ್ಲಿ ವ್ಯಕ್ತವಾಗಿದೆ.