ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ನಟಿ ಸೋನಾಲಿ ಬೇಂದ್ರೆ
Recommended Video

ಪಂಚಭಾಷಾ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಈಗಷ್ಟೆ ಈ ಸುದ್ದಿ ಎಲ್ಲಡೆ ಹರಡಿದ್ದು ಅವರ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ನಂಬಲಾಗದ ವಿಚಾರ ಆಗಿದೆ. ಕ್ಯಾನ್ಸರ್ ಫೋರ್ಥ್ ಸ್ಟೇಜ್ ತಲುಪಿದ್ದು ಸದ್ಯ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನ 'ಸ್ಲೋನ್ ಕಟೆರಿಂಗ್ ಕ್ಯಾನ್ಸರ್ ಸೆಂಟರ್' ಚಿಕಿತ್ಸೆ ಪಡೆಯುತ್ತಿದ್ದಾರಂತೆ.
ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ಸೋನಾಲಿ ಇನ್‌ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದಾರೆ. "ಸದ್ಯ ನಾನು ಕಾಯಿಲೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಎನ್ನುವುದನ್ನು ಈ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕುಟುಂಬ ಹಾಗೂ ಸ್ನೇಹಿತರು ನನ್ನ ಜೊತೆಯಿದ್ದು ನಾನು ಧೈರ್ಯದಿಂದ ಎಲ್ಲವನ್ನು ಎದುರಿಸುವಂತೆ ನೋಡಿಕೊಳ್ಳುತ್ತಿದ್ದಾರೆ" ಎನ್ನುವುದನ್ನು ತಿಳಿಸಿದ್ದಾರೆ.
ಸೋನಾಲಿ ಬೇಂದ್ರೆ ಕನ್ನಡದ 'ಪ್ರೀತ್ಸೇ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದಾರೆ. ಬಾಲಿವುಡ್, ಟಾಲಿವುಡ್ , ಕಾಲಿವುಡ್ ಸೇರಿದಂತೆ ಮಲೆಯಾಳಂ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.

43 ವಯಸ್ಸಿನ ಸೊನಾಲಿ ಬೇಂದ್ರೆ ಅವರಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಚಿತ್ರರಂಗದ ಸ್ನೇಹಿತರು ಹಾಗೂ ಅಭಿಮಾನಿಗಳು ಬೇಗ ಹುಷಾರಾಗುವಂತೆ ಕಮೆಂಟ್ ಗಳ ಮೂಲಕ ಹಾರೈಸಿದ್ದಾರೆ.


Click it and Unblock the Notifications










