»   » ಮದುವೆ ಆದ್ಮೇಲೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಕಪೂರ್ ಕುಟುಂಬದ ಕುಡಿ.!

ಮದುವೆ ಆದ್ಮೇಲೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಕಪೂರ್ ಕುಟುಂಬದ ಕುಡಿ.!

Posted By:
Subscribe to Filmibeat Kannada

ಬಾಲಿವುಡ್ ನಟಿ ಸೋನಂ ಕಪೂರ್ ಮದುವೆ ಸದ್ಯದಲ್ಲೇ ನಡೆಯಲಿದೆ ಎಂಬ ಗುಸು ಗುಸು ಬಿಟೌನ್ ಗಲ್ಲಿಗಳಲ್ಲಿ ಕೇಳಿಬರುತ್ತಿರುವಾಗಲೇ, ಇನ್ನೊಂದು ಗಾಸಿಪ್ ಎಲ್ಲೆಡೆ ಹರಿದಾಡುತ್ತಿದೆ. ಅದು ಏನಪ್ಪಾ ಅಂದ್ರೆ, ಮದುವೆ ಆದ ಬಳಿಕ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಲಂಡನ್ ನಲ್ಲಿ ನೆಲೆಸುತ್ತಾರಂತೆ.

ಸೋನಂ ಕಪೂರ್ ಮದುವೆ ಯಾವಾಗ, ಎಲ್ಲಿ ನಡೆಯುತ್ತೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ, ಮದುವೆ ಆದ್ಮೇಲೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಎಂದು 'ಫಿಲ್ಮ್ ಫೇರ್' ವರದಿ ಮಾಡಿದೆ.

ಈಗಾಗಲೇ ಲಂಡನ್ ನಲ್ಲಿ ಎರಡು ಬೆಡ್ ರೂಮ್ ಇರುವ ಅಪಾರ್ಟ್ ಮೆಂಟ್ ಒಂದನ್ನ ಸೋನಂ ಹಾಗೂ ಆನಂದ್ ಖರೀದಿ ಮಾಡಿದ್ದಾರಂತೆ. ಮದುವೆ ಆದ್ಮೇಲೆ ಅಲ್ಲೇ ನೆಲೆಸಲು ಇಬ್ಬರೂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Sonam Kapoor and Anand Ahuja will move to London after Wedding

ಕಪೂರ್ ಕುವರಿ ಸೋನಂ ಪೀ..ಪೀ..ಪೀ..ಡುಂ..ಡುಂಗೆ ರೆಡಿ.

ಮದುವೆ ತಯಾರಿಯಲ್ಲಿ ತೊಡಗಿರುವ ಸೋನಂ, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಆಹ್ವಾನ ಪತ್ರಿಕೆ ನೀಡುವಲ್ಲಿ ಬಿಜಿಯಾಗಿದ್ದಾರಂತೆ. ಇಂಟ್ರೆಸ್ಟಿಂಗ್ ಅಂದ್ರೆ, ಮಾಜಿ ಗೆಳೆಯ ರಣ್ಬೀರ್ ಕಪೂರ್ ಗೂ ಆಹ್ವಾನ ಪತ್ರಿಕೆ ಕೊಟ್ಟಿದ್ದಾರಂತೆ ಸೋನಂ ಕಪೂರ್.

ಆಲಿಯಾ ಭಟ್, ವರುಣ್ ಧವನ್, ಕರಣ್ ಜೋಹರ್, ಸೈಫ್ ಅಲಿ ಖಾನ್, ಕರಿಶ್ಮಾ ಕಪೂರ್ ಸೇರಿದಂತೆ ಹಲವರು ಸೋನಂ ಗೆಸ್ಟ್ ಲಿಸ್ಟ್ ನಲ್ಲಿದ್ದಾರಂತೆ.

ಮದುವೆ ಬಗ್ಗೆ ಇಷ್ಟೆಲ್ಲ ವರದಿ ಆಗುತ್ತಿದ್ದರೂ, ಯಾವುದಕ್ಕೂ ಸೋನಂ ಕಪೂರ್ ಪ್ರತಿಕ್ರಿಯೆ ಕೊಟ್ಟಿಲ್ಲ. ಮದುವೆ ಬಗ್ಗೆ ಕನ್ಫರ್ಮ್ ಕೂಡ ಮಾಡಿಲ್ಲ.

English summary
According to reports, Bollywood Actress Sonam Kapoor and Anand Ahuja will move to London after Wedding.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X