For Quick Alerts
  ALLOW NOTIFICATIONS  
  For Daily Alerts

  ಲಂಡನ್‌ ನಿಂದ ಬಂದ ಸೋನಂ ಕಪೂರ್ ಮೋದಿಯನ್ನು ಹೊಗಳಿದ್ದೇ ಹೊಗಳಿದ್ದು

  |

  ಕೊರೊನಾ ವೈರಸ್ ಭೀತಿ ಯಾರನ್ನೂ ಬಿಟ್ಟಿಲ್ಲ. ಸಾಮಾನ್ಯನಿಂದ ಹಿಡಿದು ಸ್ಟಾರ್, ಸೆಲೆಬ್ರಿಟಿ ಎಲ್ಲರಿಗೂ ಕೊರೊನಾ ಭೀತಿ ತಾಕಿದೆ. ವಿದೇಶದಲ್ಲಿ ಆರಾಮವಾಗಿ ಸುತ್ತಾಡುತ್ತಿದ್ದವರು ಗೂಡು ಸೇರಿಕೊಳ್ಳುವಂತೆ ಮಾಡಿದೆ.

  ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

  ಇತ್ತೀಚೆಗೆ ಮದುವೆಯಾದ ಬಾಲಿವುಡ್ ತಾರೆ ಸೋನಂ ಕಪೂರ್ ಅವರು ಪತಿ ಆನಂದ್ ಅವರೊಂದಿಗೆ ಲಂಡನ್‌ ನಲ್ಲಿ ಇದ್ದರು. ಇದೀಗ ದೆಹಲಿಗೆ ವಾಪಸ್ ಬಂದ ಸೋನಂ ಕಪೂರ್, ಸರಣಿ ವಿಡಿಯೋಗಳನ್ನು ಮಾಡಿ, ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬಹು ಸಂತೋಶ ವ್ಯಕ್ತಪಡಿಸಿದ್ದಾರೆ.

  'ಆನಂದ್ ಮತ್ತು ನಾನು ಲಂಡನ್‌ನಲ್ಲಿ ಇದ್ದೆವು, ಅಲ್ಲಿ ಕೊರೊನಾ ವೈರಸ್‌ ವಿರುದ್ಧ ಯಾವುದೇ ತಪಾಸಣೆ ಆಗಲಿ ಮತ್ತೊಂದಾಗಲಿ ಆಗುತ್ತಿಲ್ಲ. ಆದರೆ ಭಾರತದಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರವು ರೋಗದ ವಿರುದ್ಧ ಹೋರಾಡುತ್ತಿದೆ ಎಂದು ಸೋನಂ ಹೇಳಿದ್ದಾರೆ.

  25 ದಿನಗಳಿಂದ ಲಂಡನ್‌ನಲ್ಲಿದ್ದ ಸೋನಂ-ಆನಂದ್

  25 ದಿನಗಳಿಂದ ಲಂಡನ್‌ನಲ್ಲಿದ್ದ ಸೋನಂ-ಆನಂದ್

  ಆನಂದ್ ಮತ್ತು ನಾನು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಾಗ, ನಮಗೆ ಫಾರಂ ನೀಡಿ, ನಾವು ಕಳೆದ 25 ದಿನ ಎಲ್ಲೆಲ್ಲಿ ಸುತ್ತಾಡಿದ್ದಾರೆ ಎಂದು ಮಾಹಿತಿ ನೀಡಿ ಎಂದು ಹೇಳಿದರು. ನಾವು ಕಳೆದ 25 ದಿನಗಳಿಂದ ಲಂಡನ್‌ ನಲ್ಲಿಯೇ ಇದ್ದೆವು. ಅಲ್ಲದೆ ಇನ್ನೂ ಕೆಲವು ಆರೋಗ್ಯ ಮಾಹಿತಿಗಳನ್ನು ಕೇಳಿದರು ಅದರಂತೆ ನಾವು ನೀಡಿದೆವು ಎಂದು ಸೋನಂ ಬರೆದುಕೊಂಡಿದ್ದಾರೆ.

  ಅಧಿಕಾರಿಗಳು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ

  ಅಧಿಕಾರಿಗಳು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ

  ಅಧಿಕಾರಿಗಳು ಅದ್ಭುತವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯ ಶ್ಲಾಘನೀಯ, ಎರಡು ಮೂರು ಬಾರಿ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಇದು ಅವಶ್ಯಕವೂ ಆಗಿದೆ. ಎಲ್ಲರೂ ತಾಳ್ಮೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸೋನಂ ಕಪೂರ್ ಹೇಳುತ್ತಿದ್ದಾರೆ.

  ಸೋನಂ ಮತ್ತು ಪತಿ ಪ್ರತ್ಯೇಕವಾಗಿದ್ದಾರೆ

  ಸೋನಂ ಮತ್ತು ಪತಿ ಪ್ರತ್ಯೇಕವಾಗಿದ್ದಾರೆ

  ಸೋನಂ ಕಪೂರ್ ಮತ್ತು ಪತಿ ಆನಂದ್ ಪ್ರಸ್ತುತ ಮನೆಯಲ್ಲಿಯೇ ಇದ್ದಾರೆ (ಸೆಲ್ಫ್ ಕ್ವಾರೆಂಟೈನ್) ಅವರು ಅವರ ಪೋಷಕರೊಂದಿಗೆ ಇದ್ದರು, ಆದರೆ ಲಂಡನ್‌ನಿಂದ ಬಂದಿರುವ ಕಾರಣ ಸ್ವ-ಇಚ್ಛೆಯಿಂದ ಪ್ರತ್ಯೇಕವಾಗಿದ್ದಾರಂತೆ.

  ಅಭಿಮಾನಿಗಳಲ್ಲಿ ಮನವಿ ಮಾಡಿದ ಸೋನಂ

  ಅಭಿಮಾನಿಗಳಲ್ಲಿ ಮನವಿ ಮಾಡಿದ ಸೋನಂ

  'ನನಗೆ ಮತ್ತು ಪತಿಗೆ ಯಾವುದೇ ರೋಗ ಲಕ್ಷ್ಮಣಗಳು ಇಲ್ಲ, ಆದರೂ ಅವರು ಪೋಷಕರು, ಅಜ್ಜ-ಅಜ್ಜಿಯ ಇರದೆ ಪ್ರತ್ಯೇಕವಾಗಿ ಇದ್ದಾರೆ. ಅಲ್ಲದೆ ತಮ್ಮ ಫ್ಯಾನ್ಸ್ ಗಳಿಗೂ ಸೇಫ್ ಆಗಿ ಇರುವಂತೆ ಮನವಿ ಮಾಡಿದ್ದಾರೆ.

  English summary
  Actress Sonam Kapoor and her husband Anand came back from London and praised Indian government hard work to control corona virus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X