Sonam Kapoor: ಸ್ಟಾರ್ ನಟಿಯ ಮನೆ ದರೋಡೆ, ಕೋಟ್ಯಂತರ ಮೌಲ್ಯದ ಹಣ-ಆಭರಣ ಲೂಟಿ

ಬಾಲಿವುಡ್ ಸ್ಟಾರ್ ನಟಿ ಸೋನಂ ಕಪೂರ್‌ಗೆ ಸೇರಿದ ದೆಹಲಿಯ ಮನೆಯಲ್ಲಿ ದರೋಡೆ ನಡೆದಿದ್ದು, ಲೂಟಿಕೋರರು ಕೋಟ್ಯಂತರ ಮೌಲ್ಯದ ಹಣ ಆಭರಣ ದೋಚಿ ಪರಾರಿಯಾಗಿದ್ದಾರೆ.

Recommended Video

Sonam Kapoor | ಸೋನಂ ಕಪೂರ್ ಪತಿಗೆ ನಿಜಕ್ಕು ಮೋಸ ಮಾಡುವ ಉದ್ದೇಶ ಇತ್ತಾ ?

ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಹಾಗೂ ಪತಿ ಆನಂದ್ ಅಹುಜಾ ಅವರುಗಳು ದೆಹಲಿಯಲ್ಲಿ ಅಮೃತಾ ಶೇರ್ಗಿಲ್ ಮಾರ್ಗ್‌ ನಲ್ಲಿ ಐಶಾರಾಮಿ ಮನೆಯೊಂದನ್ನು ಹೊಂದಿದ್ದು, ಅಲ್ಲಿ ಸೋನಂ ಕಪೂರ್‌ರ ಅತ್ತೆ-ಮಾವ ನೆಲೆಸಿರುತ್ತಾರೆ. ಇದೇ ಮನೆಯಲ್ಲಿಯೇ ಈಗ ದರೋಡೆ ನಡೆದಿರುವುದು.

ಮನೆಯಲ್ಲಿ ದರೋಡೆ ನಡೆದಿರುವ ವಿಷಯ ತಿಳಿಯುತ್ತಿದ್ದ ಸೋನಂ ಕಪೂರ್‌ರ ಮಾವನವರ ತಾಯಿ ಸರಳಾ ಅಹುಜಾ ದೆಹಲಿಯ ತುಘ್ಲಕ್ ರಸ್ತೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶೀಘ್ರವಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿದ್ದ ಒಟ್ಟು 25 ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಕೃತ್ಯವನ್ನು ಮನೆಯೊಳಗಿನವರೇ ಮಾಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Sonam Kapoors Delhi House Looted, 2.40 Crore Worth Cash And Jewelry Missing

ದೆಹಲಿಯ ಅಮೃತ್ ಶೇರ್ಘಿಲ್ ರಸ್ತೆಯ ಐಶಾರಾಮಿ ಮನೆಯಲ್ಲಿ ಸೋನಂರ ಪತಿ ಆನಂದ್ ಅಹುಜಾರ ತಾಯಿ ಪ್ರಿಯಾ ಅಹುಜಾ ಹಾಗೂ ತಂದೆ ಹರೀಶ್ ಅಹುಜಾ ಹಾಗೂ ಅವರ ತಾಯಿ ಸರಳಾ ಅಹುಜಾ ನೆಲೆಸಿದ್ದಾರೆ. ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಇದಕ್ಕೆ ಮುನ್ನ ಅವರು ವಿದೇಶದಲ್ಲಿದ್ದರು.

ಸೋನಂರ ಪತಿಯ ಅಜ್ಜಿ ಸರಳ ಅಹುಜಾರ ರೂಮಿನಲ್ಲಿದ್ದ ಒಡವೆ ಹಾಗೂ ಹಣ ನಾಪತ್ತೆಯಾಗಿದೆ ಎನ್ನಲಾಗಿದ್ದು, ಸರಳಾ ಅಹುಜಾ ಪೊಲೀಸರಿಗೆ ನೀಡಿರುವ ಹೇಳಿಕೆಯಂತೆ, ಆಕೆ ಕಳೆದ ಫೆಬ್ರವರಿ 09 ರಂದು ಹಣ ಹಾಗೂ ಆಭರಣಕ್ಕಾಗಿ ಹುಡುಕಾಡಿದಾಗ ಅದು ಅಲ್ಲಿರಲಿಲ್ಲವೆಂದಿದ್ದಾರೆ. ಸುಮಾರು 2.40 ಕೋಟಿ ಮೌಲ್ಯದ ಹಣ ಹಾಗೂ ಆಭರಣ ಈಗ ಕಾಣೆಯಾಗಿದೆ. ಫೆಬ್ರವರಿ 09 ಕ್ಕೆ ಮುನ್ನಾ ಎರಡು ವರ್ಷಗಳ ಹಿಂದೆ ಅದೇ ಸ್ಥಳದಲ್ಲಿ ಹಣ ಹಾಗೂ ಆಭರಣ ಇದ್ದುದಾಗಿ ಸರಳಾ ಅಹುಜಾ ಹೇಳಿದ್ದಾರೆ. ಅಂದರೆ ಕಳೆದ ಎರಡು ವರ್ಷಗಳಿಂದ ಹಣ, ಆಭರಣ ಇದೆಯೆಂಬುದನ್ನು ಅವರು ಪರಿಶೀಲಿಸಿರಲಿಲ್ಲ. ಆದರೆ ಫೆಬ್ರವರಿ 09 ರಂದು ಈ ಹುಡುಕಾಡಿದಾಗ ಆಭರಣ, ಹಣ ಕಾಣೆಯಾಗಿರುವುದು ಗೊತ್ತಾಗಿದೆ.

Sonam Kapoors Delhi House Looted, 2.40 Crore Worth Cash And Jewelry Missing

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದು, ಕಳೆದ ಒಂದು ವರ್ಷದ ಸಿಸಿಟಿವಿ ಫುಟೇಜನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ತಿಂಗಳಷ್ಟೆ ಸೋನಂ ಕಪೂರ್‌ರ ಮಾವ ಹರೀಶ್ ಅಹುಜಾಗೆ ಸೇರಿದ ಸಂಸ್ಥೆಗೆ ಅನಾಮಿಕ ತಂಡವೊಂದು 27 ಕೋಟಿ ರುಪಾಯಿ ವಂಚನೆ ಮಾಡಿತ್ತು. ಹರೀಶ್ ಅಹುಜಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ಭೇದಿಸಿದ ಸೈಬರ್ ಕ್ರೈಂ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು.

ಸೋನಂ ಕಪೂರ್ ತಾಯಿ ಆಗುತ್ತಿದ್ದು, ಪ್ರಸ್ತುತ ಮುಂಬೈನಲ್ಲಿ ವಾಸವಿದ್ದಾರೆ. ತಾವು ತಾಯಿ ಆಗುತ್ತಿರುವ ಖುಷಿಯ ವಿಚಾರವನ್ನು ಕಳೆದ ತಿಂಗಳಷ್ಟೆ ಸೋನಂ ಕಪೂರ್ ಬಹಿರಂಗಪಡಿಸಿದ್ದಾರೆ. ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ವಿವಾಹವು 2018 ರಲ್ಲಿ ನಡೆದಿತ್ತು. ಮದುವೆಯ ಬಳಿಕವೂ ಕೆಲವು ಸಿನಿಮಾಗಳಲ್ಲಿ ಸೋನಂ ಕಪೂರ್ ನಟಿಸಿದ್ದಾರೆ.

More from Filmibeat

English summary
Sonam Kapoor-Anand Ahuja's Delhi house looted. 2.40 crore rs worth cash and jewelry missing. Police investigating the case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X