»   » ಇದೋ ಇಲ್ಲಿದೆ ನೋಡಿ ಸೋನಂ ಕಪೂರ್ ಮದುವೆಯ ಆಹ್ವಾನ ಪತ್ರಿಕೆ

ಇದೋ ಇಲ್ಲಿದೆ ನೋಡಿ ಸೋನಂ ಕಪೂರ್ ಮದುವೆಯ ಆಹ್ವಾನ ಪತ್ರಿಕೆ

Posted By:
Subscribe to Filmibeat Kannada

ಕಳೆದ ಕೆಲ ದಿನಗಳಿಂದ ಸಿನಿ ಲೋಕದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇಂದು ಬೆಳಗ್ಗೆಯಷ್ಟೇ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಂದಿನ ವಾರ ಬಾಲಿವುಡ್ ನಟಿ ಸೋನಂ ಕಪೂರ್ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ.

ಮೇ 8 ರಂದು ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹುಜಾ ವಿವಾಹ ಮಹೋತ್ಸವ ಮುಂಬೈನಲ್ಲಿ ನಡೆಯಲಿದೆ. ಸೋನಂ ಕಪೂರ್-ಆನಂದ್ ಅಹುಜಾ ಮದುವೆಯ ಆಹ್ವಾನ ಪತ್ರಿಕೆ ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ, ನೋಡಿ...

ಸಾಮಾನ್ಯವಾಗಿ ಎಲ್ಲರಂತೆ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಮದುವೆಯ ಆಹ್ವಾನ ಪತ್ರಿಕೆಯನ್ನ ಪ್ರಿಂಟ್ ಮಾಡಿಸಿಲ್ಲ. ಬದಲಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಇ-ವೆಡ್ಡಿಂಗ್ ಇನ್ವೈಟ್ ಕಳುಹಿಸಿದ್ದಾರೆ.

Sonam Kapoors wedding card gets leaked

ಬ್ರೇಕಿಂಗ್ ನ್ಯೂಸ್: ಮೇ 8 ರಂದು ನಡೆಯಲಿದೆ ಸೋನಂ ಕಪೂರ್ ವಿವಾಹ

ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಪರಿಸರ ಪ್ರೇಮಿಗಳು. ಇಬ್ಬರಿಗೂ ಅನವಶ್ಯಕವಾಗಿ ಪೇಪರ್ ವೇಸ್ಟ್ ಮಾಡುವುದು ಇಷ್ಟ ಇಲ್ಲ. ಹೀಗಾಗಿ, ಇ-ವೆಡ್ಡಿಂಗ್ ಇನ್ವೈಟ್ ಮೂಲಕ ಎಲ್ಲರಿಗೂ ತಮ್ಮ ಮದುವೆಗೆ ಆಹ್ವಾನ ನೀಡಿದ್ದಾರೆ.

ಅಂದ್ಹಾಗೆ, ಮೇ 7 ರಂದು ಸಂಜೆ 4 ಗಂಟೆಯಿಂದ ಮುಂಬೈನ ಸಿಗ್ನೇಚರ್ ಐಲ್ಯಾಂಡ್ ನಲ್ಲಿ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೇ 8 ರಂದು ಮಧ್ಯಾಹ್ನ 11 ಗಂಟೆಗೆ ವಿವಾಹ ಮಹೋತ್ಸವ ನಡೆಯಲಿದ್ದು, ರಾತ್ರಿ 8 ಗಂಟೆ ಬಳಿಕ ಮುಂಬೈನ 'ದಿ ಲೀಲಾ'ದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರಿಗೆ ಗ್ರ್ಯಾಂಡ್ ಪಾರ್ಟಿ ಆಯೋಜಿಸಲಾಗಿದೆ.

English summary
Take a look at Bollywood Actress Sonam Kapoor's wedding card.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X