For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಮಾನವೀಯತೆ ಕೆಲಸಕ್ಕೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ ವಿಶ್ವಸಂಸ್ಥೆ

  |

  ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸ್ಪಂದಿಸಿ, ಅವರನ್ನು ತಮ್ಮ ಸ್ವಂತ ಊರುಗಳಿಗೆ ತೆರಳಲು ಊಟ, ತಿಂಡಿ ಸಮೇತ ವ್ಯವಸ್ಥೆ ಮಾಡಿದ ನಟ ಸೋನು ಸೂದ್‌ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.

  ಸೋನು ಸೂದ್ ಅವರ ಮಾನವೀಯತೆ ಕಾರ್ಯವನ್ನು ಗುರುತಿಸಿರುವ ವಿಶ್ವಸಂಸ್ಥೆ ಪ್ರತಿಷ್ಠಿತ ಗೌರವ ನೀಡಿ ಗೌರವಿಸಿದೆ. ಸೋನು ಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದ (ಯುಎನ್‌ಡಿಪಿ) ಪ್ರತಿಷ್ಠಿತ ಎಸ್‌ಡಿಜಿ (ವಿಶೇಷ ಮಾನವೀಯ ಕ್ರಿಯಾ) ಪ್ರಶಸ್ತಿ ನೀಡಿ ಶ್ಲಾಘಿಸಿದೆ.

  ಸೆಟ್‌ಗೆ ಬಂದ ಸೋನು ಸೂದ್‌ ಅನ್ನು ಸನ್ಮಾನಿಸಿದ ಪ್ರಕಾಶ್ ರೈ ಮತ್ತು ತಂಡಸೆಟ್‌ಗೆ ಬಂದ ಸೋನು ಸೂದ್‌ ಅನ್ನು ಸನ್ಮಾನಿಸಿದ ಪ್ರಕಾಶ್ ರೈ ಮತ್ತು ತಂಡ

  ಸೋಮವಾರ ಸಂಜೆ ನಡೆದ ಆನ್‌ಲೈನ್ ಕಾರ್ಯಕ್ರಮದಲ್ಲಿ ನಟ ಸೋನುಸೂದ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪಡೆದು ಸಂತಸ ಹಂಚಿಕೊಂಡ ನಟ ಸೋನು ಸೂದ್ ''ಇದು ಅಪರೂಪದ ಗೌರವ. ಯುಎನ್ ಮಾನ್ಯತೆ ಬಹಳ ವಿಶೇಷ. ಯಾವುದೇ ನಿರೀಕ್ಷೆಗಳಿಲ್ಲದ ಜನರಿಗೆ ನಾನು ಮಾಡಿದ ಸಹಾಯಕ್ಕೆ ನನಗೆ ದೊಡ್ಡ ಗೌರವ ಸಿಕ್ಕಿದೆ'' ಎಂದಿದ್ದಾರೆ.

  ಕೊರೊನಾ ಲಾಕ್‌ಡೌನ್‌ನಲ್ಲಿ ದೇಶದ ಹಲವು ಕಡೆ ಸಿಲುಕಿಕೊಂಡಿದ್ದ ಜನರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿ ಊರುಗಳಿಗೆ ತೆರಳಲು ನೆರವಾಗಿದ್ದರು. ವಿದೇಶದಲ್ಲಿ ಸಿಲುಕೊಂಡಿದ್ದ ಜನರಿಗೆ ಭಾರತಕ್ಕೆ ಬರಲು ಸಹಾಯ ಮಾಡಿದ್ದರು.

  ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟ್ಯಾಪ್ ಇಲ್ಲದ ಮಕ್ಕಳಿಗೆ ಸಹಾಯಹಸ್ತ ಚಾಚಿದ್ದರು. ವೃದ್ದೆಗೆ ಮಾರ್ಷಲ್ ಆರ್ಟ್ಸ್ ಶಾಲೆ ಆರಂಭಿಸಿದ್ದರು. ಹೈದರಾಬಾದ್ ಮೂಲದ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡಿಸಿದ್ದರು. ಮುಂಬೈ ಪೊಲೀಸರಿಗೆ ಫೇಸ್‌ಶೀಲ್ಡ್ ಕೊಟ್ಟಿದ್ದರು. ಹಲವು ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಸಹ ಮಾಡಿಸಿದ್ದರು.

  ಸೋನು ಸೂದ್ ಕಡೆಯಿಂದ ಮತ್ತೊಂದು ಪುಣ್ಯದ ಕೆಲಸಸೋನು ಸೂದ್ ಕಡೆಯಿಂದ ಮತ್ತೊಂದು ಪುಣ್ಯದ ಕೆಲಸ

  ರಾಗಿಣಿ, ಸಂಜನಾ ಮೊಬೈಲ್ ನಿಂದ ಬಯಲಾಯ್ತು ಸ್ಪೋಟಕ ಮಾಹಿತಿ..? | Filmibeat Kannada

  ಹೀಗೆ, ಕಳೆದ ಆರು ತಿಂಗಳಲ್ಲಿ ಅನೇಕ ಸಾಮಾಜಿಕ ಹಾಗೂ ಮಾನವೀಯತೆ ಕಾರ್ಯಗಳನ್ನ ಮಾಡಿರುವ ಸೋನು ಸೂದ್‌ ಅವರನ್ನು 'ರಿಯಲ್ ಹೀರೋ' ಎಂದು ಬಣ್ಣಿಸಲಾಗಿದೆ. ಈಗ ವಿಶ್ವಸಂಸ್ಥೆಯ ಗೌರವ ಸಹಜವಾಗಿ ಖುಷಿ ನೀಡಿದೆ.

  English summary
  Indian actor Sonu Sood honoured by United Nations Development Programme with the SDG Special Humanitarian Award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X