For Quick Alerts
  ALLOW NOTIFICATIONS  
  For Daily Alerts

  ಮಗನಿಗೆ ದುಬಾರಿ ಕಾರ್ ಗಿಫ್ಟ್; ಸ್ಪಷ್ಟನೆ ನೀಡಿದ 'ರಿಯಲ್ ಹೀರೋ' ಸೋನು ಸೂದ್

  |

  ರಿಯಲ್ ಹೀರೋ ಸೋನು ಸೂದ್ ಸಾಮಾಜಿಕ ಕೆಲಸಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಷ್ಟದಲ್ಲಿರೊರಿಗೆ ಸದಾ ಸಹಾಯ ಮಾಡುವ ಸೋನು ಸೂದ್ ಕೋವಿಡ್ 2ನೇ ಅಲೆಯ ಭೀಕರತೆ ಸಮಯದಲ್ಲಿ ಸೋಂಕಿತರ ಪ್ರಾಣ ಉಳಿಸಲು ಹಗಲು ರಾತ್ರಿ ಕಷ್ಪಟ್ಟಿದ್ದಾರೆ. ಇದೀಗ ಸೋನು ಸೂದ್ ಮಗನಿಗೆ ದುಬಾರಿ ಕಾರ್ ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಮಗನಿಗೆ 3 ಕೋಟಿ ಕಾರು..! ಸ್ಪಷ್ಟನೆ ನೀಡಿದ ಸೋನು ಸೂದ್ | Filmibeat Kannada

  ಫಾದರ್ಸ್ ಡೇ ದಿನ ಸೋನು ಸೂದ್ ತನ್ನ ಹಿರಿಯ ಮಗ ಇಶಾನ್ ಗೆ 3 ಕೋಟಿ ರೂ. ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಸೋನು ಸೂದ್ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಮುಂದೆ ಓದಿ..

  ವಿರಳ ಕೋವಿಡ್‌ ಔಷಧ ವಿತರಿಸಿದ ಸೋನು ಸೂದ್: ತನಿಖೆಗೆ ಆದೇಶಿಸಿದ ನ್ಯಾಯಾಲಯವಿರಳ ಕೋವಿಡ್‌ ಔಷಧ ವಿತರಿಸಿದ ಸೋನು ಸೂದ್: ತನಿಖೆಗೆ ಆದೇಶಿಸಿದ ನ್ಯಾಯಾಲಯ

  ಟೆಸ್ಟ್ ಡ್ರೈವ್ ಹೋಗಿದ್ವಿ ಅಷ್ಟೆ

  ಟೆಸ್ಟ್ ಡ್ರೈವ್ ಹೋಗಿದ್ವಿ ಅಷ್ಟೆ

  "ಇದರಲ್ಲಿ ಯಾವುದೇ ಸತ್ಯವಿಲ್ಲ. ನಾನು ನನ್ನ ಮಗನಿಗಾಗಿ ಕಾರು ಖರೀದಿಸಿಲ್ಲ. ಫ್ಯಾಮಿಲಿಗಾಗಿ ಕಾರನ್ನು ಖರೀದಿಸಲು ಟ್ರಯಲ್ ನೋಡಿದ್ದು. ನಾವು ಟೆಸ್ಟ್ ಡ್ರೈವ್ ಗೆ ಹೋಗಿದ್ವಿ ಅಷ್ಟೆ. ಯಾವುದೇ ಕಾರು ಖರೀದಿಸಿಲ್ಲ" ಎಂದು ಹೇಳಿದ್ದಾರೆ.

  ಮಕ್ಕಳ ಜೊತೆ ಸಮಯ ಕಳೆಯುವುದೇ ದುಬಾರಿ ಗಿಫ್ಟ್

  ಮಕ್ಕಳ ಜೊತೆ ಸಮಯ ಕಳೆಯುವುದೇ ದುಬಾರಿ ಗಿಫ್ಟ್

  "ಫಾದರ್ಸ್ ಡೇ ದಿನ ನಾನು ನನ್ನ ಮಗನಿಗೆ ಯಾಕೆ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ. ಅವನು ನನಗೆ ಉಡುಗೊರೆ ನೀಡಬೇಕಲ್ಲವೇ? ಇದು ನನ್ನ ದಿನ" ಎಂದಿದ್ದಾರೆ. ಬಳಿಕ "ಬೆಸ್ಟ್ ಫಾದರ್ಸ್ ಡೇ ಗಿಫ್ಟ್ ಅಂದರೆ ನನ್ನ ಇಬ್ಬರೂ ಮಕ್ಕಳು ನನ್ನ ಜೊತೆ ಸಮಯ ಕಳೆಯುವುದು. ನಾನು ಅವರಿಗೆ ಹೆಚ್ಚು ಸಮಯ ನೀಡಿಲ್ಲ. ಈಗ ಅವರು ಬೆಳೆಯುತ್ತಿದ್ದಾರೆ. ಅವರು ತಮ್ಮದೆ ಆದ ಜೀವನ ಹೊಂದಿದ್ದಾರೆ. ಈ ದಿನವನ್ನು ಒಟ್ಟಿಗೆ ಕಳೆಯುವುದೇ ಐಷಾರಾಮಿ. ಇದನ್ನು ನಾನು ಸಂಪಾದಿಸಿದ್ದೇನೆ" ಎಂದು ಹೇಳಿದ್ದಾರೆ.

  ಜನರ ಪ್ರೀತಿಯೇ ನನಗೆ ಅತ್ಯುತ್ತಮ ಉಡುಗೊರೆ

  ಜನರ ಪ್ರೀತಿಯೇ ನನಗೆ ಅತ್ಯುತ್ತಮ ಉಡುಗೊರೆ

  "ಜನರಿಗೆ ನಾನು ಸಹಾಯ ಮಾಡಿದಾಗ ಸಿಕ್ಕ ಪ್ರತಿಕ್ರಿಯೆ ಮತ್ತು ಅವರ ಪ್ರೀತಿ ನಾನು ಪಡೆದ ಅತ್ಯುತ್ತಮ ಉಡುಗೊರೆಯಾಗಿದೆ. ನನ್ನ ವಿರುದ್ಧ ಕೆಟ್ಟದಾಗಿ ಪ್ರಚಾರ ಮಾಡುವ ಸಂದೇಹವಾದಿಗಳು ಎಷ್ಟೇ ಪ್ರಯತ್ನ ಪಟ್ಟರೂ ನನ್ನ ಒಳ್ಳೆಯ ಕೆಲಸಗಳು ಅಲ್ಲಿರುವ ನನ್ನ ಹಿತೈಷಿಗಳು ಅನುಮಾನಿಸುವುದಿಲ್ಲ" ಎಂದಿದ್ದಾರೆ.

  ಆದಾಯದ ಬಗ್ಗೆ ಪ್ರಶ್ನೆ ಮಾಡೋರಿಗೆ ಸೋನು ಉತ್ತರ

  ಆದಾಯದ ಬಗ್ಗೆ ಪ್ರಶ್ನೆ ಮಾಡೋರಿಗೆ ಸೋನು ಉತ್ತರ

  ಸೋನು ಸೂದ್ ಅವರಿಗೆ ಹಣ ಎಲ್ಲಿಂದ ಬರುತ್ತೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದ್ದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋನು ಸೂದ್, "ಆ ಬಗ್ಗೆ ಪ್ರಶ್ನೆಗಳನ್ನು ಕೇಳಲಿ, ನಾನು ಉತ್ತರಿಸಬೇಕಾದವರಿಗೆ ನನ್ನ ಬಳಿ ಉತ್ತರಗಳಿವೆ. ನಾನು ಹೆದರುವುದಿಲ್ಲ. ಅನುಮಾನಾಸ್ಪದರು ನನ್ನ ಕೆಲಸದಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ. ನಾನು ಅಗತ್ಯವಿರೋರಿಗೆ ಸಹಾಯ ಮಾಡುವುದನ್ನು ಮುಂದುವರೆಸುತ್ತೇನೆ" ಎಂದು ಹೇಳಿದ್ದಾರೆ.

  English summary
  Real Hero Sonu Sood refutes rumours of buying Rs. 3 cr luxury car for his son.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X