twitter
    For Quick Alerts
    ALLOW NOTIFICATIONS  
    For Daily Alerts

    ಸೋನು ಸೂದ್ ಶ್ರಮ ವ್ಯರ್ಥ, ಸಹೋದರಿಗೆ ಸೋಲು

    |

    ತನ್ನ ನಟನೆ ಮಾತ್ರವಲ್ಲ, ಸಮಾಜ ಸೇವೆಯಿಂದ, ಮಾನವೀಯ ಕಾರ್ಯಗಳಿಂದ ದೇಶದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಸೋನು ಸೂದ್‌ ವಿರುದ್ಧ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್ ಪ್ರಾರಂಭವಾಗಿದೆ.

    ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮಾಡಿದ ಸಾಮಾಜಿಕ ಕಾರ್ಯದಿಂದ 'ದೇವರು' ಎಂಬ ಅನ್ವರ್ಥ ನಾಮ ಪಡೆದಿರುವ ಸೋನು ಸೂದ್‌ ರಾಜಕೀಯ ಕಾರಣದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಎದುರಿಸುವಂತಾಗಿದೆ.

    ಸೋನು ಸೂದ್ ಕಾರು ವಶಪಡಿಸಿಕೊಂಡು ಮನೆಗೆ ಕಳಿಸಿದ ಅಧಿಕಾರಿಗಳು! ಸೋನು ಸೂದ್ ಕಾರು ವಶಪಡಿಸಿಕೊಂಡು ಮನೆಗೆ ಕಳಿಸಿದ ಅಧಿಕಾರಿಗಳು!

    ಸ್ವತಃ ಸೋನು ಸೂದ್ ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ, ಆದರೆ ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್ ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ನಿನ್ನೆ ಮತ ಎಣಿಕೆ ನಡೆದಿದ್ದು, ಸೋನು ಸೂದ್‌ರ ಸಹೋದರಿ ಸೋಲನುಭವಿಸಿದ್ದಾರೆ.

    Sonu Soods Sister Malvika Sood Lost in Punjab Assembly Election

    ಎಂಜಿನಿಯರ್ ಆಗಿರುವ ಮಾಳವಿಕಾ ಸೂದ್ ಪಂಜಾಬ್‌ನ ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಸಹೋದರಿಯ ಪರವಾಗಿ ನಟ ಸೋನು ಸೂದ್ ಸತತ ಪ್ರಚಾರ ನಡೆಸಿದರು. ತಂಗಿಯ ಪರ ತಾರಾ ಪ್ರಚಾರಕರಾಗಿದ್ದ ಸೋನು ಸೂದ್ ಚುನಾವಣೆ ದಿನದ ವರೆಗೆ ಕ್ಷೇತ್ರದಲ್ಲಿಯೇ ಇದ್ದು ಹಳ್ಳಿಗಳಿಗೆ ಸಂಚರಿಸಿ ಪ್ರಚಾರ ಮಾಡಿದ್ದರು. ಸಹೋದರಿಯು ಚುನಾವಣೆ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಮಾಳವಿಕಾ ಸೋಲನ್ನಪ್ಪಿದ್ದಾರೆ.

    ನಟ ಸೋನು ಸೂದ್ ವಿರುದ್ಧ ಎಫ್‌ಐಆರ್ ದಾಖಲು: ಉದ್ದೇಶಪೂರ್ವಕ ಎಂದ ನೆಟ್ಟಿಗರು ನಟ ಸೋನು ಸೂದ್ ವಿರುದ್ಧ ಎಫ್‌ಐಆರ್ ದಾಖಲು: ಉದ್ದೇಶಪೂರ್ವಕ ಎಂದ ನೆಟ್ಟಿಗರು

    ಮಾಳವಿಕಾ ಕಣಕ್ಕೆ ಇಳಿದಿದ್ದ ಮೋಗಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಡಾ ಅಮನ್‌ದೀಪ್ ಕೌರ್ ಅರೋರ ವಿಜಯ ಸಾಧಿಸಿದ್ದಾರೆ. ಮಾಳವಿಕಾ ಸೂದ್ 38,234 ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳದ ಬ್ರಿಜೇಂದರ್ ಸಿಂಗ್ ಇದ್ದಾರೆ. ಇವರು 28,333 ಮತಗಳನ್ನು ಗಳಿಸಿದ್ದಾರೆ. ಮಾಳವಿಕಾ ಸೂದ್ 20 ಸಾವಿರ ಮತಗಳ ಅಂತರದಿಂದ ಸೋಲಪ್ಪಿದ್ದಾರೆ.

    ರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವುರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವು

    ಮಾಳವಿಕಾ ಸೂದ್ ಆಮ್ ಆದ್ಮಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಸೋನು ಸೂದ್ ಸಹ ಎಎಪಿ ಪಕ್ಷಕ್ಕೆ ಆಪ್ತರಾಗಿದ್ದರು. ಕೇಜ್ರಿವಾಲ್‌ ಜೊತೆಯೂ ಒಳ್ಳೆಯ ಬಂಧ ಹೊಂದಿದ್ದರು. ಆದರೆ ತಮ್ಮ ಸಹೋದರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಸಿಎಂ ಚೆನ್ನಿ ಅವರೊಟ್ಟಿಗೆ ಸಹೋದರಿಯೊಂದಿಗೆ ಸಭೆಗಳನ್ನು ನಡೆಸಿ ಬಳಿಕವಷ್ಟೆ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದರು ಸೋನು ಸೂದ್.

    ಮೋಗಾ ಕ್ಷೇತ್ರ ಮಾತ್ರವೇ ಅಲ್ಲ ಇಡೀ ಪಂಜಾಬ್‌ನಲ್ಲಿ ಎಎಪಿ ಭಾರಿ ಜಯಭೇರಿ ಭಾರಿಸಿದೆ. ರಾಜ್ಯದ 117 ವಿಧಾನಸಭೆ ಕ್ಷೇತ್ರಗಳಲ್ಲಿ 92 ಸೀಟುಗಳಲ್ಲಿ ಜಯಭೇರಿ ಭಾರಿಸಿರುವ ಎಎಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಅವಧಿಯಲ್ಲಿ ಸರ್ಕಾರ ರಚಿಸಿದ್ದ ಕಾಂಗ್ರೆಸ್‌ ಗಳಿಸಿರುವುದು ಕೇವಲ 18 ಸೀಟು. ಶಿರೋಮಣಿ ಅಕಾಲಿದಳ ಪಕ್ಷವು ಮೂರು ಕ್ಷೇತ್ರದಲ್ಲಷ್ಟೆ ಗೆದ್ದಿದ್ದರೆ, ಬಿಜೆಪಿ ಗೆದ್ದಿರುವುದು ಎರಡು ಕ್ಷೇತ್ರಗಳಲ್ಲಿ ಮಾತ್ರ.

    English summary
    Sonu Sood's sister Malvika Sood lost in Punjab assembly election. She contested from Moga constituency with congress party ticket.
    Saturday, March 12, 2022, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X