»   » ಮಗಳ ಜೊತೆ ಅಕ್ಕನಾಗಿ ಕಾಣಿಸಲಿರುವ ಶ್ರೀದೇವಿ!

ಮಗಳ ಜೊತೆ ಅಕ್ಕನಾಗಿ ಕಾಣಿಸಲಿರುವ ಶ್ರೀದೇವಿ!

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಏಜ್ ಲೆಸ್ ನಟಿಯಲ್ಲಿ ಶ್ರೀದೇವಿ ಸಹ ಒಬ್ಬರು. ಅವರು ಬಣ್ಣ ಹಚ್ಚಿ ಮೇಕಪ್ ಹಾಕಿದರೆ ಪಡ್ಡೆ ಹೀರೋಗಳೂ ತಾಮುಂದು ನಾಮುಂದು ಎಂದು ಆಕೆ ಜೊತೆ ಅಭಿನಯಿಸಲು ಸಾಲುಗಟ್ಟಿ ನಿಲ್ಲುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಒಂದು ಕಾಲದಲ್ಲಿ ತಮ್ಮ ಮೈಮಾಟ ಹಾಗೂ ಕಣ್ಣುಗಳಲ್ಲೇ ಚಿತ್ರರಸಿಕರನ್ನು ಕೊಂದ ತಾರೆ ಶ್ರೀದೇವಿ. ಇತ್ತೀಚೆಗೆ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಮತ್ತೆ ತಮ್ಮ ಗ್ಲಾಮರ್ ತೆರೆದಿಡುತ್ತಿದ್ದಾರೆ.

Sridevi with daughter

ಆದರೆ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಬಳಿಕ ಶ್ರೀದೇವಿ ಯಾವ ಚಿತ್ರದಲ್ಲೂ ಅಭಿನಯಿಸಲಿಲ್ಲ. ಈಗಲೂ ತಾವು ಪೋಷಕ ಪಾತ್ರಗಳನ್ನು ಮಾಡಲ್ಲ ಎಂದು ಭೀಷ್ಮಪ್ರತಿಜ್ಞೆ ಮಾಡಿದಂತಿದೆ. ಈಗ ಮಗಳ ಜೊತೆ ಅಭಿನಯಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಇದೆ.

ಶ್ರೀದೇವಿ ಪುತ್ರಿ ಜಾನ್ವಿ ಅಮ್ಮನೊಂದಿಗೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾ ಮಾಧ್ಯಮಗಳ ಕಣ್ಣು ಸೆಳೆಯುತ್ತಿದ್ದಾರೆ. ತುಂಡುಡುಗೆಗಳಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಜಾನ್ವಿ ಬೆಳ್ಳಿಪರದೆ ಅಡಿಯಿಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಮ್ಮ ಮಗಳ ಜೋಡಿಯನ್ನು ನೋಡಿದವರು ಇವರಿಬ್ಬರೂ ಅಕ್ಕತಂಗಿ ತರಹ ಕಾಣುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ. ಈ ಮಾತುಗಳಿಂದ ಶ್ರೀದೇವಿ ಮುಖ ಟೊಮ್ಯಾಟೋ ಹಣ್ಣಿನಂತೆ ಕೆಂಪಾಗಿದೆಯಂತೆ. ಜಾನ್ವಿ ಜೊತೆ ಅಕ್ಕನಾಗಿ ಅಭಿನಯಿಸಬೇಕೆಂದು ತನ್ನ ಆತ್ಮೀಯರ ಬಳಿ ಶ್ರೀದೇವಿ ಹೇಳಿಕೊಂಡಿದ್ದಾರಂತೆ. ಆದರೆ ಮುಹೂರ್ತ ಯಾವ ಕೂಡಿಬರುತ್ತದೋ ಏನೋ! (ಏಜೆನ್ಸೀಸ್)

English summary
Sridevi herself told that she will act only if she is given the role of female lead. But now, she accepted the role of sister to Jhanvi in the debut flick of this young celebrity.
Please Wait while comments are loading...