For Quick Alerts
  ALLOW NOTIFICATIONS  
  For Daily Alerts

  ಕೆ.ಎಲ್.ರಾಹುಲ್, ನಟಿ ಆತಿಯಾ ಮದುವೆ ಖಾತ್ರಿ: ದಿನಾಂಕ?

  |

  ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿ ಮುಖಭಂಗ ಅನುಭವಿಸುತ್ತಿರುವ ಕ್ರಿಕೆಟಿಗ ಕೆ.ಎಲ್.ರಾಹುಲ್ ಇದೀಗ ಮದುವೆಯಾಗಲು ಮುಂದಾಗಿದ್ದಾರೆ.

  ಕೆ.ಎಲ್.ರಾಹುಲ್ ಹಾಗೂ ನಟಿ ಆತಿಯಾ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದು, ಹಲವೆಡೆ ಜೊತೆ-ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಇವರ ಮದುವೆ ಬಗ್ಗೆ ಆಗಾಗ ಸುದ್ದಿಯಾಗುತ್ತಿದ್ದಾದರೂ ಯಾವುದೂ ಖಾತ್ರಿಯಾಗಿರಲಿಲ್ಲ. ಆದರೆ ಈಗ ಇಬ್ಬರ ವಿವಾಹದ ಸುದ್ದಿಗೆ ಖಚಿತತೆ ಸಿಕ್ಕಿದೆ.

  ನಟಿ ಆತಿಯಾ ಶೆಟ್ಟಿಯ ತಂದೆ ಸುನಿಲ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದು, ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಶೀಘ್ರವೇ ವಿವಾಹವಾಗಲಿದ್ದಾರೆ ಎಂದಿದ್ದಾರೆ. ಇಬ್ಬರಿಗೂ ಅನುಕೂಲವಾಗುವಂಥಹಾ ದಿನಾಂಕಕ್ಕಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದಿದ್ದಾರೆ. ಶೀಘ್ರವೇ ದಿನಾಂಕ ಹಾಗೂ ಸ್ಥಳ ನಿಗದಿ ಆಗಲಿದೆ ಎಂದಿದ್ದಾರೆ ಸುನಿಲ್ ಶೆಟ್ಟಿ.

  ಕೆಲವು ಮೂಲಗಳ ಪ್ರಕಾರ, ಕೆಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿಯ ವಿವಾಹ ಜನವರಿ 23 ರಂದು ನಡೆಯಲಿದೆ ಎನ್ನಲಾಗುತ್ತಿದೆ. ಮುಂಬೈ ಹಾಗೂ ಬೆಂಗಳೂರು ಎರಡರಲ್ಲಿ ಒಂದೆಡೆ ವಿವಾಹ ಕಾರ್ಯಕ್ರಮ ನಡೆಯುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

  ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮ್ಯಾನ್ ಕೆ.ಎಲ್.ರಾಹುಲ್ ಇತ್ತೀಚೆಗಷ್ಟೆ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಓಪನಿಂಗ್ ಮಾಡಿದ್ದರು. ಆದರೆ ಕಳಪೆ ಪ್ರದರ್ಶನ ತೋರಿದ ಕೆ.ಎಲ್.ರಾಹುಲ್ ವಿರುದ್ಧ ಹಲವು ಟೀಕೆಗಳು ಕೇಳಿ ಬಂದವು.

  ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೆ ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಗೆಳೆಯರೊಟ್ಟಿಗೆ ಕೆ.ಎಲ್.ರಾಹುಲ್ ಭೇಟಿ ನೀಡಿದ್ದು, ಅಲ್ಲಿ ವಿಶೇಷ ಪೂಜೆಗಳನ್ನು ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಈ ವಿಶೇಷ ಪೂಜೆ ಮದುವೆಯ ಕಾರಣಕ್ಕೊ ಅಥವಾ ಕಳಪೆ ಫಾರ್ಮ್‌ನಿಂದ ಹೊರಬರುವ ಕಾರಣಕ್ಕೊ ತಿಳಿದು ಬಂದಿಲ್ಲ.

  ಇನ್ನು ಕೆ.ಎಲ್.ರಾಹುಲ್ ವಿವಾಹವಾಗುತ್ತಿರುವ ಆತಿಯಾ ಶೆಟ್ಟಿ, ಖ್ಯಾತ ನಟ ಸುನಿಲ್ ಶೆಟ್ಟಿಯ ಪುತ್ರಿಯಾಗಿದ್ದು, ಬಾಲಿವುಡ್‌ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಹಿಟ್ ಎಂಬುದು ಆತಿಯಾ ಪಾಲಿಗೆ ದೊರೆತಿಲ್ಲ. 2015 ರಲ್ಲಿ 'ಹೀರೋ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಆತಿಯಾ ಈವರೆಗೆ ನಟಿಸಿರುವುದು ನಾಲ್ಕೇ ಸಿನಿಮಾಗಳಲ್ಲಿ 2019 ರಲ್ಲಿ ಬಿಡುಗಡೆ ಆದ 'ಮೋತಿಚೂರ್-ಚಕನಾಚೂರ್' ಸಿನಿಮಾದ ಬಳಿಕ ಇನ್ನಾವುದೇ ಸಿನಿಮಾಗಳನ್ನು ಆತಿಯಾ ಒಪ್ಪಿಕೊಂಡಿಲ್ಲ.

  English summary
  Sunil Shetty confirms KL Rahul and Athiya Shetty marriage. He said we figuring out suitable dates for the marriage.
  Friday, November 25, 2022, 19:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X