Don't Miss!
- News
'ರಾಜ್ಯದ ಜನ ಮತ್ತೆ ಬಿಎಸ್ ಯಡಿಯೂರಪ್ಪರನ್ನು ನಂಬುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
3 ತಿಂಗಳಲ್ಲಿ ಆತಿಯಾ ಶೆಟ್ಟಿ, ಕೆಎಲ್ ರಾಹುಲ್ ಮದುವೆ?!
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ ಮದುವೆ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಪ್ರೀತಿಯಲ್ಲಿ ಇರುವ ವಿಚಾರ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿವೆ. ಇತ್ತೀಚೆಗೆ ಇವರ ಮದುವೆ ಸುದ್ದಿ ವೈರಲ್ ಆಗುತ್ತಿದೆ.
ಇನ್ನು ಈ ಬಗ್ಗೆ ನಟ ಸುನೀಲ್ ಶೆಟ್ಟಿ ಕೂಡ ಹಲವು ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮದುವೆ ಬಗ್ಗೆ ಆಗಲಿ, ಮಗಳ ಲವ್ ಸ್ಟೋರಿ ಬಗ್ಗೆ ಆಗಲಿ ನಟ ಸುನೀಲ್ ಶೆಟ್ಟಿ ಹೆಚ್ಚಿದಾಗಿ ಏನನ್ನು ಹೇಳಿಲ್ಲ. ಆದರೆ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆಗೆ ಆತಿಯಾ ಸುತ್ತಾಡುತ್ತಲೇ ಇರುತ್ತಾರೆ, ಕ್ಯಾಮೆರಾ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ.
ಮದುವೆ
ತೀರ್ಮಾನ
ಮಗಳು
ಆತಿಯಾಳದ್ದೇ
ಆಗಿರುತ್ತದೆ:
ಸುನಿಲ್
ಶೆಟ್ಟಿ!
ಈಗ ಈ ಮದುವೆ ಸುದ್ದಿ ಎಲ್ಲಾ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಹೊಸ ಮಾಹಿತಿ ನೀಡಿದ್ದಾರೆ ಆತಿಯಾ ಶೆಟ್ಟಿ. ಆತಿಯಾ ಶೆಟ್ಟಿ ಮದುವೆ ಮದುವೆ ಪೋಸ್ಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಅವರ ಪೋಸ್ಟ್‌ನಲ್ಲಿ ಏನಿದೆ? ಎನ್ನುವುದನ್ನು ಮುಂದೆ ಓದಿ...

ಮಗಳ ಮದುವೆ, ಸುನೀಲ್ ಶೆಟ್ಟಿ ಹೇಳಿದ್ದೇನು?
ಇತ್ತೀಚೆಗಷ್ಟೆ ನಟ ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ ಮದುವೆ ಬಗ್ಗೆ ಮಾತನಾಡಿದ್ದರು. ಮದುವೆ ತಯಾರಿ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆತಿಯಾ ಶೆಟ್ಟಿ ಮತ್ತು ರಾಹುಲ್ ಮದುವೆಗೆ ತಯಾರಿ ನಡೆದಿದೆಯಾ ಎನ್ನುವ ಪ್ರಶ್ನೆ ಅವರಿಗೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ಸುನೀಲ್ ಶೆಟ್ಟಿ ಮದುವೆ ತಯಾರಿ ಏನು ಇಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ ಅಪ್ಪನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಆತಿಯಾ ಶೆಟ್ಟಿ 3 ತಿಂಗಳಲ್ಲಿ ಮದುವೆ ಎಂದಿದ್ದಾರೆ.
ಲಾರ್ಡ್ಸ್‌ನಲ್ಲಿ
ರಾಹುಲ್
ಶತಕ,
ಪ್ರೇಮ
ಸಂದೇಶ
ರವಾನಿಸಿದ
ಆತಿಯಾ
ಶೆಟ್ಟಿ

3 ತಿಂಗಳಲ್ಲಿ ಮದುವೆ!
ದಿನೇ ದಿನೆ ಹಬ್ಬುತ್ತಿರುವ ಮದುವೆ ವದಂತಿಗಳಿಗೆ ಆತಿಯಾ ಬ್ರೇಕ್ ಹಾಕಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮದುವೆ ಬಗ್ಗೆ ಬರೆದುಕೊಂಡಿದ್ದಾರೆ. "3 ತಿಂಗಳಲ್ಲಿ ನಡೆಯಲಿರುವ ಈ ಮದುವೆಗೆ ನನಗೆ ಆಹ್ವಾನವಿದೆ ಎಂದು ಭಾವಿಸುತ್ತೆನೆ" ಎಂದು ಬರೆದುಕೊಂಡು ತಲೆಕೆಳಗಾಗಿರುವ ಇಮೋಜಿಯನ್ನು ಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಿಂದ ಆತಿಯಾ ಮತ್ತು ರಾಹುಲ್ ಮದುವೆ ವಿಚಾರ ಮತ್ತಷ್ಟು ಹೆಚ್ಚಾಗಿದೆ.

ಆತಿಯಾ ಪೋಸ್ಟ್ ಯಾವ ಮದುವೆ ಬಗ್ಗೆ?
ಒಂದು ಕಡೆ ನಟಿ ಆತಿಯಾ ಶೆಟ್ಟಿ ಮದುವೆ ಇನ್ನು 3 ತಿಂಗಳಲ್ಲಿ ನಡೆಯಲಿದೆ ಎನ್ನುವ ಹಾಗೆ ಆಕೆಯ ಪೋಸ್ಟ್ ಇದ್ದರೆ. ಮತ್ತೊಂದು ಕಡೆ ಆತಿಯಾ ಶೆಟ್ಟಿ ಯಾವ ಮದುವೆ ಬಗ್ಗೆ ಮಾತನಾಡಿದ್ದಾರೆ ಎನ್ನವ ಬಗ್ಗೆ ಗೊಂದಲ ಶುರುವಾಗಿದೆ. ತನ್ನ ಪೋಸ್ಟ್‌ನಲ್ಲಿ ಆತಿಯಾ ಶೆಟ್ಟಿ, ಮೂರು ತಿಂಗಳಲ್ಲಿ ನಡೆಯುವ ಮದುವೆ ಎಂದು ಬರೆದುಕೊಂಡಿದ್ದಾರೆ. ಇದು ತಮ್ಮ ಮದುವೆ ಬಗ್ಗೆ ಹಾಕಿರುವ ಪೋಸ್ಟ್ ಎಂದು ನೇರವಾಗಿ ಹೇಳಿಕೊಂಡಿಲ್ಲ. ಆದರೆ ಇದು ಆತಿಯಾ ಶೆಟ್ಟಿ ಮತ್ತು ರಾಹುಲ್ ಮದುವೆ ಬಗ್ಗೆಯೇ ಹಾಕಿರುವ ಪೋಸ್ಟ್ ಎನ್ನಲಾಗುತ್ತಿದೆ.

ಆತಿಯಾ ಶೆಟ್ಟಿ, ರಾಹುಲ್ ಲವ್ ಸ್ಟೋರಿ!
ಆತಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಹಿಂದೆಯೂ ತಮ್ಮ ಮಗಳ ಪ್ರೀತಿಗೆ ಬಗ್ಗೆ ಸುನಿಲ್ ಶೆಟ್ಟಿ ಪರೋಕ್ಷವಾಗಿ ಮಾತನಾಡಿದ್ದರು. ಕೆಎಲ್ ರಾಹುಲ್ ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದರು. ಈ ಜೋಡಿ ಕೆಲವೇ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಇನ್ನು ಬಾಂದ್ರಾದ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಹಲವು ಫ್ಲಾಟ್‌ಗಳನ್ನು ಕೆ.ಎಲ್.ರಾಹುಲ್ ಹಾಗೂ ಸುನಿಲ್ ಶೆಟ್ಟಿ ಜಂಟಿಯಾಗಿ ಖರೀದಿಸಿದ್ದು, ಅಪಾರ್ಟ್‌ಮೆಂಟ್‌ನ ಒಂದು ಭಾಗದಲ್ಲಿ ಸುನಿಲ್ ಶೆಟ್ಟಿ ಕುಟುಂಬ ಹಾಗೂ ಮತ್ತೊಂದು ಭಾಗದಲ್ಲಿ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಇರಲಿದ್ದಾರೆ ಎನ್ನಲಾಗಿದೆ.