For Quick Alerts
  ALLOW NOTIFICATIONS  
  For Daily Alerts

  'ಗೂಗಲ್ ಸರ್ಚ್'ನಲ್ಲೂ ಸನ್ನಿ-ಸಲ್ಲುದೇ ದರ್ಬಾರ್

  By ರಮೇಶ್ ಬಿ
  |

  'ಸುಲ್ತಾನ್' ಚಿತ್ರ ಹಿಟ್ ಆಗಿದ್ದೇ ತಡ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೂಡ ಅಕ್ಷರಶಃ ಸುಲ್ತಾನರಾಗಿ ಮೆರೆಯುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಈಗ ಗೂಗಲ್ ನಲ್ಲಿ ಸಹ 'ಸುಲ್ತಾನ್' ಆಗಿ ಮೆರೆಯುತ್ತಿದ್ದಾರೆ.

  ಅತೀ ಹೆಚ್ಚು ಶೋಧಿಸಲ್ಪಟ್ಟ ನಟ-ನಟಿಯರ ಪಟ್ಟಿಯನ್ನು ಇತ್ತೀಚೆಗೆ ಗೂಗಲ್ ಬಿಡುಗಡೆ ಮಾಡಿದ್ದು, ಗೂಗಲ್ ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಬಾಲಿವುಡ್ ಸ್ಟಾರ್ ನಟರಲ್ಲಿ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.[ಸನ್ನಿ ಜೊತೆ ಸಲ್ಮಾನ್ ಸೋದರ ಅರ್ಬಾಜ್ ಖಾನ್ ರೋಮ್ಯಾನ್ಸ್]

  ಜನಪ್ರಿಯ ಸರ್ಚ್ ಎಂಜಿನ್ ಆಗಿರುವ ಗೂಗಲ್ ನಲ್ಲಿ ಈ ಬಾರಿ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಇನ್ನುಳಿದ ಬಾಲಿವುಡ್ ದಿಗ್ಗಜರಾದ ಕಿಂಗ್ ಖಾನ್ ಶಾರುಖ್ ಖಾನ್, ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗು ಅಕ್ಷಯ್ ಕುಮಾರ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.[ಸುಖಿ ಸಂಸಾರದ ಸೀಕ್ರೆಟ್ ಬಿಚ್ಚಿಟ್ಟ ಬೇಬಿ ಡಾಲ್ ಸನ್ನಿ ಲಿಯೋನ್]

  ಇನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 5 ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಟಾಪ್ 10 ನಟರ ಪಟ್ಟಿಯಲ್ಲಿ ಹೃತಿಕ್ ರೋಷನ್, ಶಾಹಿದ್ ಕಪೂರ್, ರಣಬೀರ್ ಕಪೂರ್, ಅಮೀರ್ ಖಾನ್ ಮತ್ತು ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಇದ್ದಾರೆ.

  ಇತ್ತ ನಟಿಮಣಿಯರನ್ನು ನೋಡುವುದಾದರೆ ಹಾಟ್ ಬೆಡಗಿ ಸನ್ನಿ ಲಿಯೋನ್ ಟಾಪ್ ನಲ್ಲಿದ್ದಾರೆ. ಉಳಿದಂತೆ ಕತ್ರಿನಾ ಕೈಫ್, ಕಾಜಲ್ ಅಗರ್ ವಾಲ್, ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಪ್ರಿಯಾಂಕ ಚೋಪ್ರಾ, ತಮನ್ನಾ ಭಾಟಿಯಾ, ಆಲಿಯಾ ಭಟ್ ಹಾಗೂ ಸೋನಾಕ್ಷಿ ಸಿನ್ಹಾ ಅವರು ಟಾಪ್ 10 ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.[ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು]

  ಸಂಗೀತಗಾರರಲ್ಲಿ ಟಾಪ್ 10 ಪಟ್ಟಿಯಲ್ಲಿ ಯೋ ಯೋ ಹನಿಸಿಂಗ್ ಅವರು ಟಾಪ್ ನಲ್ಲಿದ್ದರೆ, ಶ್ರೇಯಾ ಘೋಶಾಲ್, ಸೋನು ನಿಗಮ್, ಅತೀಫ್ ಅಸ್ಲಾಂ, ಲತಾ ಮಂಗೇಶ್ಕರ್, ಹಿಮೇಶ್ ರೆಶಿಮಿಯಾ, ಸುನಿಧಿ ಚೌವಣ್ ಮುಂತಾದವರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  English summary
  According to the latest reports, Bollywood superstar Salman Khan and Sunny Leone have been named the most searched Indian actor and actress respectively in the last decade on Google.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X