»   » ರಾಗಿಣಿ ವರ್ಕ್ ಶಾಪ್ ನಲ್ಲಿ ಸನ್ನಿ ಲಿಯೋನ್ ನರ್ವಸ್

ರಾಗಿಣಿ ವರ್ಕ್ ಶಾಪ್ ನಲ್ಲಿ ಸನ್ನಿ ಲಿಯೋನ್ ನರ್ವಸ್

Posted By:
Subscribe to Filmibeat Kannada

'ಜಿಸ್ಮ್ 2' ಚಿತ್ರದ ಮೂಲಕ ಪ್ರೇಕ್ಷಕರನ್ನು ನರ್ವಸ್ ಮಾಡಿರುವ ಬಾಲಿವುಡ್ ತಾರೆ ಸನ್ನಿ ಲಿಯೋನ್ ಈಗ ಅವರೇ ನರ್ವಸ್ ಆಗಿದ್ದಾರೆ. ಸದ್ಯಕ್ಕೆ ರಾಗಿಣಿ ಎಂಎಂಎಸ್ 2 ಚಿತ್ರಕ್ಕಾಗಿ ಸನ್ನಿ ಲಿಯೋನ್ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ಅಭಿನಯಿಸುವುದಕ್ಕೂ ಮುನ್ನ ರಿಹರ್ಸಲ್ ಮಾಡಿದ್ದಾರೆ. ಇದಕ್ಕಾಗಿ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ವರ್ಕ್ ಶಾಪ್ ಕೂಡ ಆಯೋಜಿಸಿದ್ದರು. ಚಿತ್ರದ ಕೆಲವು ಸನ್ನಿವೇಶಗಳನ್ನು ರಿಹರ್ಸಲ್ ಮಾಡಬೇಕಾದರೆ ಸಿಕ್ಕಾಪಟ್ಟೆ ನರ್ವಸ್ ಆದೆ ಎಂದಿದ್ದಾರೆ ಸನ್ನಿ.


'ರಾಗಿಣಿ ಎಂಎಂಎಸ್ 2' ಚಿತ್ರ 360 ಡಿಗ್ರಿಗಳಷ್ಟು ಅಭಿನಯವನ್ನು ಬಯಸುತ್ತದೆ. ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಅಭಿನಯಿಸಬೇಕಾದರೆ ನರ್ವಸ್ ಆಯಿತು. ಹಲವಾರು ಸ್ತರಗಳಲ್ಲಿ ಭಾವನೆಗಳನು ವ್ಯಕ್ತಪಡಿಸಬೇಕಾಗುತ್ತದೆ ಎನ್ನುತ್ತಾರೆ ಸನ್ನಿ ಲಿಯೋನ್.

ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಒಂದು ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಾರರ್ ಥ್ರಿಲ್ಲರ್ ಚಿತ್ರವಾಗಿರುವ ರಾಗಿಣಿ ಎಂಎಂಎಸ್ 2 ಚಿತ್ರಕ್ಕೆ ಭೂಷಣ್ ಪಟೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಾಗಿಣಿ ಎಂಎಂಎಸ್ ಚಿತ್ರದ ಬಳಿಕ ಸನ್ನಿ ಲಿಯೋನ್ ಕನ್ನಡ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಸನ್ನಿಯನ್ನು ಕನ್ನಡಕ್ಕೆ ಕರೆತರುತ್ತಿರುವ ನಿರ್ಮಾಪಕ ಕೆ ಮಂಜು. ಕನ್ನಡ ಹಾಗೂ ಹಿಂದಿ ದ್ವಿಭಾಷಾ ಚಿತ್ರ ಇದಾಗಿದ್ದು ಸನ್ನಿಗೆ ರು.1.5 ಕೋಟಿ ಸಂಭಾವನೆ ನೀಡಲಾಗಿದೆಯಂತೆ. (ಏಜೆನ್ಸೀಸ್)

English summary
Actress Sunny Leone has started rehearsing for her second Hindi movie, Ragini MMS 2. She says she was nervous during the first few rehearsals.I was nervous because I was going through several emotions when going through the scenes said the actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada