For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಲಿಯೋನಿ ಫಿದಾ, ಗೌರವ ನೀಡಲು ನಿರ್ಧಾರ!

  |

  ನಟಿ, ಮಾಜಿ ನೀಲ ಚಿತ್ರತಾರೆ ಸನ್ನಿ ಲಿಯೋನಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಇಲ್ಲ. ಕರ್ನಾಟಕದಲ್ಲಿಯೂ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ ಈ ನಟಿಗೆ. ಅದರಲ್ಲಿಯೂ ಮಂಡ್ಯದಲ್ಲಂತೂ ಸನ್ನಿ ಲಿಯೋನಿಗೆ ಅಭಿಮಾನಿ ಬಳಗವೇ ಇದೆ.

  ಮೂರು ದಿನದ ಹಿಂದೆ ಮಂಡ್ಯದ ಕೊಮ್ಮೆರಹಳ್ಳಿ ಸನ್ನಿ ಲಿಯೋನಿ ಅಭಿಮಾನಿಗಳು, ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸನ್ನಿ ಲಿಯೋನಿಯ ದೊಡ್ಡ ದೊಡ್ಡ ಕಟೌಟ್ ಹಾಕಿಸಿ, ಅನ್ನ ಸಂತರ್ಪಣೆ ಮಾಡಿದ್ದು ಮಾತ್ರವಲ್ಲದೆ, ಸನ್ನಿಯ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಮಂಡ್ಯ ಹುಡುಗರ ಈ ಸನ್ನಿ ಪ್ರೀತಿಯ ವರದಿಗಳು ವೈರಲ್ ಆಗಿದ್ದವು.

  ಮಂಡ್ಯ ಹುಡುಗರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿರುವ ಸುದ್ದಿ ಸನ್ನಿ ಲಿಯೋನಿಗೆ ತಲುಪಿದ್ದು, ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಫಿದಾ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ, ''ದೇವರೆ, ಇದನ್ನು ನನಗೆ ನಂಬಲು ಸಹ ಸಾಧ್ಯವಾಗುತ್ತಿಲ್ಲ. ನಿಮ್ಮ ಗೌರವ ಸಲ್ಲಿಸಲು ನಾನೂ ಸಹ ಹೋಗಿ ರಕ್ತದಾನ ಮಾಡುತ್ತೇನೆ. ನಿಮಗೆಲ್ಲ ಬಹಳ ಧನ್ಯವಾದಗಳು, ನನ್ನ ಬಗ್ಗೆ ಖುಷಿ ಪಡುವಂತೆ ಮಾಡುತ್ತಿದ್ದೀರಿ. ನಿಮ್ಮನ್ನು ನಾನು ಪ್ರೀತಿಸುತ್ತೇನೆ'' ಎಂದಿದ್ದಾರೆ.

  ಮಂಡ್ಯದ ಕೊಮ್ಮೇರಹಳ್ಳಿಯಲ್ಲಿ ಮೇ 13 ರಂದು ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯ್ತು. ಸನ್ನಿ ಲಿಯೋನಿಯ ದೊಡ್ಡ ಕಟೌಟ್ ನಿಲ್ಲಿಸಿ, ಕಟೌಟ್‌ ಮೇಲೆ 'ಬಡ ಮಕ್ಕಳ ತಾಯಿ' ಎಂದು ಬರೆಸಲಾಗಿತ್ತು. ಕಟೌಟ್‌ ಮುಂದೆ ಕೇಕ್ ಕತ್ತರಿಸಿ ಖುಷಿಯಿಂದ ಸನ್ನಿ ಲಿಯೋನಿ ಹುಟ್ಟುಹಬ್ಬ ಆಚರಿಸಿದರು. ಸನ್ನಿಗೆ ಜಯಕಾರವೂ ಮೊಳಗಿತು. ಬಿರಿಯಾನಿ ಮಾಡಿಸಿ ಉಚಿತವಾಗಿ ಹಂಚಲಾಯ್ತು. ಜೊತೆಗೆ ಸನ್ನಿ ಹೆಸರಲ್ಲಿ ರಕ್ತದಾನ ಶಿಬಿರ ಸಹ ಆಯೋಜಿಸಲಾಗಿತ್ತು.

  ಈ ಕಾರ್ಯಕ್ರಮದ ವರದಿ ರಾಷ್ಟ್ರೀಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿದ್ದು, ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾದ ಮಂಡ್ಯದ ಹುಡುಗರ ಸುದ್ದಿಯನ್ನು ಸನ್ನಿ ಲಿಯೋನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಮಂಡ್ಯದಲ್ಲಿ ಸನ್ನಿ ಲಿಯೋನಿಯ ಅಭಿಮಾನಿಗಳ ಸಂಖ್ಯೆ ಹೆಚ್ಚಿಗಿದೆ. ಮಂಡ್ಯದಲ್ಲಿ ಸನ್ನಿ ಲಿಯೋನಿ ಹೆಸರಲ್ಲಿ ಚಿಕನ್ ಅಂಗಡಿ ಇಟ್ಟಿರುವ ಪ್ರಸಾದ್ ಸಹ ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸನ್ನಿ ಹುಟ್ಟುಹಬ್ಬದಂದು ತನ್ನ ಅಂಗಡಿಗೆ ಬರುವ ಸನ್ನಿ ಅಭಿಮಾನಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಚಿಕನ್ ಮಾರಾಟ ಮಾಡಿದ್ದಾನೆ.

  English summary
  Actress Sunny Leone thanked Mandya fans who celebrated her birthday grandly. Suuny says she also donate blood in respect to her Mandya fans.
  Tuesday, May 17, 2022, 8:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X