For Quick Alerts
  ALLOW NOTIFICATIONS  
  For Daily Alerts

  53ನೇ ವಯಸ್ಸಿನಲ್ಲಿ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಮತ್ತೊಂದು ಮದುವೆ!

  By Harshitha
  |

  ಭಾರತದ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಮತ್ತೊಂದು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 53 ವರ್ಷ ವಯಸ್ಸಿನ ಮಿಲಿಂದ್ ಸೋಮನ್ 27 ವರ್ಷ ವಯಸ್ಸಿನ ಅಂಕಿತಾ ಕೋನ್ವಾರ್ ನ ಇಂದು ವರಿಸಿದ್ದಾರೆ.

  ಮಹಾರಾಷ್ಟ್ರದ ಅಲಿಭಾಗ್ ನಲ್ಲಿ ಇಂದು ಮಿಲಿಂದ್ ಸೋಮನ್ - ಅಂಕಿತಾ ಕೋನ್ವಾರ್ ಮದುವೆ ನಡೆದಿದೆ. ಅಸ್ಸಾಮಿ ಹಾಗೂ ಮರಾಠಿ ಸಂಪ್ರದಾಯದಂತೆ ಇವತ್ತು ವಿವಾಹ ಮಹೋತ್ಸವ ನಡೆದಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ಸಾಕ್ಷಿ ಆದರು.

  ಈಗಾಗಲೇ ಒಂದು ಮದುವೆ ಆಗಿ ವಿಚ್ಛೇದನ ಪಡೆದಿರುವ ಮಿಲಿಂದ್ ಸೋಮನ್, ಇದೀಗ ತನಗಿಂತ ಅರ್ಧದಷ್ಷು ಚಿಕ್ಕ ವಯಸ್ಸಿನ ಹುಡುಗಿ ಅಂಕಿತಾ ರನ್ನ ಕೈ ಹಿಡಿದಿದ್ದಾರೆ. ಮಿಲಿಂದ್-ಅಂಕಿತಾ ಮದುವೆ ಸಂಭ್ರಮದ ಕೆಲ ಫೋಟೋಗಳು ಇಲ್ಲಿವೆ ನೋಡಿ...

  ಹೊಸ ದಾಂಪತ್ಯ ಗೀತೆ

  ಹೊಸ ದಾಂಪತ್ಯ ಗೀತೆ

  53 ವರ್ಷ ವಯಸ್ಸಿನಲ್ಲಿ ಸೂಪರ್ ಮಾಡೆಲ್ ಮಿಲಿಂದ್ ಸೋಮನ್, ತಮ್ಮ ಗರ್ಲ್ ಫ್ರೆಂಡ್ ಅಂಕಿತಾ ಕೋನ್ವಾರ್ ಜೊತೆ ಇಂದು ಹೊಸ ಜೀವನಕ್ಕೆ ಅಡಿಯಿಟ್ಟರು. ಮದುವೆಗಾಗಿ ಗೋಲ್ಡನ್ ಬಾರ್ಡರ್ ಇರುವ ಬಿಳಿ ಸೀರೆಯುಟ್ಟು ಅಂಕಿತಾ ಕಂಗೊಳಿಸಿದ್ರೆ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಲಿಂದ್ ಮಿಂಚಿದರು.

  ಹಳದಿ ಶಾಸ್ತ್ರ

  ಹಳದಿ ಶಾಸ್ತ್ರ

  ಮದುವೆಗೆ ಮುನ್ನ ನಡೆದ ಹಳದಿ ಶಾಸ್ತ್ರದಲ್ಲಿ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೋನ್ವಾರ್ ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದ್ದು ಹೀಗೆ...

  ಮೆಹಂದಿ ಸಂಭ್ರಮ

  ಮೆಹಂದಿ ಸಂಭ್ರಮ

  ಮೆಹಂದಿ ಹಾಗೂ ಸಂಗೀತ್ ಸಮಾರಂಭದಲ್ಲಿ ನವ ಜೋಡಿ ಒಟ್ಟಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು.

  ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ.?

  ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ.?

  ಚೆನ್ನೈನ ನೈಟ್ ಕ್ಲಬ್ ಒಂದರಲ್ಲಿ ಅಂಕಿತಾ ರನ್ನ ನೋಡಿದ್ಮೇಲೆ ಮಿಲಿಂದ್ ಸೋಮನ್ ಗೆ ಲವ್ ಆಟ್ ಫಸ್ಟ್ ಸೈಟ್ ಆಗಿದೆ. ಕೂಡಲೆ ತಮ್ಮ ಫೋನ್ ನಂಬರ್ ನ ಅಂಕಿತಾ ಜೊತೆಗೆ ಮಿಲಿಂದ್ ಶೇರ್ ಮಾಡಿದ್ದಾರೆ. ಫೋನ್ ನಲ್ಲಿ ಮಾತುಕತೆ, ಚಾಟಿಂಗ್ ಹೆಚ್ಚಾಗುತ್ತಿದ್ದಂತೆ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ. ಇಬ್ಬರ ಪ್ರೀತಿಗೆ ಇಂದು ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದೆ.

  ಯಾರು ಈ ಅಂಕಿತಾ ಕೊನ್ವಾರ್.?

  ಯಾರು ಈ ಅಂಕಿತಾ ಕೊನ್ವಾರ್.?

  ಅಸ್ಸಾಮಿ ಮೂಲಕ ಅಂಕಿತಾ ಗಗನಸಖಿ. ಏರ್ ಏಷಿಯಾದಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಗಿನ್ನೂ 27 ವರ್ಷ ವಯಸ್ಸು.

  ವಿಚ್ಛೇದಿತ ಮಿಲಿಂದ್ ಸೋಮನ್

  ವಿಚ್ಛೇದಿತ ಮಿಲಿಂದ್ ಸೋಮನ್

  ಸ್ವಿಮ್ಮರ್, ಮಾಡೆಲ್, ಆಕ್ಟರ್, ಪ್ರೊಡ್ಯೂಸರ್ ಆಗಿರುವ ಮಿಲಿಂದ್ ಸೋಮನ್ 2006 ರಲ್ಲಿ ಫ್ರೆಂಚ್ ನಟಿ Mylene Jampanoi ಜೊತೆ ವಿವಾಹವಾದರು. 2009 ರಲ್ಲಿ ವಿಚ್ಛೇದನ ಪಡೆದ ಮಿಲಿಂದ್, ಶಹಾನಾ ಗೋಸ್ವಾಮಿ ಹಾಗೂ ಮಧು ಸಾಪ್ರೆ ರನ್ನೂ ಡೇಟ್ ಮಾಡಿದ್ದರು.

  English summary
  Super Model-Actor Milind Soman gets hitched to Ankita Konwar. Take a look at the wedding Album.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X