»   » ಮಂಪರು ಪರೀಕ್ಷೆ ಒಲ್ಲೆ ಎಂದ ಜಿಯಾ ಬಾಯ್ ಫ್ರೆಂಡ್

ಮಂಪರು ಪರೀಕ್ಷೆ ಒಲ್ಲೆ ಎಂದ ಜಿಯಾ ಬಾಯ್ ಫ್ರೆಂಡ್

Posted By:
Subscribe to Filmibeat Kannada

ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆಕೆಯ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದು ಗೊತ್ತೇ ಇದೆ. ಸೂರಜ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ಅಧಿಕಾರ ಕೊಡಬೇಕು ಎಂದು ಪೊಲೀಸರು ಇತ್ತೀಚೆಗೆ ಕೋರ್ಟ್ ಮೊರೆ ಹೋಗಿದ್ದಾರೆ.

ಸೂರಜ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೂರಜ್ ಅವರದು ಇನ್ನೂ ಚಿಕ್ಕ ವಯಸ್ಸು. ಈ ವಯಸ್ಸಲ್ಲಿ ತಮ್ಮ ಕಕ್ಷಿದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಸರಿಯಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ.


ಈ ರೀತಿಯ ಯಾತನಾಮಯ ಪರೀಕ್ಷೆಯನ್ನು ಒಪ್ಪಿಕೊಳ್ಳುವುದು ಬಿಡುವುದು ಆರೋಪಿ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಭಾರತೀಯ ಕಾನೂನು ತಿಳಿಸುತ್ತದೆ. ಸೂರಜ್ ಅವರು ಈಗಾಗಲೆ ತಮ್ಮ ವಕೀಲರ ಮೂಲಕ ಮಂಪರು ಪರೀಕ್ಷೆಗೆ ನಕಾರ ಸೂಚಿಸಿದ್ದು, ಆತನ ಮೇಲೆ ಈ ಪರೀಕ್ಷೆ ನಡೆಸಲು ಪೊಲೀಸರಿಗೆ ಸಾಧ್ಯವಾಗಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸದ್ಯಕ್ಕೆ ಸೂರಜ್ ಅವರು ವಿಚಾರಣಾಧೀನ ಖೈದಿಯಾಗಿದ್ದಾರೆ ಸೆರೆಮನೆಯಲ್ಲಿದ್ದಾರೆ. ಈ ಹಿಂದೆ ಸೂರಜ್ ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಲಯ ಜಾಮೀನು ನಿರಾಕರಿಸಿತ್ತು. ಜಾಮೀನು ಕೋರಿ ಅವರು ಬಾಂಬೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. (ಏಜೆನ್ಸೀಸ್)

English summary
The Mumbai Police has recently asked for a special permission from court to put actress Jiah Khan's ex-boyfriend Suraj Pancholi through a narco-analysis test. But Suraj's lawyer has said that his client will not go through this test at such a young age.
Please Wait while comments are loading...