twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್‌ ಜೀವಕ್ಕೆ ಅಪಾಯವಿದೆ ಎಂದು ಮೊದಲೇ ಕೊಟ್ಟಿದ್ದರು ದೂರು!

    |

    ಸುಶಾಂತ್ ಸಿಂಗ್ ರಜಪೂತ್ ಜುಲೈ 14 ಜೂನ್ ರಂದು ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಆತ್ಮಹತ್ಯೆಯ ಸುತ್ತಾ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.

    Recommended Video

    ಶಿವಣ್ಣನ ಮನೆಗೆ ಎಲ್ಲಾ ಹೀರೋಗಳು ಬಂದ್ರು ಆದ್ರೆ ದರ್ಶನ್, ಸುದೀಪ್ ಬರ್ಲಿಲ್ಲ. | Filmibeat Kannada

    ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಸದ, ಮಾಜಿ ಮಂತ್ರಿ ಸುಬ್ರಹ್ಮಣಿಯನ್ ಸ್ವಾಮಿ ಕೆಲವು ಕಾರಣಗಳನ್ನು ಮುಮದಿಟ್ಟು ಹೇಳಿದ್ದಾರೆ.

    ಸುಶಾಂತ್‌ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗಿತ್ತು ಎಂದು ಇನ್ನು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಾವಿಗೆ ಬಾಲಿವುಡ್‌ನ ಸ್ವಜನಪಕ್ಷಪಾತ ಕಾರಣ ಎಂಬ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ಏನೇ ಆಗಲಿ ಪ್ರತಿಭಾವಂತ ನಟನೊಬ್ಬ ಮರೆಯಾಗಿಹೋಗಿದ್ದಾನೆ.

    ಆದರೆ ಸುಶಾಂತ್ ಸಿಂಗ್ ಜೀವಕ್ಕೆ ಅಪಾಯವಿದೆ ಎಂಬ ವಿಷಯ ಆತನ ಕುಟುಂಬದವರಿಗೆ ಮೊದಲೇ ಗೊತ್ತಿತ್ತಂತೆ!

    ಸುಶಾಂತ್ ಜೀವಕ್ಕೆ ಅಪಾಯವಿದೆ ಎಂದು ದೂರು ನೀಡಿದ್ದರು

    ಸುಶಾಂತ್ ಜೀವಕ್ಕೆ ಅಪಾಯವಿದೆ ಎಂದು ದೂರು ನೀಡಿದ್ದರು

    ಸುಶಾಂತ್ ಸಿಂಗ್ ಜೀವಕ್ಕೆ ಅಪಾಯವಿದೆ ಎಂಬುದು ಸುಶಾಂತ್ ಸಿಂಗ್ ಕುಟುಂಬಕ್ಕೆ ಮೊದಲೇ ಗೊತ್ತಿತ್ತಂತೆ. ಈ ಬಗ್ಗೆ ಸುಶಾಂತ್ ಕುಟುಂಬದವರು ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದರಂತೆ. ಆದರೆ ಪೊಲೀಸರು ಆ ಬಗ್ಗೆ ಗಮನವಹಿಸಿಲ್ಲ.

    ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು

    ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರು

    ಸುಶಾಂತ್ ಸಿಂಗ್ ತಂದೆಯ ಪರವಾದ ವಕೀಲರು ಹೇಳಿರುವಂತೆ, ಸುಶಾಂತ್ ಸಿಂಗ್‌ ಕೆಟ್ಟವರ ಸಹವಾಸಕ್ಕೆ ಸಿಕ್ಕಿಬಿಟ್ಟಿದ್ದಾರೆ. ಅವರ ಜೀವಕ್ಕೆ ಅಪಾಯವಿದೆ ಈ ಬಗ್ಗೆ ಗಮನವಹಿಸಿ ಎಂದು ಬಾಂದ್ರಾ ಪೊಲೀಸರಿಗೆ ಸುಶಾಂತ್ ಕುಟುಂಬದವರು ಫೆಬ್ರವರಿ ತಿಂಗಳಿನಲ್ಲಿಯೇ ತಿಳಿಸಿದ್ದರಂತೆ. ಆದರೆ ಪೊಲೀಸರು ಈ ಬಗ್ಗೆ ಗಮನವಹಿಸಿಲ್ಲ.

    ರಿಯಾ ವಿರುದ್ಧ ಕ್ರಮ ಕೈಗೊಂಡಿಲ್ಲ

    ರಿಯಾ ವಿರುದ್ಧ ಕ್ರಮ ಕೈಗೊಂಡಿಲ್ಲ

    'ಕುಟುಂಬದವರೇ ಹೇಳಿದ್ದರೂ ಸಹ ಆ ಬಗ್ಗೆ ಪೊಲೀಸರು ಗಮನವಹಿಸಿಲ್ಲ. ಸುಶಾಂತ್ ಪ್ರೇಯಸಿ ರಿಯಾ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಮುಂಬೈ ಪೊಲೀಸರು ಇಡೀಯ ಪ್ರಕರಣವನ್ನು ಬೇರೆಯದೇ ಕೋನದಲ್ಲಿ ತನಿಖೆ ಮಾಡುತ್ತಿದೆ' ಎಂದು ವಕೀಲ ವಿವೇಕ್ ಸಿಂಗ್ ಹೇಳಿದ್ದಾರೆ.

    'ರಿಯಾ ಚಕ್ರವರ್ತಿಗೆ ಪ್ರಕರಣದೊಂದಿಗೆ ನೇರ ಸಂಪರ್ಕ'

    'ರಿಯಾ ಚಕ್ರವರ್ತಿಗೆ ಪ್ರಕರಣದೊಂದಿಗೆ ನೇರ ಸಂಪರ್ಕ'

    ರಿಯಾ ಚಕ್ರವರ್ತಿಗೆ ಈ ಪ್ರಕರಣದೊಂದಿಗೆ ನೇರ ಸಂಪರ್ಕವಿದೆ ಆದರೆ ಮುಂಬೈ ಪೊಲೀಸರು ರಿಯಾ ಚಕ್ರವರ್ತಿಯ ಕೋನದಿಂದ ತನಿಖೆಯನ್ನೇ ಮಾಡುತ್ತಿಲ್ಲ ಹಾಗಾಗಿ ನಾವು ಬಿಹಾರ ಪೊಲೀಸರ ಬಳಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ವಕೀಲ ವಿವೇಕ್ ಸಿಂಗ್ ಹೇಳಿದ್ದಾರೆ.

    ರಿಯಾ ಹಾಗೂ ಕುಟುಂಬದ ವಿರುದ್ಧ ದೂರುಸ

    ರಿಯಾ ಹಾಗೂ ಕುಟುಂಬದ ವಿರುದ್ಧ ದೂರುಸ

    ರಿಯಾ ಹಾಗೂ ಅವರ ಸಹೋದರ ಶೋವಿಕ್, ಆಕೆಯ ಪೋಷಕರು, ಸುಶಾಂತ್ ವ್ಯವಸ್ಥಾಪಕಿ ಶೃತಿ ಮೋದಿ ವಿರುದ್ಧ ಸುಶಾಂತ್ ತಂದೆ ದೂರು ದಾಖಲಿಸಿದ್ದಾರೆ. ರಿಯಾ ಚಕ್ರವರ್ತಿ ಬಂಧನದ ಭೀತಿ ಎದುರಿಸುತ್ತಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

    English summary
    Actor Sushant Singh family given police complaint in February that Sushant Singh life is in danger.
    Thursday, July 30, 2020, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X