For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಅಭಿಮಾನಿಗಳಿಂದ 'ಬಾಯ್‌ಕಟ್ ರಾಧೇ' ಅಭಿಯಾನ

  |

  ಸಲ್ಮಾನ್ ಖಾನ್ ಅಭಿನಯದ ರಾಧೇ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿರೋಧವೇ ಹೆಚ್ಚಿದೆ.

  ಈ ನಡುವೆ ಸುಶಾಂತ್ ಸಿಂಗ್ ಅಭಿಮಾನಿಗಳ ಆಕ್ರೋಶಕ್ಕೂ ರಾಧೇ ಸಿನಿಮಾ ಗುರಿಯಾಗಿದೆ. ಸುಶಾಂತ್ ಸಿಂಗ್ ಇಲ್ಲದೇ ಬಾಲಿವುಡ್‌ ಇಲ್ಲ, ಸೋ 'ಬಾಯ್‌ಕಟ್ ರಾಧೇ' ಎಂದು ಕೆಲವರು ಸಲ್ಲು ಚಿತ್ರ ವಿರೋಧಿಸಿದ್ದಾರೆ.

  'ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಹಾಳು ಮಾಡಿದ್ದಾರೆ' ಎಂದ ನಟಿ'ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಹಾಳು ಮಾಡಿದ್ದಾರೆ' ಎಂದ ನಟಿ

  ಸುಶಾಂತ್ ಸಿಂಗ್ ಫಾಲೋವರ್ಸ್ ಟ್ವಿಟ್ಟರ್‌ನಲ್ಲಿ Boycottradhe, BoycottBollywood ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಟ್ರೆಂಡಿಂಗ್ ಮಾಡಿದ್ದಾರೆ. ಬಿಟೌನ್ ಪ್ರಭಾವಿಗಳಿಂದ ಸುಶಾಂತ್ ಸಾಯಬೇಕಾಯಿತು. ಆ ಪ್ರಭಾವಿಗಳಲ್ಲಿ ಸಲ್ಮಾನ್ ಖಾನ್ ಸಹ ಇದ್ದಾರೆ ಎಂದು ಟೀಕಿಸುತ್ತಿದ್ದಾರೆ.

  2020 ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡ್ತಿದ್ದು, ಅಂತಿಮ ವರದಿ ಸಲ್ಲಿಸಿಲ್ಲ. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಸುಶಾಂತ್ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೂ ಸುಶಾಂತ್ ಕುಟುಂಬ ಹಾಗೂ ಇನ್ನು ಕೆಲವರು ಇದು ಕೊಲೆ ಎಂದು ಆರೋಪಿಸಿದರು. ಈ ಹಿನ್ನೆಲೆ ಸಿಬಿಐಗೆ ಈ ಕೇಸ್ ವರ್ಗಾಯಿಸಲಾಗಿದೆ.

  'ರಾಧೇ' ಚಿತ್ರವನ್ನು ಪ್ರಭುದೇ ನಿರ್ದೇಶನ ಮಾಡಿದ್ದು, ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಣದೀಪ್ ಹೂಡಾ, ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Late Actor Sushant Singh Rajput Fans Trend 'BoycottRadhe' Hashtag on Twitter after Release of Radhe Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X