For Quick Alerts
  ALLOW NOTIFICATIONS  
  For Daily Alerts

  ಟ್ರೋಲರ್ ಗಳಿಗೆ ಕಪಾಳ ಮೋಕ್ಷ ಮಾಡಿದ ನಟಿ ಸುಶ್ಮಿತಾ ಸೇನ್!

  |

  ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೆಸರು ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಲಲಿತ್ ಮೋದಿ. ಇವರಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಅಧಿಕೃತವಾಗಿ ಲಲಿತ್ ಮೋದಿಯೇ ಡೇಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

  ಇನ್ನು ಇದಕ್ಕೂ ಮೊದಲು ನಟಿ ಸುಶ್ಮಿತಾ ಸೇನ್ ಇತ್ತೀಚೆಗೆ ಹೆಚ್ಚಾಗಿ ಸುದ್ದಿಯಾಗಿದ್ದು ತಮ್ಮ ವೈಯಕ್ತಿಕ ವಿಚಾರದಲ್ಲಿ. ಗೆಳೆಯನೊಂದಿಗೆ ಸುಶ್ಮಿತಾ ಸೇನ್‌ ಬ್ರೇಕಪ್ ಮಾಡಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದ ನಂತ್ರ ಈ ವಿಚಾರವಾಗಿ ಸುಶ್ಮಿತಾ ಸೇನ್ ಮುಕ್ತವಾಗಿ ಮಾತಾಡಿದ್ದರು.

  ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್!ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್!

  ನಟಿ ಸುಶ್ಮಿತಾ ಸೇನ್ ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಹಲ್ ಚಲ್ ಎಬ್ಬಿಸಿದೆ. ಇನ್ನು ಲಲಿತ್ ಮೋದಿ ಸುಶ್ಮಿತಾ ಸೇನ್ ಜೊತೆಗಿನ ಫೋಟೋ ಹಂಚಿಕೊಂಡ ವಿಚಾರ ರಿವೀಲ್ ಮಾಡಿದ್ದಾರೆ. ಆದರೆ ಈಗ ಇವರ ವಯಸ್ಸಿನ ವಿಚಾರವಾಗಿ ಟ್ರೋಲ್ ಆಗ್ತಿದ್ದಾರೆ.

  ದಿನೇ ದಿನೆ ಸುಸ್ಮಿತಾ ಸೆನ್ ಬಗ್ಗೆ ಒಂದಲ್ಲ, ಒಂದು ಟ್ರೋಲ್‌ಗಳು ಹರಿದಾಡುತ್ತಿವೆ. ಹಲವರು ಸುಸ್ಮಿತಾ ಬಗ್ಗೆ ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಲಲಿತ್ ಮೋದಿ ಜೊತೆ ಫೋಟೊ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಸುಶ್ಮಿತಾ ಸೇನ್ ಅವರನ್ನು 'ಗೋಲ್ಡ್ ಡಿಗ್ಗರ್' ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಗೋಲ್ಡ್ ಡಿಗ್ಗರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ಇನ್ನು ವದಂತಿ ಬೆನ್ನಲ್ಲೇ ನಟಿ ಸುಶ್ಮಿತಾ ಸೇನ್ ಪ್ರತಿಕ್ರಿಯೆ ನೀಡಿದ್ದರು. ಮದುವೇನು ಇಲ್ಲ, ರಿಂಗೂ ಇಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಆದರೂ ಸುಶ್ಮಿತಾ ಬಗ್ಗೆ ಕೆಟ್ಟ ಕಮೆಂಟ್ ಮತ್ತು ಟ್ರೋಲ್‌ಗಳು ಹೆಚ್ಚಾಗುತ್ತಿವೆ. ಇದಕ್ಕೆ ಉತ್ತರಿಸಿರುವ ನಟಿ ಸುಶ್ಮಿತಾ, ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ಸುಶ್ಮಿತಾ ಸೇನ್, ನಿಮ್ಮ ಸುಶ್ ಸಂಪೂರ್ಣವಾಗಿ ಚೆನ್ನಾಗಿದ್ದಾಳೆ ಎಂದು ಹೇಳಿದ್ದರು. ಸುಶ್ಮಿತಾ ಪೋಸ್ಟ್‌ಗೆ ಪ್ರಿಯಾಂಕಾ ಚೋಪ್ರಾ, ನೇಹಾ ದೂಪಿಯಾ, ರಣ್ವೀರ್ ಸಿಂಗ್ ಕಾಮೆಂಟ್ ಮಾಡಿದ್ದಾರೆ.

  ಸುಶ್ಮಿತಾ ಸೇನ್ ಜೊತೆಗಿನ ರಿಲೇಷನ್‌ಶಿಪ್‌ನಿಂದ ಹಿಡಿದು, ಐಪಿಎಲ್ ಸೇರಿದಂತೆ ಎಲ್ಲಾ ಟ್ರೋಲ್‌ಗೆ ಉತ್ತರ ನೀಡಿದ್ದಾರೆ. ಎಲ್ಲಾ ಮಾಧ್ಯಮಗಳು ಡೋನಾಲ್ಡ್ ಟ್ರಂಪ್ ರೀತಿ ಸುಳ್ಳು ಸುದ್ದಿ ಹರಡುತ್ತಿದೆ. ಫೋಟೊ ಹಂಚಿಕೊಂಡಿದ್ದೇನೆ ಅದರಲ್ಲಿ ತಪ್ಪೇನು? ಲಂಚ ಪಡೆದು ವಿದೇಶಕ್ಕೆ ಪರಾರಿಯಾಗುವ ಅವಶ್ಯಕತೆ ನನಗಿಲ್ಲ. ನಾನು ಹುಟ್ಟುವಾಗಲೇ ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ. ನನಗ್ಯಾಕೆ ಬೇಕು ಲಂಚ ಎಂದು ಲಲಿತ್ ಮೋದಿ ತಿರುಗೇಟು ನೀಡಿದ್ದಾರೆ.

  English summary
  Sushmita Sen Slaps Who Called Her Gold Digger,
  Tuesday, July 19, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X