»   » 100 ಕೋಟಿ ಕ್ಲಬ್ಬಿಗೆ ತನು ವೆಡ್ಸ್ ಮನು ರಿಟರ್ನ್ಸ್

100 ಕೋಟಿ ಕ್ಲಬ್ಬಿಗೆ ತನು ವೆಡ್ಸ್ ಮನು ರಿಟರ್ನ್ಸ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿರುವ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರ ಮೊದಲ ವಾರದಲ್ಲೇ ಭರ್ಜರಿ ಬೆಳೆ ತೆಗೆದುಕೊಂಡಿದೆ. ಕಂಗನಾ ರನೌತ್ ಹಾಗೂ ಮಾಧವನ್ ಜೋಡಿಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕಳೆದ ದೀಪಾವಳಿ ನಂತರ ಹ್ಯಾಪಿ ನ್ಯೂ ಇಯರ್ ಹಾಗೂ ಪಿಕೆ ಮೂಡಿಸಿದ ಕ್ರೇಜ್ ಈಗ ಕಂಗನಾ ಚಿತ್ರಕ್ಕೂ ಸಿಗುತ್ತಿದೆ.ಚಿತ್ರದ ಕಥೆ ಚೆನ್ನಾಗಿದ್ದರೆ ಕ್ಲಾಸ್ ಹಾಗೂ ಮಾಸ್ ಎರಡನ್ನೂ ಮುಟ್ಟಬಹುದು ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ ಎಂದು ಬಾಕ್ಸಾಫೀಸ್ ವರದಿಗಳು ಹೇಳುತ್ತಿವೆ.

Tanu Weds Manu Returns 10 Days Box Office Report: Fastest Rs 100 Cr Grosser

ಬಿಡುಗಡೆಯಾದ ಮೊದಲ ವಾರದಲ್ಲೇ 100 ಕೋಟಿ ರು ಕ್ಲಬ್ ಸೇರಿದ ತನು ವೆಡ್ಸ್ ಮನು ಚಿತ್ರ ಭಾರತ ಹಾಗೂ ಸಾಗರೋತ್ತರ ಪ್ರದೇಶಗಳ ಗಳಿಕೆ ಲೆಕ್ಕದಂತೆ 101.67 ಕೋಟಿ ರು ಗಳಿಸಿತ್ತು. 10ದಿನಗಳಲ್ಲಿ ಒಟ್ಟಾರೆ 116 ಕೋಟಿ ರು ಗಳಿಸಿ ಅಚ್ಚರಿ ಮೂಡಿಸಿದೆ.

ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ ಶುಕ್ರವಾರ 6.65 ಕೋಟಿ ರು, ಶನಿವಾರ 9.40 ಕೋಟಿ ರು ಹಾಗೂ ಭಾನುವಾರ 11 ಕೋಟಿ ರು ಗಳಿಸಿದೆ. ಎರಡನೇ ವಾರದ ಗಳಿಕೆ ಬಹುತೇಕ 20 ಕೋಟಿ ಮುಟ್ಟಲಿದೆ ಎಂದಿದ್ದಾರೆ.

English summary
Tanu Weds Manu Returns has been doing really well at the Indian Box Office, so much that it is the fastest 100 crores grossing movie this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada